ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಸುರೇಶ್ ಪ್ರಶ್ನೆ..

ಬಿ ಸುರೇಶ

ದೀಪಾಂಜಲಿ ನಗರ ಮತ್ತು ಚಂದ್ರಾ ಬಡಾವಣೆಯ ನಡುವೆ ಬದುಕುವ ಮುದ್ರಣದಲ್ಲಿನ ಬೈಂಡಿಂಗ್ ಕೆಲಸ ಮಾಡುವ ನನ್ನ ಗೆಳೆಯ ಹೀಗೆಂದ… “ನಾನು ಕಳೆದ ಎರಡು ವರ್ಷದಿಂದ ನನ್ನ ಮನೆಯ ಸೋರುತ್ತಿರುವ ಸೂರು ಬದಲಿಸಲು ಎಪ್ಪತ್ತು ಸಾವಿರ ಸಾಲಕ್ಕೆ ಬ್ಯಾಂಕಿಂದ ಬ್ಯಾಂಕಿಗೆ ಓಡಾಡುತ್ತಾ ಇದ್ದೇನೆ. ಆದರೆ ನನ್ನ ಕ್ಷೇತ್ರದಿಂದ ಗೆದ್ದಿರುವ ಎಂಎಲ್‍ಎ ಅವರಿಗೆ 700 ಕೋಟಿ ಸಾಲವೇ ಇದೆಯಂತೆ. ಅವರ ಆಸ್ತಿ 900 ಕೋಟಿಯಂತೆ… ಎಪ್ಪತ್ತು ಸಾವಿರ ಸಾಲ ತೆಗೆದುಕೊಳ್ಳಲಾಗದವನನ್ನು ಏಳುನೂರು ಕೋಟಿ ಸಾಲ ಪಡೆಯುವವನು ಪ್ರತಿನಿಧಿಸಬಹುದೇ?

ದಿನಕ್ಕೆ 150 ಸಂಪಾದಿಸುವ ನನ್ನನ್ನು 900 ಕೋಟಿಯ ಒಡೆಯ ಪ್ರತಿನಿಧಿಸಬಹುದೇ? ನನ್ನ ಸಮಸ್ಯೆಯಾದರೂ ಆತನಿಗೆ ಅರ್ಥವಾದೀತೇ? ನಾನು ಅವನ ಬಳಿ ಮಾತಾಡಲಿಕ್ಕಾದರೂ ಅವಕಾಶ ಸಿಗುತ್ತದೆಯೇ?” ಆತನ ಯಾವ ಪ್ರಶ್ನೆಗೂ ನನ್ನ ಬಳಿ ಉತ್ತರ ಇರಲಿಲ್ಲ. ನಾನು ಆತನಿಗೆ ಸೂರು ಕಟ್ಟಲು ಸಾಲವಾಗಿ ಸಣ್ಣ ಹಣವನ್ನು ಪ್ರತಿ ತಿಂಗಳು ಕೊಡುವೆ ಎಂದೆ. ಆದರೆ ಮಳೆಗಾಲ ಬಂದೇ ಬಿಟ್ಟಿದೆ. ನಾನು ಕಂತಾಗಿ ಕೊಡುವ ಹಣದಲ್ಲಿ ಆತ ಸೂರನ್ನು ಮತ್ತೆ ಮಾಡಿಕೊಳ್ಳಲಾರ… ಆದರೆ ಅವನ ಕ್ಷೇತ್ರದ ಶಾಸಕನಂತೂ ಅಂತಹ ಯಾರಿಗೂ ಸಿಗುವುದಿಲ್ಲ… ಇಂತವರ ಸಮಸ್ಯೆಗೆ ಪರಿಹಾರ ಏನು?

‍ಲೇಖಕರು G

15 May, 2013

6 Comments

  1. Sudhanva

    Waah What a question ?!

  2. hethur nagaraj

    ಸೂರು ಕಟ್ಟಲು ಸಾಲವಾಗಿ ಸಣ್ಣ ಹಣವನ್ನು ಪ್ರತಿ ತಿಂಗಳು ಕೊಡುವೆ ಎಂದೆ.
    ಇದಕ್ಕಿಂತ ಬೇರೆ ಪರಿಹಾರ ಕಾಣುತ್ತಿಲ್ಲ ಸಾರ್…..

  3. katte

    super prashne? But Ans…!?

  4. raveendra

    ನಿಮ್ಮ ಪ್ರಶ್ನೇನೇ ಸರಿಯಿಲ್ಲ ಸಾರ್. ಸೂರು ಕಟ್ಟೋದಕ್ಕೆ ಸರ್ಕಾರ ಯಾಕೆ ಸಾಲ ಕೊಡಬೇಕು. ಶಾಸಕರ ಆಸ್ತಿಗೂ ಬಡವನ ಸಾಲಕ್ಕೂ ಏನು ಸಂಬಂಧ. ಹೀಗೆ ಅರ್ಥವಿಲ್ಲದ ಪ್ರಶ್ನೆ ಕೇಳೋದು ಸುಲಭ. ಅದಕ್ಕೆ ಉತ್ತರ ಇರುವುದಿಲ್ಲ. ನೀವು ಬಡವರಾಗಿರಲಿಲ್ಲವೇ. ಸರ್ಕಾರದ ಸಾಲದಿಂದ ಶ್ರೀಮಂತರಾದಿರೇ. ಲಕ್ಷಾಂತರ ಮಂದಿ ಮನೆ ಕಟ್ಟಿಕೊಂಡದ್ದು ಸರ್ಕಾರದ ಹಣದಿಂದಲೇ. ಬಾಡಿಗೆ ಮನೆಯಲ್ಲಿ ಲಕ್ಷ ಲಕ್ಷ ಮಂದಿ ವಾಸ ಮಡ್ತಿಲ್ಲವೇ. ಈತನಿಗೆ ಸ್ವಂತ ಮನೆಯಾದರೂ ಇದೆಯಲ್ಲ. ನೀವು ಅವನಿಗೆ ಹಣ ಕೊಡುತ್ತೇನೆ ಅಂದಿದ್ದನ್ನು ಪ್ರದರ್ಶಿಸುವುದಕ್ಕೆ ಈ ನೋಟ್ ಬರೆದಂತಿದೆ ಸುರೇಶಣ್ಣ. ಅಷ್ಟಕ್ಕೂ ಅದು ನಿಮ್ಮ ಕರ್ತವ್ಯ ಅಲ್ಲ . ಆದ್ರೂ ಕೊಡ್ತಿದ್ದೀರಿ. ಗ್ರೇಟ್

  5. nagarajhettur

    ಪ್ರಶ್ನೆ ಸರಿ ಇದೆ… ಇದಕ್ಕೆ ಉತ್ತರ ಹುಡುಕಬೇಕಿದೆ. ಯಾಕೆಂದರೆ ಈ ಸಮಸ್ಯೆ ಉಳ್ಳವರದ್ದಲ್ಲ. ಉಳ್ಳದೆ ಇರುವವರದ್ದು. ಈಗಿನ ಬ್ಯಾಂಕುಗಳು ಉಳ್ಳದಿರುವರಿಗೆ ಅಲೆಸುವ ಪರಿ ನೋಡಿದರೆ ಅಥವಾ ಅವರನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಹಾರಿಬಲ್. ಹೀಗಾಗಿ ಇಂತಹ ಪ್ರಶ್ನೆಗಳು ಪ್ರಸ್ತುತವಾಗಿವೆ…ಇಂತಹವರ ಬಗ್ಗೆ ಕಾಮೆಂಟ್ ಮಾಡುವವರು ಯೋಚಿಸುವುದು ಒಳಿತು…

  6. ಲಿಂಗರಾಜು ಬಿ.ಎಸ್.

    ಅದು ಪ್ರಶ್ನೆ ಅಲ್ಲ. ಪರಿಸ್ಥಿತಿ. ಐದು ವರ್ಷಕ್ಕೊಮ್ಮೆ ಮಾತ್ರ ಸಿಗುತ್ತಾರೆ ಎನ್ನುವ ಮಾತಿಗೂ ಈ ಸ್ಥಿತಿಗೂ ನೇರ ಸಂಬಂಧವಿದೆ. ರವೀಂದ್ರ ಅವರ ಪ್ರತಿಕ್ರಿಯೆ ಮಾತ್ರ 1 ರೂ.ಗೆ ಅಕ್ಕಿ ಕೊಟ್ಟರೆ ನಮಗೆ ಕೂಲಿಯಾಳು ಸಿಗುವುದಿಲ್ಲ, ದುಡಿಯುವ ಜನರು ಸೋಮಾರಿಗಳಾಗುತ್ತಾರೆ ಎನ್ನುವಂತಿದೆ. ಆ ಮುದ್ರಣಕಾರನ ಮನಃಸ್ಥಿತಿ ಸಿನಿಕರಿಗೆ ಅರ್ಥವಾಗುವುದಿಲ್ಲ.
    ಸುರೇಶ್ ಅವರು ನೀಡುತ್ತೇನೆಂದ ಕಂತು ಪ್ರದರ್ಶನ ಎಂದೇಕೆ ಭಾವಿಸಬೇಕು. ನಾನೂ ನೀಡುತ್ತೇನೆ. ಮಳೆ ಸುರುವಾಗುವುದರೊಳಗೆ ಮನೆ ಸೂರು ಸರಿ ಮಾಡಿಕೋ ಎಂಬ ಭಾವನೆ ಏಕೆ ಬರಲಿಲ್ಲ ಮಾನ್ಯ ರವೀಂದ್ರರವರ ಪ್ರಶ್ನೆ. ಮಧ್ಯರಾತ್ರಿ ಪಬ್ನಲ್ಲಿ ಹಣ ಪೋಲು ಮಾಡುವವರಿಗೆ ರಸ್ತೆಬದಿ ಚಿತ್ರಾನ್ನ ತಿನ್ನುವವರ ಸ್ಥಿತಿ ಹೇಗೆ ಆರ್ಥವಾಗಬೇಕು ಅಲ್ವಾ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading