ಹೊಲಸಿನ ಮೇಲೆ ಹೊರಳುವುದು ಯಾವ ದೇವರಿಗೂ ಪ್ರೀತಿಯಾಗದು..

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಬರೆದ ‘ಮಡೆ ಸ್ನಾನ’ದ ಬಗೆಗಿನ ಲೇಖನ ಇಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಇದಕ್ಕೆ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ಇಲ್ಲಿದೆ. ಜಿ ಎನ್ ಅಶೋಕ ವರ್ಧನ ಅವರು ನೀಡಿದ ಪ್ರತಿಕ್ರಿಯೆಯನ್ನು ಈಗ ನೀವು ಓದುತ್ತಿದ್ದೀರಿ. ಬನ್ನಿ ಚರ್ಚೆಯಲ್ಲಿ ನೀವೂ ಭಾಗವಹಿಸಿ ** -ಜಿ ಎನ್ ಅಶೋಕವರ್ಧನ ಸಮಾಜ ಎನ್ನುವುದು ಪ್ರಕೃತಿ ವಿಧಿಸಿದ ಕೂಟ ಅಲ್ಲ. ಆದರೆ ಇದು ಪ್ರಕೃತಿ ಅನುಸಾರಿಯಾಗಿರುವಷ್ಟೂ ಕಾಲ ಆರೋಗ್ಯಪೂರ್ಣವಾಗಿ ವೃದ್ಧಿಸುತ್ತದೆ, ಇಲ್ಲವೇ ನಾಶವಾಗಿ ಹೋಗುತ್ತದೆ. ಇಲ್ಲಿ ಪ್ರದರ್ಶನ ಮತ್ತು ಪ್ರಚಾರಕ್ಕೆ ಬರುವ ವೈಯಕ್ತಿಕ ನಂಬಿಕೆಗಳನ್ನು ಸಾಮಾಜಿಕ ಹಿನ್ನೆಲೆಯಲ್ಲಿ, ಹಾಗೇ ಸಾಮಾಜಿಕ ಆಚರಣೆಗಳನ್ನು ಪ್ರಾಕೃತಿಕ ಔಚಿತ್ಯದ ದೃಷ್ಟಿಯಲ್ಲಿ ಕನಿಷ್ಠ ವಿಚಾರವಂತರಾದರೂ ನೋಡಿ, ವಿಮರ್ಶಿಸುವುದು ಅವಶ್ಯ. ನಂಬಿಕೆಗಳ ಹೆಸರಿನ ನರಬಲಿ, ಪ್ರಾಣಿ ಹಿಂಸೆ, ಸತಿ, ಅಸ್ಪೃಶ್ಯತೆ ಇತ್ಯಾದಿಗಳನ್ನು ಸಮಾಜ ತಿರಸ್ಕರಿಸಿದ ರೀತಿಯಲ್ಲೇ ಮಡೆಸ್ನಾನವನ್ನೂ ಬಹಿಷ್ಕರಿಸಲೇಬೇಕು. ಆಷ್ಟಕ್ಕೂ ಬಿಳಿಮಲೆಯವರು ತಾನು ಯಾವುದೇ ಎಂಜಲಿನ ಮೇಲೆ ಹೊರಳಲಾರೆ ಎನ್ನುವುದನ್ನು ಸ್ಪಷ್ಟಪಡಿಸುವಲ್ಲಿ ಪ್ರಾಸಂಗಿಕವಾಗಿ ಬ್ರಾಹ್ಮಣರ ಎಂಜಲು ಎಂದಿದ್ದಾರೆಯೇ ಹೊರತು ಗಣೇಶರು ಭ್ರಮಿಸಿದ ಬ್ರಾಹ್ಮಣ ದ್ವೇಷದಿಂದ ಅಲ್ಲ. ಬಡತನ, ಕಷ್ಟ, ಮನೋವ್ಯಾಕುಲಗಳಿಗೆ ಹೊಲಸಿನ ಮೇಲೆ ಹೊರಳುವುದು ಮದ್ದಾಗದು, ಯಾವ ದೇವರಿಗೂ ಪ್ರೀತಿಯಾಗದು.  ]]>

‍ಲೇಖಕರು G

December 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ganesh

    ಮಾನ್ಯ ಅಶೋಕವರ್ಧನ ಸರ್,
    ಬ್ರಾಹ್ಮಣರು ಪ್ರಾಸಂಗಿಕವಾಗಿ ಉದ್ಧರಿಸಲ್ಪಟ್ಟಿದ್ದರೆ ನೋ ಇಶ್ಯೂಸ್. ಆದರೆ ಪ್ರಾಸಂಗಿಕವಾಗಿಯಾದರೂ ಬ್ರಾಹ್ಮಣರು ಮಾತ್ರ ಉದ್ಧರಿಸಲ್ಪಡುತ್ತಾರೆ ಎಂಬುದು ಗಮನಾರ್ಹ. ಇರಲಿ. ವಿಷಯ ಬೇರೆಯೇ ಇದೆ.
    ಹೊಲಸಿನ ಮೇಲೆ ಉರುಳಾಡುವುದು ಯಾವ ದೇವರಿಗೂ ಇಷ್ಟವಾಗುವುದಿಲ್ಲ ಎಂದಿದ್ದೀರಿ. ಇದು ತಮ್ಮ ಅಭಿಪ್ರಾಯ. ತಮ್ಮ ಅಭಿಪ್ರಾಯವನ್ನುಗೌರವಿಸುತ್ತೇನೆ. ಆದರೆ ಅದು ಇಷ್ಟವಾಗುತ್ತದೆಯೋ ಇಲ್ಲವೋ ಎಂಬುದನ್ನು ದೇವರೇ ಹೇಳಬೇಕು. ಹೊಲಸು ಬೈಗುಳಗಳಿಂದ ಬೈಸಿಕೊಳ್ಳುವ, ಮೆಟ್ಟಿನಿಂದ ಹೊಡೆಸಿಕೊಳ್ಳುವ ದೇವರುಗಳೇ ನಮ್ಮ ನಡುವೆ ಇರುವಾಗ……….ಇರಲಿ.
    ಇನ್ನು ಪ್ರಾಣಿ ಹಿಂಸೆ ಎಂದಿದ್ದೀರಿ. ಪ್ರಾಣಿ ಹತ್ಯೆ ಬಹಿಷ್ಕಾರವಾಗಬೇಕು ಎಂದಿದ್ದರೆ ಸೂಕ್ತವಾಗಿತ್ತು. ಅಲ್ಲೂ ಚೌಕಾಸಿ ಯಾಕೆ ಅಲ್ವಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: