ಮೂಲ : ಭಗವಾನ್ ದಾಸ್
ಕನ್ನಡಕ್ಕೆ : ಕೆ ನಾರಾಯಣಸ್ವಾಮಿ
ಹೌದು, ನಾನು ಹೊಲೆಯ, ಮಾದಿಗ, ನನಗೆ ಅಸ್ಪೃಶ್ಯ, ಪಂಚಮ, ದಲಿತ, ಚವಾರ, ಮೋಚಿ, ಭಂಗಿ, ಲಾಲ್‌ಬೇಗಿ, ಮಹಾರ್ ಇತ್ಯಾದಿ ಅನೇಕ ಹೆಸರು ಗಳುಂಟು. ಭಾರತದಲ್ಲಿ ನಾನಿಲ್ಲದಿರುವ ಯಾವ ಮೂಲೆಯೂ ಇಲ್ಲ. ನನ್ನ ಕಥೆಯನ್ನು ತಿಳಿಸಲುನಾನೇ ಬಯಸುತ್ತೇನೆ. ನನ್ನದೇ ಕಥೆ: ನನ್ನದೇ ನಾಲಿಗೆ ನನ್ನ ಕಥೆಯನ್ನು ತಾವು ಯಾರೂ ಕೇಳಿರಲಾರಿರಿ, ಹೇಳುವರು ತಾನೆ ಯಾರು? ಯಾರು ತಾನೆ ಬರೆದಿದ್ದಾರೆ? ಆಳುವ ಕುತೂಹಲವೂ ನಿಮಗಿರಲಾರದು.
ಕಟ್ಟಡಕ್ಕೆ ತಳಪಾಯ ಹೇಗೋ ಹಾಗೆ ದೇಶಕ್ಕೆ ಸಮಾಜಕ್ಕೆ ನಾನು ತಳಪಾಯ ವಿಜೃಂತ, ಇಡೀ ಸಮಾಜದ ಭಾರ ಹೊತ್ತ ನಿಂತಿದ್ದೇನೆ; ಸಮಾಜವೆಂಬ ಏಣಿಯ ಅತ್ಯಂತ ಕೆಳಗಿನ ಮೆಟ್ಟಿಲು ನಾನು, ಬೇಡವಾದುದನ್ನೆಲ್ಲಾ, ಕೊಳಕಾ ಗಿರುವುದನ್ನೆಲೆ. ಅಸಹ್ಯವಾದ ಹೊಲಸನ್ನೆಲ್ಲಾ ಎಲ್ಲರೂ ತುಂಬಿಸುವ ಕಸದ ತೊಟ್ಟಿಯ ಹೌದು ನಾನು: ಊಟ ಮಾಡಿ ಎಸೆಯುವ ಊಟದ ಎಲೆಯೂ ಹೌದು, ಸಮಾಜ ನನ್ನನ್ನು ಮೂಕ, ಕಿವುಡ, ಕುರುಡನನ್ನಾಗಿ ಮಾಡಿ ಹೊಸ್ತಿಲಿನ ಬಳಿಯ ಕಾಲೊರೆಸುವ ಬಟ್ಟೆಯಂತೆ ಬಳಸುತ್ತಿದೆ.
ನಾನು ಒಬ್ಬ ಸಿಪಾಯಿಯೂ ಹೌದು: ರಕ್ಷಿಸುವವನು. ಆದರೆ ಬಂದೂಕು, ಕತ್ತಿ, ಭಲ್ಲೆಗಳು ನನ್ನ ಅಸ್ತ್ರಗಳು. ಅಗತ್ಯಬಿದ್ದಲ್ಲಿ ಅವುಗಳನ್ನೂ ಬಳಸಲು ಸಿದ್ಧ, ಪೊರಕೆ, ಮಕ್ಕರಿ, ಮೂಳೆ, ಮಲಮೂತ್ರ ನನ್ನ ಶಸ್ತ್ರಾಸ್ತ್ರಗಳು, ನಾನು ಭಕ್ತನಲ್ಲ: ಆದರೆ ದೇಶಭಕ್ತ, ಸೈನಿಕ ಬಾಹ್ಯ ಶತೃಗಳಿಂದ ದೇಶವನ್ನು ರಕ್ಷಿಸಿದರೆ, ಪೋಲೀಸಿನವ ಅಂತರಿಕ ಶತೃಗಳೊಡನೆ ಹೋರಾಡಿದರೆ, ಸಹಮಾನವರೆಲ್ಲರೂ ಆರೋಗ್ಯವಾಗಿರಲೆಂದು, ದೀರ್ಘಕಾಲ ಬದುಕಲೆಂದು, ನಿರೋಗಿಗಳಾಗಿರ ಲೆಂದು, ನಾನು ಸದಾ ಹೊಲಸಿನೊಡನೆ ಹೋರಾಡುತ್ತಾ ಬಂದಿದ್ದೇನೆ.

ಯುದ್ಧದ ಸಂದರ್ಭದಲ್ಲಿ ಮಾತ್ರ ಸೈನಿಕನ ಪ್ರಾಣ ಅಪಾಯಕ್ಕೊಳಗಾಗುತ್ತದೆ; ಆದರೆ ನನ್ನ ಪ್ರಾಣ, ಬದುಕು, ಪ್ರತಿಷ್ಠೆ ಪ್ರತಿಕ್ಷಣ ಅಪಾಯದ ಅಂಚಿನಲ್ಲಿಯೇ ಇರುತ್ತದೆ. ಗಂಡಾಂತರದಲ್ಲಿರುತ್ತದೆ. ಸೈನಿಕರನ್ನು ಗೌರವದಿಂದ ಕಂಡರೆ ನನ್ನನ್ನು ಅಸ್ಪೃಶ್ಯತೆಯಿಂದ , ತಿರಸ್ಕಾರದಿಂದ ಕಾಣಲಾಗುತ್ತದೆ. ಭಾರತವನ್ನು ಬಿಟ್ಟೃ ವಿಶ್ವದ ಯಾವುದೇ ಬಾಗದಲ್ಲಿಯೂ ಈ ರೀತಿ ಮನುಷ್ಯನನ್ನು ಕಾಣಲಾಗುವುದಿಲ್ಲ.
ಇದು ಭಾರತಕ್ಕೆ ಮಾತ್ರ ಸೀಮಿತ ಉಚ್ಚ – ನೀಚ, ಮೇಲು – ಕೀಳು ಗಳ ಆಧಾರದ ಮೇಲೆ ನಿಂತಿರುವ, ಸಮಾನತೆ, ಮಾನವೀಯತೆ, ಐಕ್ಯತೆ ವಿರೋಧಿಸುವ ಹಿಂದೂ ಧರ್ಮ ಇದಕ್ಕೆ ಮೂಲ ಕಾರಣ. ವ್ಯಕ್ತಿಯ ನಡತೆ ಮತ್ತು ಯೋಗ್ಯತೆ ಗಳಿಗೆ ಬದಲಾಗಿ ಈ ಧರ್ಮ ಹುಟ್ಟಿ ಗೆ ಅಧಿಕ ಮಹತ್ವ ಕೊಡುತ್ತದೆ. ಶ್ರೇಷ್ಟರು, ಪವಿತ್ರರು ಎಂದು ಹೆಮ್ಮೆ ಪಡುವ ಈ ಧರ್ಮದ ಅನುಯಾಯಿಗಳು ನೈರ್ಮಲ್ಯಕ್ಕೆ, ಸ್ವಚ್ವತೆಗೆ ಬೆಲೆ ಕೊಡುವುದಿಲ್ಲ. ನಾನು ಭಂಗಿ-ಸಮಾಜದಿಂದ ದೆ ರ್ಪಟ್ಟು, ಭಂಗವಾದ ಒಂದು ಅಂಗ.
ಒಂದಾನೊಂದು ಕಾಲದಲ್ಲಿ ಈ ಭೂಮಿಯ ಒಡೆಯನಾಗಿದ್ದು ಕ್ರಮಣ ಗುಲಾ ಮನಾದವನು. ಅಮೇರಿಕಾದ ಮೂಲನಿವಾಸಿಗಳು ಗಿದ್ದು, ಈಗ ಗುಲಾಮ ಗಿರಿಯಲ್ಲಿರುವ ಅಮೇರಿಕದ ರೆಡ್ ಇಂಡಿಯನ್ನರಂತೆ ನಾನೂ ಭಾರತದ ಮೂಲಮಾನವ, ಗುಲಾಮನಾಗಲು ಬಯಸದವ, ಆಕ್ರಮಣಕಾರರ ವಿರುದ್ಧ ಹೋರಾಡಿದನ ರಾಜರು, ಪುರೋಹಿತರಿಗೆ ತಲೆಬಾಗದವ! ಅವರ ದೇವತೆ ಗಳನ್ನು ಪೂಜಿಸದವ ಈ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಬಂದ ಜನಾಂಗ ದಿಂದ ಬೇರ್ಪಟ್ಟ ಅಂಗ ನಾನು!ಆರ್ಯರು ಈ ಪವಿತ್ರ ದೇಶದ ಮೇಲೆ ಧಾಳಿಮಾಡಿ ನನ್ನನ್ನು ಗುಲಾಮ ನನ್ನಾಗಿ ಮಾಡಿಕೊಂಡು ನನ್ನ ತಲೆಯ ಮೇಲಿದ್ದ ಕಿರೀಟಿ ಇಳಿಸಿ, ಮಲ ಮೂತ್ರಗಳ ಮಕ್ಕರಿ ಹೊರಿಸಿದಾಗಿನಿಂದ ನನ್ನ ಕಥೆ ಪ್ರಾರಂಭವಾಗುತ್ತದೆ.






0 Comments