ರಂಗಭೂಮಿಯ ಬಗೆಗಿನ ಲೇಖನಗಳನ್ನು ಹೊತ್ತ ’ಈ ಮಾಸ ನಾಟಕ’ ತಿಂಗಳ ಪತ್ರಿಕೆಯ ಹೊಸ ಸಂಚಿಕೆ ಬಂದಿದೆ. ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಬಾದಲ್ ಸರ್ಕಾರ್ ಅವರ ಬಗ್ಗೆ ಎಲ್.ಕೃಷ್ಣಪ್ಪ ಅವರು ಬರೆದಿರುವ ಸಂಪಾದಕೀಯ, ಎಸ್.ಮಾಲತಿ ಸಾಗರ, ಹೊರೆಯಾಲ ದೊರೆಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಮುಂತಾದವರ ಲೇಖನಗಳು ಈ ಪತ್ರಿಕೆಯ ಒಳಪುಟಗಳನ್ನು ತುಂಬಿವೆ.
ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ರಂಗೋತ್ಸವದ ಲೇಖನಗಳು ಈ ಸಂಚಿಕೆಯ ವಿಶೇಷ ಲೇಖನಗಳಾಗಿವೆ. ಜಯಲಕ್ಷ್ಮಿ ಪಾಟೀಲ, ಐ.ಕೆ.ಬೊಳುವಾರು, ಜೆ.ಶ್ರೀನಿವಾಸ ಮೂರ್ತಿ, ಗುಡಿಹಳ್ಳಿ ನಾಗರಾಜ ಮುಂತಾದವರುಗಳು ಇರುವ ಸಂಪಾದಕೀಯ ಮಂಡಳಿ ಹೊಂದಿರುವ ಈ ಪತ್ರಿಕೆ ರಂಗ ಸಂಸ್ಕೃತಿಯ ದನಿಯಾಗಿ ಮೂಡಿಬರುತ್ತಿದೆ.
ಚಂದಾದಾರರಾಗಲು ಸಂಪರ್ಕ: ಎಲ್ ಕೃಷ್ಣಪ್ಪ-99001 14314







ಅವಧಿ ಪತ್ರಿಕೆ ತುಂಬಾ ಚೆನ್ನಾಗಿ ಸಾಹಿತ್ಯ ವಿಷಯಗಳನ್ನ ಬಿತ್ತರಿಸುತ್ತೀದೆ