ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಟೀಚರ್’ ಬರುತ್ತಿದೆ..

ಸ್ಕೋಪ್ಸ್‌ ವಿಚಾರಣೆಗೆ ನೂರು ವರ್ಷ..

ಅಮೆರಿಕದ ದಕ್ಷಿಣ ರಾಜ್ಯದ ಟೆನೆಸಿ ಎಂಬ ಪ್ರಾಂತ್ಯದ ಚಿಕ್ಕ ಊರಾದ ಡೇಟನ್ ನಲ್ಲಿದ್ದ ಬಟ್ಲರ್ ಎಂಬ ಹೆಸರಿನ ಒಬ್ಬ ಶ್ರೀಮಂತ ರೈತನಿಗೆ ಡಾರ್ವಿನ್ ಸಿದ್ಧಾಂತಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿ ಜನರೆಲ್ಲ ನಾಸ್ತಿಕರಾಗಿಬಿಡುತ್ತಾರೆ ಎಂಬ ಭಯ ಶುರುವಾಯಿತು. ಶಾಲಾ ಮಟ್ಟದಲ್ಲಿಯೇ ಈ ಸಿದ್ಧಾಂತಗಳು ಹರಡುತ್ತಿವೆ ಎಂದು ತಿಳಿದು ಈ ಸಿದ್ಧಾಂತವನ್ನು ಪಾಠ ಮಾಡದಂತೆ 1925 ರ ಬಟ್ಲರ್ ಕಾಯ್ದೆ ತರುವಲ್ಲಿ ಯಶಸ್ವಿಯಾದನು. ಬಟ್ಲರ್ ಕಾಯ್ದೆಯ ಪ್ರಕಾರ, “ರಾಜ್ಯ ಬೆಂಬಲಿತ ಶಾಲೆಗಳಲ್ಲಿ ಶಿಕ್ಷಕರು” ಬೈಬಲ್‌ನಲ್ಲಿ ಹೇಳಿರುವಂತೆ ಮನುಷ್ಯನ ದೈವಿಕ ಸೃಷ್ಟಿಯ ಕಥೆಯನ್ನು ಒಪ್ಪದಿರುವ ಯಾವುದೇ ಸಿದ್ಧಾಂತವನ್ನು ಕಲಿಸುವುದು ತಪ್ಪು ಮತ್ತು ಬದಲಿಗೆ ವಿಕಾಸವಾದದ ಪ್ರತಿಪಾದನೆಗಳನ್ನು ಕಲಿಸುವುದು ಕಾನೂನುಬಾಹಿರ” ಎಂದು ನಿರೂಪಿಸಲ್ಪಟ್ಟಿತ್ತು.

ಆದರೆ, ಜಾನ್‌ ಸ್ಕೋಪ್ಸ್‌ ಎಂಬ ಅರೆಕಾಲಿಕ ಶಿಕ್ಷಕ ತಾನು ಡಾರ್ವಿನ್ ಸಿದ್ಧಾಂತವನ್ನು ವಿದ್ಯಾಥಿಗಳಿಗೆ ಪಾಠ ಮಾಡಿರುವುದಾಗಿ ಹೇಳಿದನು. ಆತನನ್ನು ಬಂಧಿಸಲಾಯಿತು. ಜುಲೈ 1925 ರಲ್ಲಿ ವಿಚಾರಣೆ ಪ್ರಾರಂಭವಾಯಿತು. ಸ್ಕೋಪ್ಸ್ ಪರವಾಗಿ ರಕ್ಷಣಾ ವಕೀಲರ ತಂಡವನ್ನು ಮುನ್ನಡೆಸಿದ್ದು ಕ್ಲಾರೆನ್ಸ್ ಡಾರೋ ಎಂಬ ದೇಶದ ಪ್ರಸಿದ್ಧ ಮತ್ತು ವಾಕ್ಚಾತುರ್ಯದ ವಕೀಲರು. ಅವರು ಬೌದ್ಧಿಕ ಸ್ವಾತಂತ್ರ‍್ಯದ ಪ್ರಬಲ ರಕ್ಷಕರಾಗಿದ್ದರು. ಬಟ್ಲರ್ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಲು ಮತ್ತು ಶೈಕ್ಷಣಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಡಾರೋ ಬಯಸಿದ್ದರು. ಸ್ಕೋಪ್ಸ್ ವಿರುದ್ಧ ಪ್ರಾಸಿಕ್ಯೂಷನ್ ತಂಡವನ್ನು ಮುನ್ನಡೆಸಿದ್ದು ವಿಲಿಯಂ ಜೆನ್ನಿಂಗ್ಸ್ ಬ್ರಿಯಾನ್ ಮೂಲತಃ ಒಬ್ಬ ರಾಜಕಾರಣಿ ಮತ್ತು ಧಾರ್ಮಿಕ ಮೂಲಭೂತವಾದಿ ಕ್ರಿಶ್ಚಿಯನ್. ಆಧುನಿಕ ವಿಜ್ಞಾನ ಮತ್ತು ಜಾತ್ಯತೀತ ಮನೋಭಾವಗಳು ಧಾರ್ಮಿಕ ಶ್ರದ್ಧೆಯನ್ನು ನಾಶಗೊಳಿಸುತ್ತವೆ ಎಂದು ಅವರು ನಂಬಿದ್ದರು.

ಈ ವಿಚಾರಣೆ ಧರ್ಮ ಮತ್ತು ವಿಜ್ಞಾನಗಳ ನಡುವಿನ ಮೂಲಭೂತ ಸಂಗತಿಗಳನ್ನು ಚರ್ಚಿಸಿತು. ಹನ್ನೊಂದು ದಿನಗಳವರೆಗೆ ಈ ವಿಚಾರಣೆ ನಡೆದು ಸ್ಕೋಪ್ಸ್‌ ತಪ್ಪಿತಸ್ಥರೆಂದು ತೀರ್ಪು ಬಂದರೂ ಈ ವಿಚಾರಣೆಯ ಪರಿಣಾಮಗಳು ಮುಂದಿನ ಹಲವು ಸುಧಾರಣೆಗಳನ್ನು ಪ್ರಭಾವಿಸಿತು.

ಈ ವಿಚಾರಣೆಗೆ ಈಗ ನೂರು ವರ್ಷ. ಟೀಚರ್ ಪತ್ರಿಕೆಯ ಅಕ್ಟೋಬರ್‌ ಸಂಚಿಕೆಯಲ್ಲಿ ಪ್ರೊ.ಪಾಲಹಳ್ಳಿ ವಿಶ್ವನಾಥ್ ರವರು ಈ ವಿಚಾರಣೆಯನ್ನು ನೆನಪಿಸಿಕೊಂಡು ಈ ಕಾಲದ ಹಲವು ಸಂಗತಿಗಳನ್ನು ನೋಡಲು ಬೆಳಕು ತೋರಿದ್ದಾರೆ.

ಟೀಚರ್‌ ಪತ್ರಿಕೆಯ ಚಂದಾದಾರರಾಗಲು ವಾಟ್ಸಾಪ್‌ ಮಾಡಿ 9481509699

-ಸಂಪಾದಕರು, ಟೀಚರ್

‍ಲೇಖಕರು Admin

23 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading