ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌಸ್‌ ಫುಲ್‌ ಆದ ‘ನನ್ನ ತೇಜಸ್ವಿ’

ನಿನ್ನೆ ನಾನು ಎಲ್ಲಿಗೆ ಹೊಗಿದ್ದೆ ಗೊತ್ತಾ?

ತೇಜಸ್ವಿ ಅವರ ಕ್ಲೋಸ್ ಫ್ರೆಂಡ್ ರಾಜೇಶ್‌ (ತೇಜಸ್ವಿ ಅವರ ಹೆಂಡತಿ ರಾಜೇಶ್ವರಿ) ಅವರನ್ನು ಭೇಟಿ ಮಾಡೋಕೆ ಹೊಗಿದ್ದೆ.

ಎಲ್ಲಿ?

ಕಲಾಗ್ರಾಮದಲ್ಲಿ

ಯಾರು ಯಾರು ಇದ್ದರು?

ರಾಜೇಶ್ವರಿ, ತೇಜಸ್ವಿ, ಶಾಮಣ್ಣ, ರಾಜೇಶ್ವರಿ ಅವರ ಸಂಬಂಧಿಗಳು ಮತ್ತು ಇನ್ನೊಂದಿಷ್ಟು ಜನ

ಹಲೋ ಸಾಕು ಸಾಕು ಮ್ಯಾಟ್ರಿಗೆ ಬಾ ಅಂತೀರ ಯಸ್‌ ಐ ನೋ

ನಿನ್ನೆ ನಾನು ಭೇಟಿಯಾಗಿದ್ದು ತೇಜಸ್ವಿ ಅವರ ಹೆಂಡತಿ ರಾಜೇಶ್ವರಿ ಅವರ “ನನ್ನ ತೇಜಸ್ವಿ” ಪುಸ್ತಕದ ಪಾತ್ರಗಳನ್ನು.

“ನನ್ನ ತೇಜಸ್ವಿ” ಪುಸ್ತಕವು ಸಂಪೂರ್ಣಚಂದ್ರ ತೇಜಸ್ವಿ ಅವರ ಬದುಕಿನ ಹೃದಯಸ್ಪರ್ಶಿ ಹಾಗೂ ಆತ್ಮೀಯ ಪರಿಚಯವನ್ನೂ, ಅವರ ವ್ಯಕ್ತಿತ್ವದ ವಿಶಿಷ್ಟತೆಯನ್ನೂ ಓದುಗರಿಗೆ ನೀಡುತ್ತದೆ. ತೇಜಸ್ವಿಯವರ ವಿಶಿಷ್ಟ ಸ್ವಭಾವ, ಬರಹ ಶೈಲಿ, ಜೀವನದ ತಾರತಮ್ಯಗಳು ಮತ್ತು ವ್ಯಕ್ತಿತ್ವದ ನಾನಾ ವೈಶಿಷ್ಟ್ಯಗಳನ್ನು ಅವರ ಜೀವನ ಸಂಗಾತಿ ರಾಜೇಶ್ವರಿ ತೇಜಸ್ವಿಯವರು ನೈಜ ಅನುಭವಗಳಿಂದ ವಿವರಿಸಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಅವರು ಸಹಪಾಠಿಯಾಗಿ ಪರಿಚಯವಾದ ಕಾಲದಿಂದ, ಸ್ನೇಹಿತರಾಗಿ, ನಂತರ ಮಡದಿಯಾಗಿ, ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲದ ಸಾಂಗತ್ಯದ ಪ್ರತ್ಯಕ್ಷ ಅನುಭವಗಳನ್ನು ಪುಸ್ತಕದಲ್ಲಿ ಹಂಚಿಕೊಂಡಿರುವುದರಿಂದ ಓದುಗರು ಸಂಪೂರ್ಣಚಂದ್ರ ತೇಜಸ್ವಿ ಎಂಬ ವ್ಯಕ್ತಿಯ ಜೀವನವನ್ನು ಹತ್ತಿರದಿಂದ ಅರಿಯಲು ಅವಕಾಶ ಸಿಗುತ್ತದೆ.

ಇಂತಹ “ನನ್ನ ತೇಜಸ್ವಿ”‌ ನಿನ್ನೆ ನಾಟಕ ರೂಪದಲ್ಲಿ ಕನ್ನಡಿಗರಿಗೆ ಪರಿಚಯಿಸಿದ್ದು ಕಲಾಮಾಧ್ಯಮ ಪರಮ್ ಅವರ ನಿರ್ಮಾಣ ನಿರ್ವಹಣೆಯಲ್ಲಿ ಬಿ.ಎಂ ಗಿರಿರಾಜ್‌ ಅವರ ನಿರ್ದೇಶನದಲ್ಲಿ. ರಾಜೇಶ್ವರಿಯಾಗಿ “ಸವಿತಾ ಪರಮ್”, ತೇಜಸ್ವಿಯಾಗಿ “ಕಲಾಮಾಧ್ಯಮ ಪರಮ್” ಅವರ ನಟನೆ ಚನ್ನಾಗಿದೆ. ತೇಜಸ್ವಿಯವರ ಗೆಳೆಯನಾಗಿ “ಶಾಮಣ್ಣ” (ಅವರ ಹೆಸರು ಮರತೆ) ಅವರು ಕಚಗುಳಿ ಇಡುತ್ತಾರೆ. ರಾಜೇಶ್ವರಿಯವರ ಭಾವನ ಪಾತ್ರ, ಸಂತೆಯಲ್ಲಿ ಇಲಿ ಪಾಷಾಣ ಮಾರುವವರ ಪಾತ್ರ ನಕ್ಕು ನಲಿಸುತ್ತವೆ. ಒಂದುವರೆ ಗಂಟೆ ಕಳೆದದ್ದು ಗೊತ್ತೇ ಆಗುವುದಿಲ್ಲ. ಅಯ್ಯೋ ನಾಟಕ ಮುಗಿದೆ ಹೋಯಿತಾ ಅನಿಸುತ್ತದೆ. ಚಪ್ಪಾಳೆ ತಟ್ಟಿ ತಟ್ಟಿ ಕೈ ಕೆಂಪಾಗುತ್ತವೆ. ತೇಜಸ್ವಿ ನಮಗೆ ಇನ್ನೊಂದಿಷ್ಟು ಹೆಚ್ಚು ಅರ್ಥವಾಗುತ್ತಾರೆ. ಆ ನಾಟಕದಲ್ಲಿ ನಾನು ಎಷ್ಟು ಮುಳುಗಿ ಹೊಗಿದ್ದೆ ಎಂದರೆ ಪೋಟೋ ತೆಗೆಯುವುದನ್ನು ಮರೆತೆ. (ಕಲಾಮಾಧ್ಯಮದಲ್ಲಿ ಹಾಕಿರುವ ಒಂದು ಫೋಟೋ ಇಲ್ಲಿ ಬಳಸಿದ್ದೇನೆ.)

ಈ ನಾಟಕ ಬರೀ ಹೌಸ್‌ ಫುಲ್‌ ಅಲ್ಲಿ ಫ್ಲೋರ್‌ ಫುಲ್‌ ಆಗಿತ್ತು. ಜನ ನೆಲದ ಮೇಲೆ ಕುಳಿತು ಕೆಲವರು ನಿಂತೆ ನಾಟಕ ನೋಡಿದರು. ಈ ನಾಟಕ ಮತ್ತೆ ಇದೇ ತಿಂಗಳ 28ಕ್ಕೆ ಎರಡು ಶೋ ಇದೆ. ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ.

‍ಲೇಖಕರು Admin

10 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading