’ಹ್ಯಾಪ್ಪಿ ಬರ್ತ್ ಡೇ ಸಚಿನ್!’ – ರಶ್ಮಿ ತೆಂಡೂಲ್ಕರ್

ರಶ್ಮಿ ತೆಂಡೂಲ್ಕರ್

ಇವನ ಮೇಲಿನ ಅಭಿಮಾನದಿಂದಲೇ ನನ್ನ ಹೆಸರಿನ ಜತೆ ತೆಂಡೂಲ್ಕರ್ ಅಂತ ಸೇರಿಸಿಕೊಂಡಿದ್ದು. ಕಾಲೇಜಿನಲ್ಲಿ ಹಲವಾರು ರಶ್ಮಿಗಳು ಇದ್ದ ಕಾರಣ ನನ್ನನ್ನು ತೆಂಡೂಲ್ಕರ್ ಎಂದೇ ಕರೆಯುತ್ತಿದ್ದರು. ಕ್ರಿಕೆಟ್ ನೋಡೋಕೆ ಶುರು ಮಾಡಿದಂದಿನಿಂದ ನನಗಿಷ್ಟವಾದ ಆಟಗಾರ ಇವನೇ. ಹೈಸ್ಕೂಲ್, ಪ್ಲಸ್ ಟು ಓದುವ ಟೈಮ್ ನಲ್ಲಿ ಸಚಿನ್ ಆಟ ನೋಡೋಕೆ ಅಂತನೇ ಕ್ಲಾಸ್ ಬಂಕ್ ಮಾಡುತ್ತಿದ್ದೆ. ಇವ ಔಟಾಗದಿರಲಿ, ಸೆಂಚುರಿ ಹೊಡೆಯಲಿ ಎಂದು ಪ್ರಾರ್ಥಿಸಿ ಕಾಣಿಕೆ ಹುಂಡಿಗೆ ಬಿದ್ದ ನಾಣ್ಯಗಳೆಷ್ಟೋ. ನಾನು ಸಚಿನ್ ಫ್ಯಾನ್ ಆಗಿದ್ದಕ್ಕೇ ನನ್ನ ತಮ್ಮ ಸೌರವ್ ಗಂಗೂಲಿಯನ್ನು ಆರಾಧಿಸತೊಡಗಿದ್ದ. ಚಿಕ್ಕವರಿರುವಾಗ ಸಚಿನ್, ಸೌರವ್ ಗಾಗಿ ನಾವು ಜಗಳ ಮಾಡಿದ್ದುಂಟು. ಈ ಜಗಳದಿಂದಾಗಿ ನಮ್ಮನೆಯ ಗೋಡೆಯಲ್ಲಿ ಸಚಿನ್, ಸೌರವ್ ಪೋಸ್ಟರ್ಗಳು ರಾರಾಜಿಸಿದ್ದವು. ಎಲ್ಲಿಯಾದರೂ ಪೋಸ್ಟರ್ ಮಾರುವವ ಕಂಡರೆ ಸಾಕು, ಸಚಿನ್ ಪೋಸ್ಟರ್ ಗಾಗಿ ಹುಡುಕುತ್ತಿದ್ದೆ. ಕೊನೆಗೆ ಪೋಸ್ಟರ್ ಮಾರುವವನಲ್ಲಿ ಇರುವುದಕ್ಕಿಂತ ಹೆಚ್ಚು ಪೋಸ್ಟರ್ ನನ್ನಲ್ಲಿತ್ತು. ಪೇಪರ್ನಲ್ಲಿ ಬಂದ ಪ್ರತಿಯೊಂದು ಫೋಟೋವನ್ನು ಕತ್ತರಿಸಿ ತೆಗೆದಿಡುವುದು ಕಾಲೇಜು ದಿನಗಳವರೆಗೆ ನನ್ನ ಹವ್ಯಾಸವಾಗಿತ್ತು. ಸಚಿನ್ ಸುದ್ದಿಯನ್ನು ಓದುವುದೂ ಇಷ್ಟ. ಈಗ ಮೊಬೈಲ್, ಲ್ಯಾಪ್ಟಾಪ್ ಎಲ್ಲ ಕಡೆಯೂ ಅವನೇ. ಹೊಸ ಪೆನ್ನು ತೆಗೆದರೆ ಮೊದಲು ಅವನ ಹೆಸರನ್ನೇ ಬರೆಯುವುದು. ಬೇಜಾರಾದಾಗ, ಒಬ್ಬಂಟಿಯೆಂದೆನಿಸಿದಾಗ ಸಚಿನ್ ಆಡಿದ ಹಳೇ ಮ್ಯಾಚ್ಗಳನ್ನು ನೋಡುತ್ತೇನೆ. ಅವನಿಗಿರುವ ಕೋಟಿ ಕೋಟಿ ಫ್ಯಾನ್ ಗಳಲ್ಲಿ ನಾನೂ ಒಬ್ಬಳು ಅಷ್ಟೇ. ಆದ್ರೆ ನನಗವನು ತುಂಬಾನೇ ಸ್ಪೆಷಲ್! ಅಂದ ಹಾಗೆ ಹೈಸ್ಕೂಲ್ ನಲ್ಲಿ ನಾನು ಪತ್ರಿಕೆಗೆ ಬರೆಯತೊಡಗಿದಾಗ ನನ್ನ ಕಾವ್ಯನಾಮ ಸಚಿನ್+ ರಶ್ಮಿ ‘ಸಾರಾ’ ಎಂದಿಟ್ಟುಕೊಂಡಿದ್ದೆ.
ಸಚಿನ್ ಅಂದ್ರೆ ಅಷ್ಟೊಂದು ಇಷ್ಟನಾ? ಎಂದು ಕೇಳಿದರೆ. ತುಂಬಾನೇ ಇಷ್ಟ. ಅವನನ್ನು ಎಷ್ಟು ಆರಾಧಿಸಬೇಕೋ ಅಷ್ಟು ಆರಾಧಿಸುತ್ತೇನೆ ಅದಕ್ಕಿಂತ ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ.
Happy birthday Sachin Tendulkar!
 

‍ಲೇಖಕರು G

April 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: