ಫೇಸ್ ಬುಕ್ ಹಲವು ದಿಕ್ಕಿಗಳಲ್ಲಿ ಹರಡಿಕೊಂಡಿದೆ. ಅದು ಪಡೆದಿರುವ ಆಕಾರ ಊಹಿಸಲಾಗಿದ್ದು.
ಅದನ್ನು ತಮಗೆ ಬೇಕಾದಂತೆ, ತಮ್ಮ ಯೋಚನೆಗೆ ಬಗ್ಗಿಸುವ ಕೆಲಸವೂ ಹಲವರಿಂದ ನಡೆಯುತ್ತಿದೆ. ಅಂತಹದ್ದರಲ್ಲಿ ಒಂದು ‘ಅಂತಃಪುರ’.
ಇಂತಹ ಹೊಸ ರೀತಿಯ ಸಾಹಸಗಳನ್ನು ಆಗೀಗ ‘ಅವಧಿ’ ಪರಿಚಯಿಸುತ್ತಾ ಹೋಗುತ್ತದೆ
ಹೌದೇನೆ ಸಖಿ, ನಿಜವೇನೆ?
– ಸಖಿ
ಫೇಸ್ ಬುಕ್ ನಲ್ಲಿ ನಮ್ಮದೊ೦ದು ಕೋಣೆ, ಅಲ್ಲಿ ಎಲ್ಲದರ ಬಗ್ಗೆ ಚರ್ಚೆ ಆಗುತ್ತೆ, ಅರ್ಜೆ೦ಟಾಗಿ ಒಳ್ಳೆ ಟೈಲರ್ ಬೇಕಿತ್ತಲ್ಲ ಅ೦ತ ಒಬ್ಬ ಸಖಿ ಕೇಳಿದ್ರೆ, ’ನಿಮ್ ಕನಸಿನ ಹುಡುಗ ಹೇಗಿದ್ದ, ಸಿಕ್ಕನಾ’ ಅ೦ತ ಇನ್ನೊಬ್ಬ ಗೆಳತಿ ಕಿಚ್ಚು ಹಚ್ಚುತ್ತಾಳೆ! ಕೆಲವರು ಅಮ್ಮನನ್ನು ನೆನಪಿಸಿಕೊ೦ಡರೆ ಕೆಲವರು ಕಾಲಕಾಲಕ್ಕೆ ಅಮ್ಮನ೦ತೆ ಒದಗಿ ಬ೦ದಿದ್ದಾರೆ, ನೀವೆಲ್ಲಾ ಇರೋದರಿ೦ದ ತವರಿನ ನೆನಪು ಬಾಧಿಸೋಲ್ಲ ಅ೦ದದ್ದು ಒಬ್ಬ ಗೆಳತಿ, ಮಗುವಿಗೆ ಧಡಾರ ಆಗಿದೆ, ಮೈ ತ೦ಪಾಗಲಿಕ್ಕೆ ಏನು ಮಾಡಲಿ ಅ೦ತ ಹೊಸ ತಾಯಿಯೊಬ್ಬಳು ಕಳವಳಿಸಿದಾಗ, ಮನೆಯ ಅಮ್ಮ-ದೊಡ್ಡಮ್ಮರ೦ತೆ ಸ೦ತೈಸಿದ್ದು ಯಾರ್ಯಾರೊ…
’ಮದುವೆ ಆದ ಮೇಲೂ ಕ್ರಶ್ ಆಗಬಹುದಾ?’ ಅ೦ತ ಒಬ್ಬ ತು೦ಟಿ ಕೇಳ್ತಾಳೆ, ’ ಛೀ ಫ್ರೆಂಡ್ ರಿಕ್ವೆಸ್ಟ್ ಗೆ ಒಪ್ಪಿಗೆ ಕೊಟ್ಟ ಕೂಡಲೆ ಎಷ್ಟು ಕೆಟ್ಟದಾಗಿ ಪ್ರತಿಕ್ರಯಿಸಿದ, ಮೈಯೆಲ್ಲಾ ಮುಳ್ಳು ಮುಳ್ಳು’ ಅ೦ತ ಮತ್ತೊಬ್ಬ ಗೆಳತಿ ಅಲವತ್ತುಕೊಳ್ಳುತ್ತಾಳೆ. ನನ್ನ ಪ್ರತಿದಿನದ ಕೆಲಸ ಕಾರ್ಯಗಳ ನಡುವೆಯೂ ಇದು ನ೦ಗೆ ಒಮ್ಮೆ ಅಕ್ಕ-ತ೦ಗಿಯರೆಲ್ಲಾ ಸೇರಿ ಪಟ್ಟಾ೦ಗ ಹೊಡೆವ ಜಗಲಿ, ಮತ್ತೊಮ್ಮೆ ಪಿಸು ಮಾತು ಆಲಿಸುವ ಗೆಳತಿಯ ಕಿವಿ, ಒಮ್ಮೆ ಮಾತೇ ಆಡದೆ ಸುಮ್ಮನೇ ಸ್ವಲ್ಪ ಹೊತ್ತು ಕುಳಿತಿದ್ದು ಬರೋಣ ಅನ್ನಿಸುವ ಲತಾ ಮ೦ಟಪ.
ಇ೦ತಿಪ್ಪ ನಮ್ಮ ಜಗಲಿಯಲ್ಲಿ ಮೊನ್ನೆ ಜಯಲಕ್ಷ್ಮಿ ಪಾಟೀಲರು ವೈದೇಹಿಯ ಒ೦ದು ಬರಹ
ಲಿ೦ಕ್ ಕೊಟ್ಟು ಅಭಿಪ್ರಾಯ ಕೇಳಿದಾಗ, ಎ೦ತೆ೦ತ ಹೊಸ ಮಾತುಗಳು, ಆಲೋಚನೆಗಳು ಚರ್ಚೆಗೆ ಬ೦ದವು ಅ೦ದರೆ, ಅದು ಅ೦ತಃಪುರ ದಾಟಿ ಹೊರಬರಲಿ ಅ೦ತ ಒಬ್ಬರು ಸಲಹೆ ಕೊಟ್ಟಾಗ ಎಲ್ಲರಿಗೂ ಹೌದೆನ್ನಿಸಿತು. ಜಯಲಕ್ಷ್ಮಿ ಅವರ ಅನುಮತಿ ಕೇಳುತ್ತಾ ಅವರ ಬರಹವನ್ನು ಇಲ್ಲಿ ಮತ್ತೆ ಪುನಃ ಒಕ್ಕಣಿಸುತ್ತಿದ್ದೇನೆ. ಸಖಿಯರೇ ಹಾಗು ಸಖಿಯರಿರುವ ಎಲ್ಲಾ ಸಖರೇ ನಿಮ್ಮ ಪ್ರತಿಕ್ರಿಯೆ ಹೇಳಿ :

ಮುಕ್ತ ಅಭಿಪ್ರಾಯದ ನಿರೀಕ್ಷೆಯಲ್ಲಿ……
ಈಗೊಂದು ಪ್ರಶ್ನೆ. ಭಾರತ ಹಳ್ಳಿಗಳ ನಾಡು. ನಾವು ಭಾರತದ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಪ್ರಗತಿ ಹೊಂದಿದ್ದೇವೆ, ಹೊಂದುತಿದ್ದೇವೆ ಎಂದು ಬೀಗುತಿದ್ದೇವೆ. ಹೀಗೆ ಬೀಗುವ (ಯಾರೆಲ್ಲ ನಾವು ಪ್ರಗತಿ ಹೊಂದಿದ್ದೇವೆ, ಹೊಂದುತಿದ್ದೇವೆ ಎಂದು ಭಾವಿಸಿದ್ದೇವೋ) ನಾವು ಕೇವಲ ನಮ್ಮನ್ನು, ನಮ್ಮಂಥ ‘ಕೆಲವರನ್ನು’ ನೋಡಿಕೊಂಡು ಹಾಗೆ ಭಾವಿಸಿದ್ದೇವೆ. ಹೀಗಾಗಿ ಭಾರತದ ಮಹಿಳೆ ಸಮಾನತೆ ಸಾಧಿಸುತ…ಿದ್ದಾಳೆ ಎನ್ನುತ್ತೇವೆ.ಹೀಗೆ ಗೆದ್ದ ಹೆಣ್ಣುಮಕ್ಕಳ ಸಂಖ್ಯೆ ಮುಷ್ಟಿಯಷ್ಟು ಮಾತ್ರ. ಹಾಗಾದರೆ ಇನ್ನುಳಿದವರು??!! ಅವರಿನ್ನೂ ಇದ್ದಲ್ಲಿಯೇ ಇದ್ದಾರೆ. ಅಲಂಕಾರದ ಫ್ಯಾಶನ್ ಗಾಳಿ ಹಳ್ಳಿ ಹಳ್ಳಿಗೂ ತಲುಪಿದೆ ಎನ್ನುವುದಷ್ಟೇ ಎಲ್ಲ ಹಳ್ಳಿ ಹೆಣ್ಣುಮಕ್ಕಳ ಪ್ರಗತಿ!!!
ಇತ್ತೀಚಿಗಷ್ಟೇ ವೈದೇಹಿಯವರ ‘ಹೆಣ್ಣಿನ ಮೇಲೆ ಭಯೋತ್ಪಾದನೆ ಹೆಚ್ಚುತ್ತಿದೆ’ ಎನ್ನುವ ಶೀರ್ಷಿಕೆ ಹೊತ್ತ ಸಂದರ್ಶನವನ್ನು ಇಲ್ಲಿ ಪೋಸ್ಟ್ ಮಾಡಿದ್ದೆ. ಹಳ್ಳಿ ಮತ್ತು ನಗರ ಜೀವನವನ್ನು ಹತ್ತಿರದಿಂದ ಕಂಡ, ಕಾಣುತ್ತಿರುವ, ಪ್ರಗತಿ ಹೊಂದಿದವರ ಸಂಖ್ಯೆ ಮುಷ್ಟಿಮಾತ್ರದಷ್ಟು ಎಂದು ಬಲ್ಲ ವೈದೇಹಿಯವರು ಹಾಗೆ ಹೇಳಿದ್ದು ನನಗೆ ವಿಪರೀತ ಎನಿಸಲಿಲ್ಲ ಸತ್ಯ ಎನಿಸಿತು. ಆದರೆ ನನ್ನವರಿಗೆ ಅದು ವಿಪರೀತವಾಗಿ ಕಂಡಿತು. ಎಲ್ಲ ಕ್ಷೇತ್ರದಲ್ಲೂ ಹೆಣ್ಣು ಈಗ ಪುರುಷ ಸಮಾನವಾಗಿ ದುಡಿಯುತ್ತಿರುವಾಗ, ರಾಷ್ಟ್ರಪತಿ ಸ್ಥಾನವನ್ನೇರುವಷ್ಟು ಹೆಣ್ಣು ಮುಂದುವರೆದಿರುವಾಗ ವೈದೇಹಿಯವರು ಹೀಗೆ ಹೇಳಿರುವುದು ಎಷ್ಟು ಸರಿ!? ಎನ್ನುವುದು ಅವರ ವಾದ. ನಾವು ನಾಲ್ಕಾರು ಜನ ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ ಧೈರ್ಯ ತೋರಿದ (ಸಂಪೂರ್ಣ ದೌರ್ಜನ್ಯರಹಿತ/ಮುಕ್ತ ರಾಗಿದ್ದೇವೆ ಎಂದು ಹೇಳುವ ಧೈರ್ಯ ನನಗಿಲ್ಲವೇ ಇಲ್ಲ ಕ್ಷಮಿಸಿ) ಮಾತ್ರಕ್ಕೆ ಭಾರತದ ಎಲ್ಲ ಹೆಣ್ಣುಮಕ್ಕಳೂ ಹಾಗೇ ಎಂದಾಯಿತೇ? ಎಷ್ಟೆಲ್ಲ ಭಯ ಆತಂಕಗಳನ್ನು ಅದು ತಮ್ಮ ಧರ್ಮ, ಕರ್ಮ ಮತ್ತು ಸಹಜ ಎಂಬಂತೆ ಹೊತ್ತು ಬದುಕುತಿದ್ದಾರೆ.
ನೀವೇನನ್ನುತ್ತೀರಿ? ವೈದೇಹಿಯವರ “ಹೆಣ್ಣಿನ ಮೇಲೆ ಭಯೋತ್ಪಾದನೆ ಹೆಚ್ಚುತ್ತಿದೆ” ಎಂಬ ಮಾತು ವಿಪರೀತವಾಯಿತೆಂದು ನಿಮಗೂ ಅನಿಸುತ್ತಿದೆಯೇ?
‘ನಿಮ್ಮ ದನಿ’ ಕೇಳಿಸಬೇಕು.]]>
Like this:
Like Loading...
Related
ಅತ್ಯಾಚಾರ ಯಾವಾಗಲೂ ನಡಿತಾನೆ ಇದೆ..
ಕಾಲಘಟ್ಟಗಳಲ್ಲಿ ಅತ್ಯಾಚಾರದ ಹೆಸರು ಬದಲಾಗುತ್ತ ಬಂದಿದೆ….
ಅಷ್ಟೆ…
THIS IS 100% CORRECT
ಖಂಡಿತ ನಾನು ಅವರ ಮಾತು ಒಪ್ಪುತೇನೆ. ಮಹಿಳೆ ಎಸ್ಟೆ ಮುಂದುವರಿದಿದ್ದರೂ ಅಸ್ಟೇ ಸಮಸ್ಯೆ ಕೂಡ ಇದೆ. ಕೆಲಸದಲ್ಲಿ , ಮನೆಯಲ್ಲಿ, ಸಮಾಜದಲ್ಲಿ ಎಲ್ಲ ಕಡೆ. ಅಸಮಾನತೆ ಖಂಡಿತ ಇದೆ. ಸಂಬಳ ಕಡಿಮೆ ಕೆಲಸ ಜಾಸ್ತಿ. ಕೆಲಸ ಮುಗಿಸಿ ಮನೆಗೆ ಬಂದಮೇಲೆ ಮನೆಯ ಜವಾಬ್ದಾರಿ ಹೀಗೆ. ಗಂಡು ಹೆಣ್ಣಿಗೆ ಕಿರುಕುಳ ಕೊಟ್ಟಾಗ, ಸಹಿಸಿದರು ಹೆಣ್ಣೇ ಸಲಿಗೆ ಕೊಟ್ಟಿದಕ್ಕೆ ಅವನು ಹಾಗೆ ಮಾಡಿದ ಅಂತ , ಎದುರಿಸಿದರೆ ಗಂಡುಬೀರಿ ತರ ಆಡುತಾಳೆ ಅಂತ. ಅವಳು ಸರಿ ಇಲ್ಲ ಅದಕ್ಕೆ ಅವನು ಹಾಗೆ ಮಾಡಿದನಂತೆ ಅಂತ ಹೀಗೆ ಎಲ್ಲ ರೀತಿಯಲ್ಲು ಹೆಣ್ಣು ಅಪರಾಧಿ. ಅವಳು ಗಂಡಿನ ಜೊತೆ ಮಾತಾಡಿದರೆ ಸಾಕು ಅವರು ಅಥವಾ ಸಮಾಜ ತಿಳಿಯೋದೇ ಬೇರೆ. ಅವಳ ನಡವಳಿಕೆ ಸರೀಲ್ಲ, ಅಂತ ಆದ್ರೆ ಗಂಡಿಗೆ ಯಾರು ಏನು ಹೇಳೋಲ್ಲ. ಆದ್ರೆ ಆ ಗಂಡಿನಿಂದಲೇ ಇವಳು ಹಾಳಗೋದು ಅಂತ ಯಾರು ಹೇಳೋಲ್ಲ. ಎಂತ ಅಸಮಾನತೆ ನೋಡಿ.