ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಸರಿತಾ..

-ವಿನಾಯಕರಾಮ ಕಲಗಾರು

ಒಂದು ಕಮಲದ ಹೂವಿನ ಜೊತೆ ಮೌನದಲ್ಲೇ ಮಾತನಾಡಿದಷ್ಟು ಖುಷಿ! ಮಲ್ಲಿಗೆಯಷ್ಟು ಮುಗ್ದ ಮನಸ್ಸು. ನಿಮಿಷಕ್ಕೆ ನೂರು ನಗು. ಅದೇ ಮಕರಂದ ಸೂಸುವ ಸೌಜನ್ಯತೆ. ಅದೇ ಒಲವಿನ ಆಪ್ತತೆ. ಯಾವ ಹೊಸಬೆಳಕು ಚಿತ್ರದಲ್ಲಿ ಅವರನ್ನು ಹೇಗೆ ಕಂಡಿದ್ದೆವೋ ಅದಕ್ಕಿಂತ ಸಾವಿರ-ಲಕ್ಷ-ಕೋಟಿಪಟ್ಟು ಕಣ್ಣಳತೆ ತುಂಬಿಕೊಂಡ ಪ್ರೀತಿ ತುಂಬಿದ ನುಡಿಗಳು… ಚೆನ್ನೈ ನಗರದ ಗೋಲ್ಡನ್-ಲೌಲ್ವೀ ಬೀಚ್ ಪಕ್ಕ ಇರುವ ಅವರ ನಿವಾಸದಲ್ಲಿ ಸುಂದರ ಅಲೆಗಳೇ ಎದ್ದು ಮನಸಿಗೆ ಅಪ್ಪಳಿಸಿದಷ್ಟು ಆಪ್ಯಾಯತೆ ತುಂಬಿದ ಸಂಭ್ರಮದ ಸಿಹಿಮುತ್ತುಗಳು. ಅವರು ಮಾತನಾಡುತ್ತಾ ಹೋದಂತೇ ಎಲ್ಲೋ ಒಂದು ಕಡೆ, ತೆರೆದಿದೆ ಮನೆ ಓ… ಬಾ ಅತಿಥಿ ಹಾಡಿನ ಸಾಲುಗಳು ಕಿವಿಯ ಕಡಲಿಗೆ ಅಪ್ಪಳಿಸಿದಷ್ಟು ಹಿತ… ಅವರೇ ಸರಿತಾ, ನಾನೇ ಅವರ ಮುಂದೆ ಕೂತಿರುವ ಸಂಭ್ರಮಿತ ಎಂಬುವುದನ್ನು ನಂಬಲಾರದ ಮಟ್ಟಿಗೆ ಅವರು ಭಾವನೆ ಹಂಚಿಕೊಂಡರು! ಎರಡೂವರೆ ತಾಸು, ಆ ಚೆನ್ನೈನಂಥ ಸುಡುಬಿಸಿಲ ನಗರದಲ್ಲೂ ಹಿತವಾದ ತಂಗಾಳಿ ಮಧ್ಯಾಹ್ನದ ವೇಳಿಗೇ ಬೀಸಿತ್ತಿರುವ ಭ್ರಮೆಯಲ್ಲದ ಬದುಕು… -ಅವರನ್ನು ಮಾತನಾಡಿಸಿ ಹೊರಬಂದ ಒಂದೂವರೆ ತಾಸು ಯಾರ ಜೊತೆಯೂ ಮಾತನಾಡದೇ ಇರಬೇಕೆನಿಸಿತು. ಮೌನಗೀತೆಗೆ ಶರಣಾದೆ. ಅವರ ಅವಿರತ ಪ್ರೀತಿಗೆ ಮೊರೆಹೋದೆ, ನಾನೇ ಮರೆಯಾದೆ!!! -ನಿಮ್ಮ ವಿನಾಯಕರಾಮ!]]>

‍ಲೇಖಕರು G

3 March, 2012

4 Comments

  1. vasudhendra

    ತುಂಬಾ ದಿನದ ನಂತರ ಸರಿತಾರವರ ಫೋಟೋ ನೋಡಿ ಸಂತೋಷವಾಯ್ತು. ಒಳ್ಳೆಯ ನಟಿ. ಅವರ ಹಲವು ಸಿನಿಮಾಗಳನ್ನು ನೆನೆಸಿಕೊಂಡು ನಾನೂ ಭಾವುಕನಾದೆ.

  2. Ramesh Aroli

    ಅಲ್ಲಪ್ಪ ವಿನಾಯಕ ಸಂಭ್ರಮವನ್ನ ನೀನು ಪಟ್ಟಿರೋದರ ಜತೆ ನಮಗೂ ಆ ಸಂ-ದರ್ಶನ ಭಾಗ್ಯ ಅವರದೇ ಮಾತಿನಲ್ಲಿ ಹಂಚಿಕೊಂಡಿದ್ದಾರೆ ಚೆನ್ನಾಗಿತ್ತು. ಇರಲಿ ಮುಂದಿನ ಸಲವಾದರೂ ಹಾಗೆ ಮಾಡ್ತಿಯ ಅಂತ ನಿರೀಕ್ಷಿಸ್ತೇವೆ.

  3. malathi S

    wow its like a breath of fresh air..seeing her after a long long time…fell in love with her after watching the Tamil movie ‘thanneer thanneer’…what soulful emotive eyes….
    Mr. Kalagaru has reminisced the meeting very beautifully!!!

  4. ನಾಗವೇಣಿ ಎ.

    ಸರಿತಾ ಅವರ ಇತ್ತೀಚಿನ ಫೋಟೋ ನೋಡಿ ಖುಷಿಯಾಯ್ತು. ಅವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ. ದಯಮಾಡಿ ಅವರ ವಿವರವಾದ ಸಂದಶಱನವನ್ನು ನಮ್ಮಗಳ ಜೊತೆ ಹಂಚಿಕೊಳ್ಳಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading