ಹೌದು ಸ್ವಾಮಿ… ಅಸಲಿ ಬಿಗ್ ಬಾಸ್ ಯಾರಿಗೂ ಕಾಣ್ಸೋದೇ ಇಲ್ಲ.

ಅಸಲಿ ಬಿಗ್ ಬಾಸ್ ಕೂಡಾ ಯಾರಿಗೂ ಕಾಣ್ಸೋದೇ ಇಲ್ಲ. ಹೌದು ಸ್ವಾಮಿ…

ಶಿವು ಮೋರಿಗೇರಿ

ಆಗೀಗೊಮ್ಮೆ ನಂಗೆ ಈ ಸೊಸೈಟಿಯೇ ಬಿಗ್ ಬಾಸ್ ಮನೆ ಥರಾ ಕಾಣ್ತದೆ. ಬದುಕೇ ನಮಗಿಲ್ಲಿ ಬಿಗ್ ಬಾಸ್. ನಾಟಕಕ್ಕೆ ಇಲ್ಲಿ ಜಾಗವೇ ಇಲ್ಲ ಅನ್ನೋ ಸ್ಲೋಗನ್ನಿನ ಕೆಳಗೇ ಮುಖವಾಡ ಇಲ್ಲದೆ ಇಲ್ಲಿ ಬದುಕಿಲ್ಲ ಅನ್ನೋ ಹಪಹಪಿ. ಈ ಸೊಸೈಟಿಯಲ್ಲೂ ಕ್ಯಾಮರಾಗಳ ಕಣ್ಗಾವಲಿದೆ ! ಕನ್ ಫೆಷನ್ ರೂಂ ಅನ್ನೋ ಸಾರ್ವಜನಿಕ ಜಾಲತಾಣಗಳಿವೆ. ಬದುಕು ನೀಡೋ ಟಾಸ್ಕ್ ನ ಟೆಂಪರೇಚರ್ ಸಹಿಸಿಕೊಳ್ಳೋದು ಸಾಮಾನ್ಯ ಟೆಂಪರಿನ ಮಾತಲ್ಲ. ಚೂರು ಸರಳೀಕರಿಸಿ ಹೇಳಿಬಿಡ್ಲಾ ? ಅಂತ ಹೊರಟ್ರೆ, ನಮ್ಮ ಆತ್ಮವೇ ಒಂದು ಬಿಗ್ ಬಾಸ್ ಮನೆ. ಹರಿಷಡ್ವರ್ಗಗಳು ಅಂತ ಕರೀತಾರಲ್ಲಾ ಅವೇ ಕಂಟಿಸ್ಟೆಂಟ್ ಗಳು. ಮೆದುಳೇ ಕನ್ ವೆಷನ್ ರೂಂ. ನಾನು ಇನ್ಮುಂದೆ ಹಾಗಿದ್ಬಿಡ್ತೀನಿ, ಹೀಗಿದ್ಬಿಡ್ತೀನಿ, ಹಾಗಿರಬೇಕು, ಹೀಗಿರಬೇಕು  ಅನ್ನೋದೇ ಟಾಸ್ಕ್. ಅಸಲಿ ಹೇಗಿದಿಯಾ ಅಂತ ಸೊಸೈಟಿ ಹೇಳೋದೇ ಬಿಗ್ ಬಾಸ್.

ಕಾಲ ಚಲಿಸುತ್ತಲೇ ಇರುತ್ತೆ ಅನ್ನೋದೇ ಖರೆವಾದ್ರೆ ಬದುಕೆಂಬ ಬಿಗ್ ಬಾಸ್ ಆಟದಲ್ಲಿ ಯಾರೂ ಗೆಲ್ಲಲ್ಲ. ಹಂಗೇನಿಲ್ಲಪ್ಪ ನಾವು ಎಷ್ಟೆಲ್ಲಾ ಗೆದ್ದಿದ್ದೀವಿ ಅನ್ನೋದೆಲ್ಲಾ ಭ್ರಮೆಯಷ್ಟೆ. ಇಡೀ ಬದುಕನ್ನು ಗೆದ್ದೆವೆಂಬ ಭ್ರಮೆ. ನಮ್ಮ ಸಣ್ಣಪುಟ್ಟ ಗೆಲುವುಗಳೆಲ್ಲಾ ಲಗ್ಜುರಿ ಬಜೆಟ್  ಟಾಸ್ಕ್ ನ ವಿನ್ನಿಂಗ್ ಮೂಮೆಂಟ್ ಗಳಷ್ಟೆ.

ನಮ್ಮ ಈ ಬದುಕೆಂಬ ಮನೆಯಲ್ಲಿ ಆ ಬಿಗ್ ಬಾಸ್ ನಡೆಸುವ ಆಟಕ್ಕೆ ನಮಗೆ ನಾವೇ ನಿರೂಪಕರು, ನಿರ್ದೇಶಕರು. ನಿರ್ಮಾಪಕರು ಮಾತ್ರ ಹೆತ್ತೋರು. ಇಲ್ಲಿ ಯಾರಿಗೆ ಯಾವ ತಿರುವು ಯಾವಾಗ ಹೇಗೆ ಬರುತ್ತೆ ಎನ್ನೋದನ್ನು ಯಾರು ತಾನೆ ಊಹಿಸಿರ್ತಾರೆ ನೀವೇ ಹೇಳಿ ?

ಸುಮ್ಮನೆ ಒಬ್ಬರೇ ನಡೆದು ಹೋಗುವ ದಾರಿ ಮದ್ಯೆ ಮತ್ಯಾರೋ ದಿಢೀರ್ ಜೊತೆ ಹೆಜ್ಜೆ ಹಾಕ್ತಾರೆ. ಅದುವರೆಗೂ ಜೊತೆ ಇದ್ದೋರು ಕಾರಣವನ್ನೂ ಹೇಳದೆ ಸುಖಾಸುಮ್ಮನೆ ಕವಲೊಡೆದು ಬಿಡ್ತಾರೆ.

ಇನ್ಯಾರೋ ಸದಾ ನಮ್ಮನ್ನ ಡೈವರ್ಟ್ ಮಾಡೋದ್ರವಲ್ಲೇ ಕಾಲ ಕಳಿತಾರೆ. ಕಾಲೆಳೆಯಲೆಂದೇ ತುತ್ತು ತಿನ್ನುವವರ ನಡುವೆಯೂ ಸದಾ ನಮ್ಮನ್ನು ಗುರಿಯತ್ತಲೇ ತಳ್ಳುವ, ನಮಗೆ ಬೆಂಗಾವಲಾಗಿ ನಿಲ್ಲುವ ನಮ್ಮ ಒಳಿತು ಬಯಸುವ ಕೈಗಳೂ ಇರ್ತವೆ.

ನಮ್ಮೊಡನಿದ್ದುಕೊಂಡೇ ಕಣ್ಣಿಗೆ ಅಮಲುಗಳ (ಪ್ರಮೋಷನ್, ಪ್ರೇಮ, ದುಡ್ಡು, ಆಸ್ತಿ, ವೈಗೈರಾ, ವೈಗೈರಾ ) ಬಣ್ಣ ಎರಚುವವರಿಗೇನು ಬರವೇ ? ಇನ್ನು ಈ ಕಾರ್ಪೊರೇಟ್ ವ್ಯೂಹದಲ್ಲಿ ಯಾರು ನಮ್ಮೋರು, ಯಾರಲ್ಲ ಅನ್ನೋದು ಪಕ್ಕಾ ಗೊತ್ತಿದ್ರೂ ಆ ಬಿಗ್ ಬಾಸ್ ಅದೇನೋ ನಮಗೆ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಾನೆ ಅನ್ನೋ ಹಾಗೆ ನಾವೂ ಮುಖವಾಡ ಹಾಕಿಕೊಂಡೇ ದಿನಗಳನ್ನ ತಳ್ಳುತ್ತಿರ್ತೀವಿ. ನಮ್ಮೆಲ್ಲಾ ನಖರಾಗಳನ್ನೂ ನೋಡ್ತಾನೇ ಇರ್ತಾನೆ ಬಿಗ್ ಬಾಸ್. ಅದಕ್ಕೇ ಆಗಾಗ ಎಲ್ಲರ ಕಾಲೆಳೆಯುತ್ತೆ ಕಾಲ.

ನಮ್ಮ ಬಿಗ್ ಬಾಸ್ ಆಟ ನಡೆಯೋದು ಮೂರೇ ಹಂತದಲ್ಲಿ. ಬಾಲ್ಯ ಅನ್ನೋ ಫ್ರೀಡಂ ಟಾಸ್ಕ್, ಯೌವ್ವನ ಅನ್ನೋ ಟಿಪಿಕಲ್ ಟಾಸ್ಕ್, ಮುಪ್ಪೆಂಬ ಕೊನೆಯ ಸುತ್ತಿನ ಆಟ. ಈ ಮೂರು ಹಂತದ ಟಾಸ್ಕ್ ಗಳಲ್ಲಿ ಹರಿಷಡ್ವರ್ಗಗಳೆಂಬ ಕಂಟಿಸ್ಟೆಂಟ್ ಗಳು ಹೇಗೆ ಟಾಸ್ಕ್ ಗಳನ್ನ ಕಂಪ್ಲೀಟ್ ಮಾಡ್ತಾರೆ ಅನ್ನೋದೇ ಬಿಗ್ ಬಾಸ್ ಪೈನಲ್.

ಆದ್ರೆ ಎಲ್ಲೂ ಕೂಡಾ ಈ ಹರಿಷಡ್ವರ್ಗಳನ್ನು ದೇಹದೊಳಗಿನ ಆತ್ಮದ ಮನೆಯೊಳಗೆ ಕೂಡಿ ಹಾಕಿ ಸಕಲವನ್ನೂ ಸಂಕ್ಷಿಪ್ತವಾಗಿ ನೀಡಿ ಆಟ ಶುರು ಮಾಡುವ ಬಿಗ್ ಬಾಸ್ನ ಧ್ವನಿಯೂ ಕೇಳಿಸಲ್ಲ. ವಿಚಿತ್ರ ಏನು ಗೊತ್ತಾ ! ಆತ್ಮದ ಮನೆಯೊಳಗೆ ಅಂದರ್ ಆಗಿರುವ ಹರಿಷಡ್ವರ್ಗಗಳು ಉಪುಪಾಯವಾಗಿ ಯಾವುದಾದರೂ ಸೂಕ್ತ ಹಂತದಲ್ಲಿ ಒಬ್ಬೊಬ್ಬರನ್ನೇ ಆತ್ಮದ ಮನೆಯಿಂದ ಆಚೆ ಕಿತ್ತೆಸೆಯುವ ಪ್ರಯತ್ನವನ್ನೇ ಮಾಡಲ್ಲ. ಇದು ಬಹುತೇಕರ ಪಾಡಾದರೆ ಇನ್ನು ಕೆಲವರಿದ್ದಾರೆ ಆತ್ಮದ ಮನೆಯೊಳಗಿನ ಅಷ್ಟೂ ಕಂಟಿಸ್ಟೆಂಟ್ ಗಳನ್ನು ಮುಖಾ ಮುಲಾಜಿಲ್ಲದೆ ಹೊರ ನೂಕಿ ಬಿಗ್ ಬಾಸ್ ಮೆಚ್ಚುಗೆ ಗಳಿಸಿದವರು.

ಮತ್ತಿವರಿಗಾದರೂ ಆ ನಿಗೂಢ ಬಿಗ್ ಬಾಸ್ ಕಂಡಿದ್ದಾರಾ ? ಇಲ್ವೇ ಇಲ್ಲ. ಇಂಥಹವರ ಬಳಿ ಈ ಪ್ರಶ್ನೆಯನ್ನ ಕೇಳಿದ್ರೆ ‘ಹೇ, ಕಂಡಿದ್ದ ಗುರೂ’ ಅಂತಾರಷ್ಟೆ. ಅದಕ್ಕೇ ನಂಗನ್ನಿಸೋದು ಅಸಲಿ ಬಿಗ್ ಬಾಸ್ ಕೂಡಾ ಯಾರಿಗೂ ಕಾಣ್ಸೋದೇ ಇಲ್ಲ… ಹೌದು ಸ್ವಾಮಿ…

 

‍ಲೇಖಕರು admin

December 15, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: