ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆಕುಡಿಯರ ಮಧ್ಯೆ ಮಂಸೋರೆ…

ಕಾವ್ಯ ಅಚ್ಯುತ್ 

ಕುತ್ಲೂರಿನ ಆದಿವಾಸಿ ಮಲೆಕುಡಿಯರ ಜೊತೆ ನಾವು ಇಡೀ ಕಾಡು ಸುತ್ತಿದ್ದೇವೆ. ಕಿಲೋಮೀಟರ್ ಗಟ್ಟಲೆ ಮಲೆ, ತೊರೆಗಳಲ್ಲಿ ಸಲೀಸಾಗಿ ಓಡಾಡುವ ಇವರ ಬಳಿ “ಈ ದಟ್ಟ ಕಾಡಲ್ಲಿ ನೀವು ಹೇಗೆ ಬದುಕ್ತೀರಿ ?” ಎಂದು ಕೇಳುವುದೇ ನಮ್ಮ ಅಹಂಕಾರದ ಪರಮಾವಧಿಯಾಗುತ್ತದೆ. ಇಲ್ಲಿ ಬದುಕಿದವರು ಎಲ್ಲೂ ಬದುಕಬಲ್ಲೆವು. ಆದರೆ ನಾವು ಇಲ್ಲೇ ಬದುಕಬೇಕು ಎಂದು ಸಾಧಿಸಿ ತೋರಿಸಿದವರು. ಈಗ ಇವರ ಬದುಕು ಸಿನೇಮಾ ಕಥೆಯಾಗಿದೆ. ಮಗುವಿನಂತಹ ಮನಸ್ಸಿನ ಮಲೆಕುಡಿಯರು ಬದುಕಿನಲ್ಲಿ ಮೊದಲ ಬಾರಿಗೆ ಥಿಯೇಟರ್ ಪ್ರವೇಶಿಸಿದ್ದಾರೆ.

ಇದೆಲ್ಲವನ್ನು ಸಾಧ್ಯವಾಗಿಸಿದ್ದ ನಮ್ಮ ಪ್ರೀತಿಯ ಖ್ಯಾತ ನಿರ್ದೇಶಕ ಮಂಸೋರೆ ಸರ್. Proud of you sir !

ಕೇವಲ ಸಿನೇಮಾದಲ್ಲಿ ಮಾತ್ರವಲ್ಲದೇ ಬದುಕಿನಲ್ಲೂ ಮಾನವೀಯ ನಿಲುವುಗಳನ್ನು ಹೊಂದಿದ್ದರೆ ಮಾತ್ರ ಇಂತಹ ಆಲೋಚನೆಗಳು ಬರುತ್ತದೆ. ದೂರದ ಕಾಡಿನಿಂದ ಮಲೆಕುಡಿಯರನ್ನು ಕರೆಸಿಕೊಂಡು ಮಾಲ್ ನಲ್ಲಿ ಬಿಡುಗಡೆಗೂ ಮುನ್ನ ಸಿನೇಮಾ ತೋರಿಸಿದ್ದಾರೆ. ಇದೊಂದು ಭಾವುಕ ಕ್ಷಣ.

‍ಲೇಖಕರು avadhi

1 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading