ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

2013ನೇ ಸಾಲಿನ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರಕಟ


2013ನೇ ಸಾಲಿನ ಡಾ ಬೆಸಗರಹಳ್ಳಿ ರಾಮಣ್ಣ

ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ ಶ್ರೀಮತಿ ವಿಜಯಮೋಹನ್ ಅವರ ಕೃತಿ ‘ಜಾತಿ’ ಆಯ್ಕೆ


ಈ ಕೃತಿಯನ್ನು ಬೆಂಗಳೂರಿನ ಸಿರಿವರ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ.
ವಿಮರ್ಶಕ ಡಾ. ಮಲ್ಲಿಕಾರ್ಜುನ ಮೇಟಿ, ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ ಮತ್ತು ಶ್ರೀಮತಿ ಹೆಚ್.ಆರ್. ಸುಜಾತ ಅವರುಗಳಿದ್ದ ತೀರ್ಪುಗಾರ ಮಂಡಳಿಯು ‘ಜಾತಿ’ ಕೃತಿಯನ್ನು ಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ (ರೂ. 25,000) ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು 2013 ಜೂನ್ ತಿಂಗಳು 8ರಂದು ಮಂಡ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಹೆಸರಾಂತ ಕತೆಗಾರ, ಸಂಶೋಧಕ ಬೋಳುವಾರು ಮಹಮ್ಮದ್ ಕುಂಞ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಸಿದ್ಧ ಕತೆಗಾರರಾದ ಡಾ. ಅಮರೇಶ ನುಗಡೋಣಿ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿರುವರು.
 

‍ಲೇಖಕರು G

22 May, 2014

4 Comments

  1. anupama prasad

    ಪ್ರಶಸ್ತಿ ಪಡೆದ ಕೃತಿಗೂ ಲೇಖಕಿಗೂ ಆತ್ಮೀಯ ಅಭಿನಂದನೆಗಳು.
    ಅನುಪಮಾ ಪ್ರಸಾದ್

  2. udaykumar habbu

    ಬೆಸಗರಹಳ್ಳಿ ರಾಮಣ್ಣ ಅವರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಪಡೆದ ಶ್ರೀಮತಿ ವಿಜಯಾ ಮೋಹನ ಅವರಿಗೆ ಆಭಿನಂದನೆಗಳು.

  3. lakshmishankarjoshi.

    abhinandanegalu vijaYA MOHAN.

  4. mmshaik

    abhinandanegaLu ma’m..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading