೧೫ ಜಿಲ್ಲೆಗಳಿಗೆ ತೆರಳಲಿದೆ ’ಮನುಷ್ಯ ಜಾತಿ ತಾನೊಂದೆ ವಲಂ’

ಮನುಷ್ಯ ಜಾತಿ ತಾನೊಂದೇ ವಲಂ…

ಸಮಾನತೆಯ ಸಂದೇಶ ಸಾರುವ ಆದಿ ಕವಿ ಪಂಪನ ಈ ಒಂದು ಸಾಲಿಗೆ ವ್ಯಾಖ್ಯೆ ನೀಡುವ ಧ್ವನಿ- ಬೆಳಕಿನ ಕಾರ್ಯಕ್ರಮವನ್ನು ವಾತರ್ಾ ಇಲಾಖೆ ಮತ್ತೊಮ್ಮೆ ಪ್ರಸ್ತುತ ಪಡಿಸುತ್ತಿದೆ.
ಜಾತಿ ಪದ್ಧತಿಯ ವಿರುದ್ಧ ಆದಿಕಾಲದಿಂದಲೂ ನಮ್ಮ ನೆಲದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಜಾತಿ ಪದ್ಧತಿಯನ್ನು ತೊಡೆದುಹಾಕುವ ದಿಶೆಯಲ್ಲಿ ಹಲವಾರು ಮಹನೀಯರು, ಸಂಘ – ಸಂಸ್ಥೆಗಳು ಅವಿರತವಾಗಿ ಪ್ರಯತ್ನಿಸುತ್ತಿವೆ. ವಾರ್ತಾ ಇಲಾಖೆಯು ಸಹ ‘ಮನುಷ್ಯ ಜಾತಿ ತಾನೊಂದೇ ವಲಂ’ ಹೆಸರಿನಲ್ಲಿ ಧ್ವನಿ-ಬೆಳಕಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜಾತಿ ಪದ್ಧತಿಯನ್ನು ತೊಡೆದುಹಾಕಲು ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದ ಇತಿಹಾಸದಲ್ಲೇ ಅತ್ಯುದ್ಭುತ ಎನಿಸುವಂತಹ ಧ್ವನಿ – ಬೆಳಕು; ದೃಶ್ಯ ವೈಭವಗಳ ರೂಪಕದಿಂದ ಕೂಡಿದ್ದ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಧ್ವನಿ ಬೆಳಕಿನ ದೃಶ್ಯ ವೈಭವ ಮತ್ತೊಮ್ಮೆ ಪ್ರದರ್ಶನ ಕಾಣಲು ಸಿದ್ಧವಾಗುತ್ತಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಲಾ ಗ್ರಾಮದಲ್ಲಿ ಇದಕ್ಕಾಗಿ ಪೂರ್ವ ಸಿದ್ಧತೆ ಸದ್ದಿಲ್ಲದೆ ನಡೆಯುತ್ತಿದೆ. ನಾಡಿನ ಖ್ಯಾತ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 150 ಮಂದಿ ಯುವ ಕಲಾವಿದರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಪರಿಶಿಷ್ಟ ಜಾತಿಗಳ ವಿಶೇಷ ಘಟಕ ಯೋಜನೆಯಡಿ ಬೆಂಗಳೂರು ಹಾಗೂ ರಾಜ್ಯದ ಇತರ 13 ಜಿಲ್ಲೆಗಳಲ್ಲಿ ಈ ಧ್ವನಿ ಬೆಳಕಿನ ಕಾರ್ಯಕ್ರಮ ನಡೆಯಲಿದೆ.

ಸಾಣೆಹಳ್ಳಿಯಲ್ಲಿ ಫೆ. 16 ರಂದು ಸಮಾರೋಪ ಸಮಾರಂಭದೊಂದಿಗೆ ಧ್ವನಿ – ಬೆಳಕಿನ ಕಾರ್ಯಕ್ರಮದ ಸರಣಿ ಮುಕ್ತಾಯಗೊಳ್ಳಲಿದೆ.
ಫೆಬ್ರುವರಿ 1 ರಂದು ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದ ಕಲಾ ಗ್ರಾಮದಲ್ಲಿ ಈ ಕಾರ್ಯಕ್ರಮದ ತಾಂತ್ರಿಕ ಪ್ರದರ್ಶನ ನಡೆಯಲಿದೆ. ಫೆಬ್ರುವರಿ 2ರಂದು ಲಾಲ್ಬಾಗ್ನ ಕೆಂಪೇಗೌಡ ಗೋಪುರದ ಬಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನಗಳ ಸರಣಿಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಫೆಬ್ರುವರಿ 2 ಮತ್ತು 3 ರಂದೂ ಲಾಲ್ಬಾಗ್ನಲ್ಲಿ ಈ ಧ್ವನಿ-ಬೆಳಕು-ದೃಶ್ಯ ವೈಭವವನ್ನು ಜನರು ಕಣ್ತುಂಬಿಕೊಳ್ಳಬಹುದು. ಈ ಪ್ರದರ್ಶನಗಳಿಗೆ ಪ್ರವೇಶ ಉಚಿತ.
ವಾರ್ತಾ ಇಲಾಖೆ ನಿರ್ದೇಶಕ ಶ್ರೀ ಎನ್.ಆರ್. ವಿಶುಕುಮಾರ್ ಅವರ ಈ ಪರಿಕಲ್ಪನೆಗೆ ಮೂರ್ತ ರೂಪ ನೀಡಿದವರ ವಿವರ ಹೀಗಿದೆ:
ಸಾಹಿತ್ಯ ರಚನೆ: ಕೋಟಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ
ಗೀತರಚನೆ ಹಾಗೂ ಸಾಹಿತ್ಯ: ಡಾ|| ಕೆ. ವೈ. ನಾರಾಯಣ ಸ್ವಾಮಿ
ಸಂಗೀತ: ಹಂಸಲೇಖ
ರಂಗ ವಿನ್ಯಾಸ: ಶಶಿಧರ ಅಡಪ
ರಂಗ ಪರಿಕರ: ಸರ್ವೇಶ
ಬೆಳಕು ವಿನ್ಯಾಸ: ರವಿ ಮೋಹನ್, ನಂದಾಕಿಶೋರ್
ನೃತ್ಯ ಸಂಯೋಜನೆ: ಡಾ. ಗೀತಾ
ಪ್ರಸಾಧನ: ರಾಮಕೃಷ್ಣ ಬೆಳ್ತೂರು
ವಸ್ತ್ರಾಲಂಕಾರ: ಶ್ರೀಮತಿ ರೂಪ ರಾಜೇಶ್ ನೂಪುರ
ಪ್ರಚಾರ: ಗೌತಮ ಆವತರ್, ಸುರೇಶ್ ಕುಮಾರ್
ಸಹಾಯಕ ನಿರ್ದೇಶಕರು: ರಾಮದೇವ ರಾಕೆ, ರೂಬಿನ್ ಸಂಜಯ್
ಎಂ.ಬಿ. ಕುಮಾರ್, ಶಿವಪ್ರಸಾದ್, ನಟರಾಜ ಶಿವು
ಸಹನಾ ಪಿಂಜಾರ, ಸುಬ್ರಹ್ಮಣ್ಯ ಹೆಗಡೆ, ಎಸ್.ಎಸ್. ಹಿರೇಮಠ್
ಸಹ ನಿರ್ದೇಶಕರು: ಸುನಿಲ್ ಹುಡುಗಿ, ರಾಜೇಶ್ ಕುಂದರ್
ರೇಣುಕ ಸಿದ್ದಿ, ಸುಬ್ಬನಳ್ಳಿ ರಾಜು
ರಂಗ ನಿರ್ವಹಣೆ: ಎಚ್. ಎಂ. ರಂಗಯ್ಯ
ತಾಂತ್ರಿಕ ನಿರ್ದೇಶಕರು: ಕೆ. ಶಿವರುದ್ರಯ್ಯ
 
ದೃಶ್ಯ ಸಂಯೋಜನೆ/ ನಿರ್ದೇಶನ: ಸಿ. ಬಸವಲಿಂಗಯ್ಯ
ಪ್ರದರ್ಶನದ ಕೆಲವು ದೃಶ್ಯಗಳು ನಿಮಗಾಗಿ :

‍ಲೇಖಕರು G

February 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    excellent..ii pradarshana karnatakada ella taluku pradeshgalli pradarshanavaagali…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: