ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

10 ರೂ ಶೇ೦ಗಾ ತಿನ್ನುತ್ತಾ ಪಿವಿಆರ್ ನಲ್ಲಿ ಸಿನೆಮಾ ನೋಡುವ ಆಸೆ..

ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚುತ್ತಿರುವ ಚಿತ್ರ ವಿಚಿತ್ರ ರೀತಿಗಳ ಬಗ್ಗೆ ಜಿ ಎನ್ ಅಶೋಕ ವರ್ಧನ ಅವರು ನಿನ್ನೆ ಗಮನ ಸೆಳೆದಿದ್ದರು. ಅದು ಇಲ್ಲಿದೆ.
ಅದಕ್ಕೆ ಹಲವು ದಿಕ್ಕಿನಿಂದ ಪ್ರತಿಕ್ರಿಯೆ ಹರಿದು ಬಂದಿದೆ. ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದನಿ ಎತ್ತಬೇಕಾದ ಅನಿವಾರ್ಯತೆಯನ್ನು ಈ ಪ್ರತಿಕ್ರಿಯೆಗಳು ಎತ್ತಿ ಹೇಳುತ್ತಿವೆ. ಮಲ್ಟಿಪ್ಲೆಕ್ಸ್ ಗಳಿಗೆ ಮೇಲ್  ಕಳಿಸುವ ಚಳವಳಿ ಆರಂಭಿಸಬೇಕು ಎನ್ನುವುದೂ ಇದರಲ್ಲಿ ಒಂದು.
ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇವೆ.
‘ಜುಗಾರಿ ಕ್ರಾಸ್’ ಹೇಳಿ ಕೇಳಿ ಚರ್ಚೆಗೆ ಇರುವ ಜಾಗ. ಬನ್ನಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.

ಹೆಚ್ಚಿನ ಭಾರತೀಯರು ಇಂತಹ ಸಂದರ್ಭದಲ್ಲಿ, ಶಾಪ ಹಾಕಿಯೋ, ತಮ್ಮೊಳಗೇ ಗೊಣಗಿಕೊಂಡೋ ಸುಮ್ಮನಾಗುತ್ತಾರೆ. ಹೀಗೆ “ಯಾವ ದಿಕ್ಕಿಗೋ ಯಾರೊ ಏನೊ ಗುರಿ ಇಡದೆ ಬಿಟ್ಟ ಬಾಣ” ಪ್ರಯೋಗಿಸುವುದು ನಮ್ಮ ರಾಷ್ಟ್ರೀಯ ಗುಣ.
ಸೊಸೈಟಿಯವರು “ಗೋಧಿ ತೆಗೆದುಕೊಂಡರೆ ಮಾತ್ರ ಅಕ್ಕಿ ಕೊಡುತ್ತೇವೆ” ಎಂದು ಹೇಳುವುದನ್ನಾಗಲಿ, ಕ್ಷೌರಿಕ “ಮೀಸೆ ತೆಗೆಸುವುದಾದರೆ ಮಾತ್ರ ಗಡ್ಡ ಬೋಳಿಸುತ್ತೇನೆ” ಎನ್ನುವುದನ್ನಾಗಲಿ ಕಾನೂನು ಒಪ್ಪುವುದಿಲ್ಲ ಎಂದು ಕೇಳಿದ್ದೇನೆ. ಇದೂ ಅದೇ ವರ್ಗದ ಸಮಸ್ಯೆ. ಬಸ್ಸಿನೊಳಗೆ ಪ್ರಯಾಣ ಮಾಡಬೇಕಾದರೆ ಅದರೊಳಗೆ ಕಿರಿಚುವ ಸಿನಿಮಾ ಹಾಡುಗಳನ್ನು ಕೇಳತಕ್ಕದ್ದೆಂದು ಯಾವ ಬಸ್ ಮಾಲಿಕನೂ ವಿಧಿಸುವಂತಿಲ್ಲ.
ಆದರೆ ಇವೆಲ್ಲ ಜಾರಿಗೆ ಬರಬೇಕಾದರೆ ನಾವು ಪ್ರಯತ್ನ ಮಾಡಬೇಕಾಗುತ್ತದೆ, ಈಗ ನೀವು ಮಾಡಿರುವ ಹಾಗೆ. ಪತ್ರಿಕೆಗಳಲ್ಲಿ ಬರೆದು, ಬೊಬ್ಬೆ ಹಾಕಿ, ಪ್ರಯೋಜನವಿಲ್ಲ. ನಿಮ್ಮ ಪ್ರಯತ್ನ ಮುಂದುವರಿಸಿ. ಅದು ಖಂಡಿತ ಫಲ ಕೊಡುತ್ತದೆ ಎಂದು ನನಗೆ ನಂಬಿಕೆ ಇದೆ.

-ಎಚ್. ಸುಂದರ ರಾವ್

 
This is true for every other mall. Would like to know how we can file a PIL for this. Popcorn worth 5 rupees is sold for 60-70 rupees and everyone buys without any complaint. There must be a way out.
Even the ticket prices are exorbitant. Heard in Chennai the rates aren’t that high. How can we make that happen in Karnataka?

ಎಂ ಜಿ ರಾಧಿಕಾ

 
ಹೌದು ನಮಗೊ೦ದು ಇ೦ತಹ ವ್ಯಕ್ತಿ ಸ್ವಾತ೦ತ್ರ್ಯದ ಕಾಯಿದೆ ಅರ್ಜೆ೦ಟಾಗಿ ಬೇಕಾಗಿದೆ.
ನನಗೂ 40 ರೂಪಾಯಿ ಸಮೋಸನೋ, 100 ರೂಪಾಯಿ ಪಾಪ್ ಕಾರ್ನ್ ತಿನ್ನುವ ಬದಲು 10 ರೂ ಶೇ೦ಗಾ ತಿನ್ನುತ್ತಾ ಪಿವಿಆರ್ ನಲ್ಲಿ ಸಿನೆಮಾ ನೋಡುವ ಆಸೆ ಇದೆ.

ಪ್ರಮೋದ್ ಎಂ ಸಿ


ಈಗಷ್ಟೇ ವಾಣಿಜ್ಯ ಕರ ಇಲಾಖೆಯಿಂದ ತಿಳಿದು ಬಂದಂತೆ: ಇದು ಅವರ ಪರಿಮಿತಿಯಿಂದ ಹೊರಗಿನದಂತೆ. ಅವರು ಕೇವಲ ಮನರಂಜನಾ ಕರ ಮತ್ತಲ್ಲಿನ ಮಳಿಗೆಗಳಲ್ಲಿ ಮಾರಾಟ ಕರ ಅಥವಾ ಸೇವಾ ಕರ ಸಂಗ್ರಹದಲ್ಲಿ ವ್ಯತ್ಯಯವಾಗದಂತೆ ಮಾತ್ರ ನಿಗಾವಹಿಸಬಲ್ಲರಂತೆ.
ಜಿಲ್ಲಾಧಿಕಾರಿಯವರೇ ಇದಕ್ಕೆ ಜವಾಬ್ದಾರರು ಎಂದು ತಿಳಿದು ಬಂದದ್ದರಿಂದ, ಅವರಿಗೇ ಸವಿವರ ದೂರು ಕೊಡುವುದರೊಂದಿಗೆ “ತಾವು ಈ ವಿಶ್ಲೇಷಣೆಯನ್ನು ಎಲ್ಲಾ ಥಿಯೇಟರ್ ಗಳಿಗೂ ಅನ್ವಯಿಸಿ ತಮ್ಮ ಪರವಾನಗಿಯನ್ನು ಮರುಪರಿಶೀಲಿಸಿ, ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ” ಎಂದು ಮುಗಿಸಿದ್ದೇನೆ. ಜಿಲ್ಲಾಧಿಕಾರಿ ಕಛೇರಿಯಿಂದ ಸ್ವೀಕೃತಿ ಪತ್ರವನ್ನೂ ಪಡೆದಿದ್ದೇನೆ.
ರಾಧಿಕಾ ಮತ್ತು ಪ್ರಮೋದ್ ನಿಮ್ಮ ನಿಮ್ಮೂರಿನಲ್ಲಿ ನನ್ನದೇ ಮಾದರಿಯಲ್ಲಿ ಮುಂದುವರಿಯಬಹುದೆಂದು ನನಗನ್ನಿಸುತ್ತದೆ. ನಿನ್ನೆ ಬಳಕೆದಾರರ ನ್ಯಾಯಲಯದ ಕ್ರಮಗಳ ಬಗ್ಗೆ ವಿಚಾರಿಸಿದೆ. ಅದೂ ಅಥವಾ PIL ತುಂಬ ಬಳಸುದಾರಿ ಅನ್ನಿಸಿತು – ಅನಿವಾರ್ಯವಾದರೆ ಅಂತಿಮ ಸುತ್ತಿಗಿಟ್ಟುಕೊಳ್ಳಬಹುದು.

ಅಶೋಕವರ್ಧನ ಜಿ.ಎನ್


ರಾಧಿಕಾ ಅವರೇ, ಹೌದು ಚೆನ್ನೈನಲ್ಲಿ ದರಗಳ ಕುರಿತಾಗಿ ನಿಯಂತ್ರಣ ಇದೆ. ಅದಕ್ಕೆ ಅಲ್ಲಿನ ಸರಕಾರವೇ ಒಂದು ಕಾನೂನನ್ನು ಜಾರಿಗೆ ತಂದಿದೆ. ಕಾನೂನಿನ ವಿವರಗಳನ್ನು ಪಡೆಯಲು ಯತ್ನಿಸುತ್ತಿದ್ದೇನೆ. ನಮ್ಮಲ್ಲಿ ಇಂಥಾ ಒಂದು ಕಾನೂನನ್ನೇ ಮಾಡಿಸುವುದು ಅಗತ್ಯ.

ಅಭಯ ಸಿಂಹ


ಮಾಲ್‌ ಗಳಲ್ಲಿ ಇರುವ ಎಲ್ಲ ಸಿನಿಮಾ ಮಂದಿರಗಳಲ್ಲಿಯೂ ನೀವು ವಿವರಿಸಿದಂಥ ಕೆಟ್ಟ ಪರಿಪಾಠವಿದೆ. ನಾನೂ ಪ್ರತಿಭಟಿಸಿದ್ದೇನೆ.
ಅಲ್ಲಿ ಸಿನಿಮಾ ವೀಕ್ಷಣೆ ಅನುಭವ ಚೆನ್ನಾಗಿತ್ತದೆ. ಆದರೆ ಇದೇ ಮಾತನ್ನು ಅಲ್ಲಿ ಮಾರಾಟ ಮಾಡುವ ತಿನಿಸು- ಪಾನೀಯಗಳಿಗೂ ಹೇಳಲು ಆಗುವುದಿಲ್ಲ. ಮಾಮೂಲಿ ದರದ ಮೂರು ಪಟ್ಟು, ಕೆಲವೊಮ್ಮೆ ನಾಲ್ಕು ಪಟ್ಟು ಹೆಚ್ಚು ಹಣ ತೆತ್ತು ಖರೀದಿಸಬೇಕು. ಇದಕ್ಕೆ ಕಾನೂನಿನ ಚಾಟಿ ಏಟು ಬೇಕು. ಹೊಡೆಯುವವರಾರು ಎಂಬುದು ಪ್ರಶ್ನೆ.
ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಇಂಥ ವಿಚಾರದ ಬಗ್ಗೆ ಗಮನಹರಿಸುವಷ್ಟು ವ್ಯವಧಾನ ಇದೆಯೇ… ?
ಪಟ್ಟುಬಿಡದೆ ಕಾನೂನಿನ ಹೋರಾಟಕ್ಕೆ ಮುಂದಾದ ಅಶೋಕವರ್ಧನ ಅವರಿಗೆ ಅಭಿನಂದನೆ

ಕುಮಾರ ರೈತ


ನಿಜವಾದ ಕಾಳಜಿಯುಳ್ಳ ಎಲ್ಲರೂ ಸಿನೆಪೊಲಿಸ್ ಗೆ ಈ ಕುರಿತು ಒಂದು ಈ ಮೇಲ್ ಕಳುಹಿಸಿ. ಮಾಲ್‌ಗಳಲ್ಲಿ ವ್ಯವಹಾರಕ್ಕಿಳಿದಿರುವ ಮಂದಿ ಸಾರ್ವಜನಿಕ ಅಭಿಪ್ರಾಯಕ್ಕೆ ಬೆಲೆಕೊಡುತ್ತಾರೆ. ಇಂಥ ಕಾನೂನು ಬಾಹಿರವಾದ ಕಟ್ಟಳೆಯನ್ನು ತಮ್ಮ ಗ್ರಾಹಕರ ಮೇಲೆ ಹೇರುವುದು ತಪ್ಪೆಂಬ ಅರಿವು ಅವರಲ್ಲಿ ಮೂಡಿಸಬೇಕು.
ನಾವು ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದಕ್ಕೇ ಆಲಸ್ಯ ತೋರುವುದರಿಂದ ಇವೆಲ್ಲ ಸ್ವೀಕೃತವಾದ ಪದ್ಧತಿಗಳಂತೆ ಚಾಲ್ತಿಯಲ್ಲಿ ನಿಲ್ಲುತ್ತವೆ. ಸಭ್ಯ ರೀತಿಯ ಪ್ರತಿರೋಧಕ್ಕಿರುವ ಶಕ್ತಿ ಯಾವುದಕ್ಕೂ ಇಲ್ಲ. ಪ್ರಯತ್ನಿಸಿ ನೋಡಿ, ಅಶೋಕರಿಗೆ ಪ್ರತ್ಯುತ್ತರವೂ ಬರುತ್ತದೆ, ಈ ಕ್ರಮದ ಸಡಿಲಿಕೆಯೂ ಆಗುತ್ತದೆ. ಸಿಸೆಪೊಲಿಸ್ ಈಮೇಲ್ ವಿಳಾಸ ಹೀಗಿದೆ: cc@cinepolis.com

ನರೇಂದ್ರ ಪೈ


ಇಲ್ಲಿ “ಭದ್ರತಾ ಪರೀಕ್ಷೆ” ಮುಖ್ಯ. ಸಿನಿಮಾ ಟಾಕೀಸಿನಲ್ಲಿ ಗ್ರಾಹಕನ ಟಿಕೆಟ್ ಪರೀಕ್ಷಿಸಲು ಅಧಿಕಾರ ಇದೆ ಎಂದು ಒಪ್ಪಿಕೊಳ್ಳೋಣ. ಆದರೆ ವ್ಯಕ್ತಿಗಳನ್ನು (ಎಂದರೆ ಒಬ್ಬ ಖಾಸಗಿ ವ್ಯಕ್ತಿಯನ್ನು ಇನ್ನೊಬ್ಬ ಖಾಸಗಿ ವ್ಯಕ್ತಿ/ಸಂಸ್ಥೆ) “ಭದ್ರತಾ ಪರೀಕ್ಷೆ”ಗೆ ಒಳಪಡಿಸಬಹುದೇ? ಯಾವ ಕಾನೂನಿನ ಅಡಿಯಲ್ಲಿ? ಯಾವ ಸಂದರ್ಭದಲ್ಲಿ?
ಬೆಂಗಳೂರು ಬಸ್ ಸ್ಟ್ಯಾಂಡಿನಲ್ಲಿ ಒಂದು ಬಗೆಯ “ಭದ್ರತಾ ಪರೀಕ್ಷೆ” ಇದೆಯಷ್ಟೆ. ಈ ಭದ್ರತಾ ಪರೀಕ್ಷೆಯನ್ನು ಮಾಡಲು ಅವರು ಯಾರಿಂದ ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಉತ್ತರ ಸಿಗುವ ಸಾಧ್ಯತೆ ಇದೆ.
ವಿಮಾನ ನಿಲ್ದಾಣದ ಉನ್ನತ ಅಧಿಕಾರಿಗಳಿಗೂ ಈ ಮಾಹಿತಿ ಇರಬಹುದು. ಮಂಗಳೂರಿನ ಉನ್ನತ ಪೋಲಿಸ್ ಅಧಿಕಾರಿಗಳಲ್ಲಿ ಸ್ವತಃ ಹೋಗಿ ಮಾತಾಡಿದರೂ ಈ ಮಾಹಿತಿ ಸಿಗಬಹುದು. ಇಬ್ಬರು ಅಥವಾ ಮೂವರು ಒಟ್ಟಾಗಿ ಹೋಗುವುದು ಒಳ್ಳೆಯದು. ನೋಡೋಣ.
ಕೆ ಎಸ್ ಆರ್ ಟಿ ಸಿಯಿಂದ ಮಾಹಿತಿ ಪಡೆಯಲು ನಾನು ಅರ್ಜಿ ಸಲ್ಲಿಸುತ್ತೇನೆ

ಎಚ್. ಸುಂದರ ರಾವ್

 
ನನ್ನ ಪುಟ್ಟ ಮಗು ಕಾರ್ನ್ (ಬೇಯಿಸಿದ ಜೋಳ) ಬೇಕೇ ಬೇಕು ಎಂದು ಹಠ ಹಿಡಿದಳು.
ಅವಳಿಗೆ ಕೊಡಿಸಿ ಸಿನೆಮಾ ಥೀಯೇಟರ್ ಒಳಗೆ ಹೋಗುವಾಗ, ಅಲ್ಲಿಯವರು ಅದನ್ನು ಎಸೆದು ಒಳಬರಬೇಕೆಂದು ಪಟ್ಟು ಹಿಡಿದರು.
ಬಹಳ ಬೇಸರವಾಯಿತು.
ಬಿಸಾಕಿ ಒಳ ಬಂದೆವು, ಮತ್ತೆ ಮಗಳ ಗಲಾಟೆ.
ಈಗ ಚಿತ್ರಮಂದಿರದೊಳಗೆ ಅದು ಇಲ್ಲ. ಏನು ಮಾಡಲಿ.
ಇಲ್ಲಿ ಪ್ರಶ್ನೆಯೆಂದರೆ ನಮ್ಮ ತಿನಿಸುಗಳನ್ನು ಒಳ ಬಿಡಬಾರದೆಂದು ಯಾವ ಆಧಾರದ ಮೇಲೆ ನಿಷೇಧ ಹೇರಿದ್ದಾರೆ?
ನಿಮ್ಮ ಖಾಳಜಿ ನನಗೆ ಬಹಳ ಇಷ್ಟವಾಯಿತು. ಈಗಲೇ ನಾನು ಇಮೇಲ್ ಕಳುಹಿಸುತ್ತಿದ್ದೇನೆ.
For inox, please write mail to……
contact@inox.co.in
Santhoshkumar LM
 





‍ಲೇಖಕರು G

4 January, 2013

5 Comments

  1. samyuktha

    ನೆನ್ನೆ ನೋಡಲು ಮಿಸ್ ಮಾಡಿದ್ದೆ ಈ ಪೋಸ್ಟ್! ಇದು ತುಂಬಾ ನಿಜ. ಪ್ರತಿ ಬಾರಿ ನಾವು ಮಲ್ಟಿಪ್ಲೆಕ್ಸ್ ಗೆ ಹೋದಾಗಲೂ ಇದೇ ಅನುಭವವಾಗಿ, ಸಿಟ್ಟೇರಿ, ಕೊನೆಗೆ ಅಸಹಾಯಕಳಾಗಿ ಮರಳಿದ್ದುಂಟು!! ಇದು ಸುಲಿಗೆಯಲ್ಲದೆ ಬೇರೇನೂ ಅಲ್ಲ!

  2. Radhika

    I think we need some experts to clarify. Is it that the cinemas are free to lay down rules for us OR there is someone above them, someone in state government who has the power to question them. It’s indeed an attack on our independence. Forget about food items, even we are not allowed to carry water bottles. If we have children with us, we literally have to beg them to allow us to carry fruits and water. Just writing a mail to the Cinemas may not really solve the issue. It’s complete change of rules which is needed, without compromising on the security issue (if that’s what is their worry!). Otherwise, even selling food items at reasonable rates than unrealistic rates should also be helpful.

  3. ಹರಿ

    Fyi..(Mail i got through FW…originally by Shivashankar Madri)
    About Service Tax….. how the restaurants loot your money … Be aware
    Ramanathan Hariharan updated his status: “Surprisingly after reading about the “Service Tax”, I strongly decided to share this information to everyone.
    This happened at the restaurant. Let me explain.
    We had been to several restaurants recently. I observed that “service tax” has been mis-used and charged to the customers like you and me.
    Let me give an example.
    Food and Beverage = Rs. 1000.00
    Service Charges @ 10% = Rs. 100.00 (10% on the Food and beverage amount)
    Service Tax @ 4.94% = Rs. 54.34 (4.94% on F&B + Service Charges)
    VAT @14.5% = Rs. 145.00
    Total = Rs. 1299.34
    As per the definition – “Service Tax can be charged only for the services provided to the customer”.
    Now, see what is happening here in the above said example.
    Service Tax should be charged only on the Service Charges amount i.e Rs.100 and not on the entire amount (1000+100).
    In this example, the customer should be charged only Rs 4.94, whereas he has been charged Rs. 49.40 extra.
    Where does this money go? Only the restaurant owner and the chartered accountants who work for them know.
    So, I have started asking them the questions – and surprised to see the reactions from the famous restaurants.
    Either they say:
    Sir we cannot change the format of the bill – so , we will recalculate and tell you the revised amount. You may pay only that.
    Sir, you do not need to pay the Service Tax amount itself.
    I now have 3 to 4 restaurant bills, for which I have paid onlythe service tax – on the service charges and not on the total amount.
    Every bill must carry the TIN number and Service Tax Number, if they charge it. So, I ask for the Service tax number if it is not available in the receipt that they provide.
    We cannot go to any government official and ask them to get this right – because of our system.
    Please remember – we cannot change any political leader – but we can change ourselves. If we change ourselves – things will change.
    Please do share this with every one of your friends and known people.
    Ask for the right tax calculation and pay only the tax which is supposed to be paid. Verify every bills and receipts that you make payment on.

  4. Santhoshkumar LM

    ನನ್ನ ಇಮೇಲ್ ಗೆ inox ನಿಂದ ಬಂದ ಪ್ರತಿಕ್ರಿಯೆ!!
    ———————————–
    Dear Guest,
    Thank you very much for your feedback, we noted the content of your email.
    We apologize for any inconvenience that this may have caused you, your patronage of INOX is extremely important to us and we hope that you continue to visit us.
    Regards,

  5. sridhar.c.p.

    Naananthu multiplex ge hogalla, nanna maga othhaya madidhharinda Aptharakshaka PVR nalli nodiddhe anubhava thumba chennagithhu aadre ticket rate @200/- keli gabhariyagi hoguvudanne bitte,innupopkorn 50/- idu nammanthavarigalla endu summanade, adre securuty arrangements adbutha. sridhar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading