ಗೆಳೆಯ ಸೂರಿ ಕವಿತೆಗೆ ಒಲಿದಿದ್ದಾರೆ. ‘ನಾತಲೀಲೆ’ ಕಥೆಗಳನ್ನು ಬರೆದ, ಕಾದಂಬರಿ ಬರೆದ, ನಾಟಕ
ಬರೆದು ನಿರ್ದೇಶಿಸಿ ಸುಖವಾಗಿದ್ದ ಈ ಟಿ ವಿ ಯ ಮುಖ್ಯಸ್ಥ ಸೂರಿ ಕವಿತೆಯತ್ತ ಮುಖ ಮಾಡಿ ನಿಂತಿದ್ದಾರೆ. ಗುಲ್ಜಾರ್ ಬೆನ್ನು ಹಿಡಿದು ಅವರು ಬರೆದ ಕವಿತೆ ಇಲ್ಲಿದೆ. ತಮ್ಮ ಮೊದಲ ಕವಿತೆಯನ್ನು ‘ಅವಧಿ’ಯೊಂದಿಗೆ ಹಂಚಿಕೊಂಡಿದ್ದಕ್ಕೆ ನಮಗೆ ಖುಷಿ ಇದೆ.
-ಸೂರಿ
ಯಾವುದೋ ಗಾಳಿಯ ಹೊಡೆತವಿರಬೇಕು
ಗೋಡೆಯ ಮೇಲಿನ ಚಿತ್ರವನ್ನು
ಓರೆ ಮಾಡಿ ಬಿಟ್ಟಿದೆ.
–
ಹೋದ ಶ್ರಾವಣದಲ್ಲಿ ಗೋಡೆಗಳು
ಇಷ್ಟು ಹಸಿಯಾಗಿರಲಿಲ್ಲ.
ಅದೇಕೋ ಈ ಸಾರಿ ಗೋಡೆಗಳೆಲ್ಲ ಒದ್ದೆ.
ಹಸಿಯ ಮುದ್ದೆ.
ಉದ್ದಗಲಕ್ಕೂ ಸೀಳಿದಂತೆ ಗೆರೆಗಳು.

ಹಸಿಯ ಪಸೆ ಗೋಡೆಗುಂಟ
ಗೆರೆ ಗೆರೆಯಾಗಿ ಇಳಿಯುತ್ತದೆ
ಒಣ ಕೆನ್ನೆಯ ಮೇಲೆ ಹಸಿ ಕಣ್ಣೀರು ಇಳಿದಂತೆ.
–
ಸೋನೆ ಮಳೆ ಪಿಸುಗುಡುತ್ತಿತ್ತು
ಛಾವಣಿಯ ಮೇಲೆ.
ತನ್ನ ಪುಟ್ಟ ಬೆರಳಲ್ಲಿ
ಕಿಡಕಿಯ ಗಾಜಿನ ಮೇಲೆ
ಗೆರೆ ಗೆರೆಯಾಗಿ ಸಂದೇಶವನ್ನು ಬರೆಯುತ್ತಿತ್ತು.
ಈಗ ಬಿಕ್ಕುತ್ತ ಬೆಳಕಿಂಡಿಯ ಹೊರಗೆ
ಮುಸುಗಿಟ್ಟು ಕೂತಿದೆ.
–
ನಡುಹಗಲುಗಳು ಈಗ
ಕಾಯಿಗಳಿರದ ಚದುರಂಗದ ಖಾಲಿ ಹಾಸಿನಂತಿವೆ.
ದಾಳ ಹಾಕುವವರಿಲ್ಲ.
ಕಾಯಿ ನಡೆಸುವವರಿಲ್ಲ.
–
ಈಗ ದಿನ ಬೆಳಗಾಗುವುದೂ ಇಲ್ಲ.
ಕತ್ತಲಾಗುವುದೂ ಇಲ್ಲ.
ಎಲ್ಲ ನಿಶ್ಚಲ ನಿಂತಿವೆ.
–
ಅದೇನು ಗಾಳಿಯ ಹೊಡೆತವೇನು?
ಗೋಡೆಯ ಮೇಲಿನ ಚಿತ್ರವನ್ನು
ಓರೆ ಮಾಡಿದೆ.





Enjoyed reading these lines.
Went back to them again and again..
Glad.
ಖುಷಿ ಕೊಟ್ಟ ಸಾಲುಗಳಿವು
ಕಾಯಿಗಳಿರದ ಚದುರಂಗದ ಹಾಸು…..ದಾಳ ಹಾಕುವವರಿಲ್ಲದೇ ನಡೆಯ ನಿರ್ಧರಿಸುವುದೆಂತು?…..
ನಾಥ ಲೀಲೆಯ ಸೂರಿಗೆ ನಾಟಕ ಕಾದಂಬರಿಯ ಹಾಗೇ ಪದ್ಯವೂ ಒಲಿದದ್ದು ಸಂತಸದ ವಿಚಾರ.
-ಡೀಎಸ್ಸಾರ್
Nice.. ishta aaythu..
Very nice poetry sir! Enjoyed every bit of it.
Thanks
Parameshwar Gundkal
Yeah.. Idu khandita recession effect sir!!
adrindaagiye, ಅದೇಕೋ ಈ ಸಾರಿ ಗೋಡೆಗಳೆಲ್ಲ ಒದ್ದೆ.ಹಸಿಯ ಮುದ್ದೆ.ಉದ್ದಗಲಕ್ಕೂ ಸೀಳಿದಂತೆ ಗೆರೆಗಳು…
Tumbaa chennagide…
Its beautiful simply…….Thanks for the post….