Big Controversy: ಯುವ ಕವಿ ಸಮ್ಮೇಳನಕ್ಕೆ ಬಹಿಷ್ಕಾರ

arif raja

 

 

 

 

 

 

 

 

 

 

ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಆರೀಫ್ ರಾಜಾ ಬರೀತಾರೆ-

(ಕಾರ್ಯಕ್ರಮ ಆಯೋಜಕರಾದ ಕುಮಾರ್ ಕೆ ಎಚ್ ಅವರಿಗೆ ಮೇಲ್ ಮಾಡಿದ ಯಥಾವತ್ತು ಪ್ರತಿ.)

ಮಾನ್ಯ ರಂಗೋತ್ರಿಯ ಕುಮಾರ್ ಅವರೇ,

ರಂಗೋತ್ರಿಯ ಕೆ ಎಚ್ ಕುಮಾರ್

ರಂಗೋತ್ರಿಯ ಕೆ ಎಚ್ ಕುಮಾರ್

ನಿಮ್ಮ ವೈಯಕ್ತಿಕ ಪರಿಚಯ ನನಗೆ ಇಲ್ಲ. ಪ್ರಥಮ ಯುವ ಕವಿ ಸಮ್ಮೇಳನದ ಅಧ್ಯಕ್ಷರು ನೀವಾಗಿದ್ದೀರಿ ಎಂದು ನೀವು ದೂರವಾಣಿ ಮೂಲಕ ತಿಳಿಸಿದ್ರಿ. ಆಗ ನಾನು ನೀವು ಯಾರು ಎಂದು ಪ್ರಶ್ನಿಸಿದೆ. ಬೆಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಕಾರ್ಯಕ್ರಮ ಮಾಡಿಕೊಂಡು ಬಂದಿದೀನಿ ಎಂದು ನೀವು ತಿಳಿಸಿದ್ರಿ. ಬೆಂಗಳೂರಿನ ಹಿರಿಯ ಸಾಹಿತಿಗಳ ಸೂಚನೆ ಮೇರೆಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಿಕರಿಸಿದ್ದೀರಿ.

ತಕ್ಷಣ ಒಪ್ಪಿಕೊಳ್ಳದ ನಾನು ಸ್ವಲ್ಪ ಕಾಲಾವಕಾಶ ಕೇಳಿದೆ. ನೀವು ಹೇಳಿದ ಹಿರಿಯರಲ್ಲೊಬ್ಬರನ್ನು ಖುದ್ದಾಗಿ ಸಂಪರ್ಕಿಸಿ ಖಚಿತಪಡಿಸಿಕೊಂಡ ನಂತರವೇ ನಾನು ಸಮ್ಮೇಳನದ ಅಧ್ಯಕ್ಷತೆಯನ್ನು ಒಪ್ಪಿಕೊಂಡದ್ದು.

ಆದರೆ, ಈಗ ನಿಮ್ಮ ಮೇಲಿನ ಗಂಭೀರ ಆರೋಪಗಳನ್ನು ದಾಖಲೆ ಸಮೇತ ನೋಡಿದ ಮೇಲೂ ಅನಗತ್ಯ ಚರ್ಚೆ ನಗಣ್ಯ ಎಂದು ತೋರುತ್ತದೆ. ಕಾರ್ಯಕ್ರಮಕ್ಕೆ ಬರಲಾಗದ್ದಕ್ಕೆ ಕ್ಷಮೆ ಇರಲಿ. ನನಗೀಗಾಲೇ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿದ ಎಲ್ಲಾ ಯುವ ಲೇಖಕರ ಮೇಲ್ ಗಳನ್ನು ನಿಮಗೆ ಫಾರ್ವರ್ಡ ಮಾಡಿದ್ದೇನೆ.

ಬಹುತೇಕರು ಫೋನ್ ಹಾಗೂ ಫೇಸ್ಬುಕ್ಕಿನ ಮೂಲಕ ಬರಲಾಗದ್ದನ್ನು ತೋಡಿಕೊಂಡಿದ್ದಾರೆ. ಯಾರಿಗೋಸ್ಕರ ಕಾರ್ಯಕ್ರಮ ಮಾಡುತ್ತಿದ್ದೇವೋ ಅವರೇ ಬರುತ್ತಿಲ್ಲವೆಂದ ಮೇಲೆ ಕಾರ್ಯಕ್ರಮಕ್ಕೆ ಯಾವ ಅರ್ಥವೂ ಇಲ್ಲ. ದಯವಿಟ್ಟು ಹಠ ಮಾಡಿ ಮುಂದುವರೆದು ಮುಖಭಂಗ ಅನುಭವಿಸಬೇಡಿ. ನನಗೂ ಮರ್ಯಾದೆಗೇಡು ಮಾಡಬೇಡಿ.

 

ಟಿ ಎಸ್ ಗೊರವರ ಅಭಿಪ್ರಾಯ ಇಲ್ಲಿದೆ

ಆರೀಫ್ ಆಹ್ವಾನ ಪತ್ರಿಕೆ ನೋಡಿ ಖುಷಿಗೊಂಡಿದ್ದೆ. ಇಲ್ಲಿ ಯಾರು ಸುಳ್ಳರು ಯಾರು ಕಳ್ಳರೆಂದೇ ಗೊತ್ತಾಗುತ್ತಿಲ್ಲ.
ಲೇಖಕರೆಂದರೆ ಇಂಟಲಿಜೆಂಟ್ ಡಿಪಾರ್ಟಮೆಂಟ್ ಅಲ್ಲ. ಎಲ್ಲರ ಮಾಹಿತಿಯನ್ನು ಹೊತ್ತು ತಿರುಗಲಿಕ್ಕಾಗುವುದಿಲ್ಲ.
ಈಗ ಕಾರ್ಯಕ್ರಮ ಬಹಿಷ್ಕರಿಸಿದ್ದು ಸರಿಯಾದ ನಡೆ.
ಹೈದ್ರಾಬಾದ್ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನವೂ ನಡೆದಿತ್ತು

ಹೈದ್ರಾಬಾದ್ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನವೂ ನಡೆದಿತ್ತು

ಚಲಂ ಹಾಡ್ಲಹಳ್ಳಿ ಹೇಳಿದ್ದು ಹೀಗೆ-
ನಮ್ಮಲ್ಲಿ ಎಚ್ಚರ ಎಂಬುದು ಸದಾ ಜಾಗ್ರತವಾಗಿರಬೇಕು…ಸಾಹಿತಿಯಾದವನಿಗೆ ಇದು ಹೆಚ್ಚು ಅನ್ವಯಿಸುತ್ತದೆ.
ನಟರಾಜ್ ಹುಳಿಯಾರ್ ಸರ್ ತುಂಬಾ ಜನ ಯುವಕರನ್ನು ಹುರುದುಂಬಿಸುತ್ತಾ ಪ್ರತಿಭೆಯನ್ನು ಹೊರಹಾಕಲು ಕಾರಣರಾದವರು ಎಂಬುದನ್ನು ನನ್ನ ಗೆಳೆಯರು ಹೇಳಿದ್ದಾರೆ. ಅದು ನಿಜವೂ ಹೌದು.
ಆದರೆ ಇಲ್ಲಿ ಎಡವಟ್ಟಾಗಿದ್ದು ಹೇಗೆ..?
ನಟರಾಜ್ ಹುಳಿಯಾರ್ ಸರ್ ಬಗ್ಗೆ ”ಗಾಳಿ ಬೆಳಕು” ವಿನಷ್ಟೇ ಗೌರವ ನನಗೂ ಇದೆ ಎನ್ನುತ್ತಲೇ..
ಕುಮಾರ್ ಎಂಬ ವ್ಯಕ್ತಿಯ ಬಗ್ಗೆ ನನ್ನನ್ನೂ ಸೇರಿದಂತೆ ಹಲವರಿಗೆ ಗೊತ‌್ತಿಲ್ಲ. ಆದರೆ ರಾಜ್ಯ ಮಟ್ಟದ ಒಂದು ಕಾರ್ಯಕ್ರಮ ನಡೆಸುತ್ತಾ ಇದ್ದಾರೆ ಅಂದ ಮೇಲೆ ತಿಳಿಯುವ ಅವಶ್ಯಕತೆ ಖಂಡಿತಾ ಇರುತ್ತದೆ.
ಗೆಳೆಯ T.s. Goravar ರವರು ಲೇಖಕರೆಂದರೆ ಇಂಟಲಿಜನ್ಸ್ ಡಿಪಾರ್ಟ್ ಮೆಂಟ್ ಅಲ್ಲ ಅಂದಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಒಳ್ಳೆಯದು ಕೆಟ್ಟದ್ದು.. ಕಟ್ಟುವವರು.. ಕೆಡುವುವವರು ತಿಳಿಯದ ಮೇಲೆ ಲೇಖಕ ಅಂತ ಯಾಕಾಗಬೇಕು..?

ಬಹುಷಃ Arif Raja ರವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನಿಸಿ,ಅವರೂ ಪರ್ಸನಲ್ ಆಗಿ ತೆಗೆದುಕೊಂಡಿರಬೇಕು.. ಇವೆಲ್ಲಾ ಒಂದು ಅಚ್ಚರಿ ಅನ್ನಿಸದಷ್ಟು ಮುಂದೆ ಸಾಗಿದ್ದೇವೆ.
ನಿಜಕ್ಕೂ ಆರಿಫ್ ರಾಜಾ ಸರಿಯಾದ ನಿರ್ದಾರಕ್ಕೆ ಬಂದಿದ್ದಾರೆ. ಹಿರಿಯರನ್ನು ಗೌರವಿಸುತ್ತಲೇ ಕಣ್ಣು ಮುಚ್ಚಿ ಹಿಂಬಾಲಿಸುವುದನ್ನು ಬಿಡುವುದು ಸರಿ..
ಮತ್ತೊಬ್ಬ ಹಿರಿಯರ ಅಭಿಪ್ರಾಯವೆಂದರೆ ಆರೀಫರನ್ನು ಅಭಿನಂದಿಸುತ್ತಲೇ ಮತ್ತೆ ಬೇರೆ ಕಾರ್ಯಕ್ರಮವನ್ನು ರೂಪಿಸಿ ಆರೀಫರಿಗಾಗಿರುಬಹುದಾದ ಮುಜುಗರವನ್ನು ತಪ್ಪಿಸ ಬಹುದಾಗಿದೆ.
rangotri2
ಚಂದ್ರಶೇಖರ್ ಐಜೂರು ಹೊಸ ಅಭಿಪ್ರಾಯ ಸೇರಿಸಿದ್ದು ಹೀಗೆ
ಮಿತ್ರರೇ, ‘ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ-2015’ರ ಆಯೋಜಕರಾದ ಕೆ.ಎಚ್. ಕುಮಾರ್ ಎಂಬ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣದ ಕುರಿತು ಈಗಷ್ಟೇ ನಟರಾಜ್ ಹುಳಿಯಾರರೊಂದಿಗೆ ಮಾತನಾಡಿದೆ.
ಇಡೀ ಕಾರ್ಯಕ್ರಮವನ್ನು ಶಿಸ್ತಿನಿಂದ ರೂಪಿಸಿಕೊಟ್ಟಿದ್ದ ಹುಳಿಯಾರರಿಗೆ ರಂಗೋತ್ರಿಯ ಕುಮಾರ್ ಬಗ್ಗೆ ಮತ್ತು ಆತನ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕಾರ್ಯಕ್ರಮವನ್ನು ರೂಪಿಸಿಕೊಡುವಂತೆ ಕನ್ನಡದ ಒಂದಿಬ್ಬರು ಕವಿಗಳೊಂದಿಗೆ ಹುಳಿಯಾರರನ್ನು ಈತ ಸಂಪರ್ಕಿಸಿದ್ದು ಬಿಟ್ಟರೆ ಈತನ ಕುರಿತು ಹುಳಿಯಾರರಿಗೂ ಹೆಚ್ಚಿನ ಪರಿಚಯವಿಲ್ಲ.
‘ಸಾರ್ವಜನಿಕವಾಗಿ ಇಂಥ ಗಂಭೀರ ಆರೋಪಗಳು ಬಂದಾಗ ಅದಕ್ಕೆ ಸಾರ್ವಜನಿಕವಾಗಿ ಉತ್ತರವನ್ನು ಕೊಡಬೇಕಾಗುತ್ತದೆ. ಸಾರ್ವಜನಿಕ ಹಣ ತಿನ್ನುವುದು ತಪ್ಪು ಅನ್ನುವುದು ಬಲ್ಲ ಎಲ್ಲರೂ ಇಂಥ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು ಸಹಜ ನಡೆ’ ಎಂದು ಹುಳಿಯಾರರು ಹೇಳಿದರು.
ಯುವಕವಿ ಸಮ್ಮೇಳನಕ್ಕೆ ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿರುವ ಮಿತ್ರರಿಗೆ ಇದಕ್ಕಿಂಥ ಹೆಚ್ಚಿನ ಸ್ಪಷ್ಟನೆಯ ಅಗತ್ಯವಿಲ್ಲವೆಂದು ತಿಳಿಯುವೆ.
rangotri3

‍ಲೇಖಕರು admin

December 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: