I’m completely VINAYED

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ವಿನಯ್ ಸಾಯ

ಅವರ ಕವಿತೆಗಳು ಇಲ್ಲಿವೆ.

ಈಗ ಅದಕ್ಕೆ ಎಚ್ ಎನ್ ಆರತಿ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ

——————————————————————————————————————————————————————-

ಎಚ್ ಎನ್ ಆರತಿ ಕವಿತೆಯಲ್ಲೇ ಮುಳುಗೆದ್ದವಳು.. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಆರತಿ ದೂರದರ್ಶನ ಕಂಡ ಪ್ರತಿಭಾವಂತರಲ್ಲೊಬ್ಬರು. ಪಾದರಸದ ಚಟುವಟಿಕೆಯ ಈಕೆಯಾ ಕವಿತೆಗಳು ಎದೆಯನ್ನು ಸುತ್ತು ಹಾಕುವ ಶಕ್ತಿಯುಳ್ಳವು.  ಮುಗುಳ್ನಗುವನ್ನು ಬಡಿದು ಬುಟ್ಟಿಗೆ ಹಾಕಿಕೊಂಡವಳು. 

 

I’m completely VINAYED

ಎಚ್ ಎನ್ ಆರತಿ 

ನಿಶ್ಚಲ, ಅಷ್ಟೇ ಚಲನಶೀಲ!
ಅಲ್ಲಲ್ಲಿ ಮಬ್ಬು, ಆದರೆ ಎಲ್ಲಾ ನಿಚ್ಚಳ!
ಅಲ್ಲಿ ನಿಶಬ್ದ, ಮತ್ತೆ ಗಡಚಿಕ್ಕುವ ಧಾವಂತ!
ವಿನಯ್ ಕವಿತೆಗಳ ಲೋಕದಲ್ಲಿ ಕಳೆದುಹೋಗುವ ಸುಖ ನೀಡಿದ ಅವಧಿಗೆ ಧನ್ಯವಾದಗಳು.

ಎಲ್ಲಿಂದಲೋ ಬಂದು, ಏನನ್ನೋ ತಾಕಿ, ಮತ್ತೇನನ್ನೋ ಹೊರಡಿಸುವ ಅರ್ಥವಿಸ್ತಾರದ ಇಂಥ ಕವಿತೆಗಳನ್ನು ಓದಿ, ಅರ್ಧ ಬದುಕಿ, ಇನ್ನರ್ಧ ಸತ್ತೆ!

ಇಂಥ ಧ್ವನಿಪೂರ್ಣ ಕವಿತೆಗಳನ್ನೇ ಓದುತ್ತಾ, ಜೀವಮಾನವನ್ನು ಸುಮ್ಮನೇ ಕಳೆದುಬಿಡಬಹುದು…
ಪುಟ್ಟಿಯ ಚಂದಿರ, ಬಾಡಿಗೆ ತೊಡೆಗಳಾಗುವ ಗಾಢವಿಷಾದ,
ಸಂಶಯದ ಮೋಡ ಹೊತ್ತ ಹುಡುಗಿಯರ ತಲ್ಲಣ,
ಏಳುತ್ತಿರುವ ಕಟ್ಟಡಗಳ ನಡುವೆ ಉಳಿದ ಮರಗಳ ಮೂಕಮರ್ಮರ…
ಅಸಂಖ್ಯ ಸಾಧ್ಯತೆಯ ಹೊಸ ರೂಪಕ, ಹೊಸ ಪ್ರತಿಮೆಗಳಿಂದ ಮುಳುಗೆದ್ದ ತಾಜಾ ಕವಿತೆಗಳಿವು!

ಹಳೆಯ ನೆನಪುಗಳನ್ನ ಹೊದ್ದ ಆಧುನಿಕ ಜಗತ್ತಿನೊಡನೆ ಅವಿನಾಭಾವ ಸಂಬಂಧವನ್ನು ಕಟ್ಟುವ ಈ ಕವಿತೆಗಳ ಶಕ್ತಿ, ಅದರ ಚಿತ್ರಕ ಗುಣ.

ವಿನಯ್ ನ ಕಲಾವಿದನ ಕಾನ್ವಾಸ್ ಕೈಚಳಕ, ಕವಿತೆಗಳಿಗಿವೆ. ಕವಿತೆಯ ಸಾಲುಗಳು ಕಣ್ಣ ಮುಂದೆ slide show ರೀತಿ ವಿವಿಧ ರೂಪಧಾರಿಣಿಯಾಗಿ ತೆರೆದುಕೊಳ್ಳುವಾಗಲೇ, ಅಲ್ಲೊಂದು shift ಸಂಭವಿಸುತ್ತದಲ್ಲಾ, ಅದು “ವಿನಯ್ ನೆಸ್”.

ವಿನಯ್ ಪದ್ಯ ಓದುವುದಕ್ಕೆ ಬಾಲ್ಕನಿಯ ಟಿಕೆಟ್ ಕೊಂಡ ನಾನು, ಹೋರ್ಡಿಂಗ್ ಗಳ ನಡುವೆ, “ನೋಡುವುದಕ್ಕಾಗಿ ಕಣ್ಣು ಮುಚ್ಚುತ್ತೇನೆ!”

ಈ ಪದ್ಯಗಳನ್ನು ಓದಿದ ನಂತರ
I’m completely VINAYED

‍ಲೇಖಕರು avadhi

December 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: