ಗಜಲ್
ಪ್ರಕಾಶ ಬಿ

ಹೊಗೆ ಉಗುಳುವ ಕೆಂಡವೇ ನಿನ್ನದೆಂತಹ ನೋವು
ಕೆಂಡ ಕರಗಿ ಬೂದಿಯಾದ ನೀಲಿ ಹೂವೆ ನಿನ್ನದೆಂತಹ ನೋವು
ಜಗವ ಸುತ್ತಿದ ಧಗೆಯದು ಬಗೆ ಬಗೆ ಚಿತ್ತಾರವಾಗುತ್ತಿದೆ
ಮಾತು ತಡೆ ಹಿಡಿದೆ ಬಿಕ್ಕುತ್ತಿರುವ ಜೀವವೇ ನಿನ್ನದೆಂತಹ ನೋವು
ಮಳೆ ನಿಂತ ಮರುಕ್ಷಣದಿ ಮರದೆಲೆಯಲ್ಲಿ ರಕ್ತದ ಹನಿಗಳು ಹೆಪ್ಪುಗಟ್ಟುತ್ತಿವೆ
ಜೀವದ ಒಡಲದು ನಿನ್ನ ನೆನೆದೆ ಹುರಿಗೊಂಡಿವೆ ನಿನ್ನದೆಂತಹ ನೋವು
ದೀಪ ಧೂಪದಲ್ಲಿ ಲೋಕದ ಖುಷಿ ಕಂಡು ಕರಗಿ ಹೋದೆ
ಕಪರ್ೂರದಂತೆ ಹೆಸರ ಉಳಿಸದೇ ಹೊರಟಿರುವೆ ನಿನ್ನದೆಂತಹ ನೋವು
ಎತ್ತರೆತ್ತರ ಬೆಳೆದರೂ ನಿನ್ನ ಸ್ಪಶರ್ಿಸಲಾಗದೆ ಸೋತು ಹೋಗುತ್ತಿರುವೆ ದಿನ ದಿನ
ಮನದ ನೋವಿನ ಕತ್ತಲಲಿ `ಪ್ರಕಾಶ’ವಿದ್ದರೂ ನಲುಗುತ್ತಿರುವೆ ನಿನ್ನದೆಂತಹ ನೋವು






ಮನದ ನೋವಿನ ಕತ್ತಲಲಿ `ಪ್ರಕಾಶ’ವಿದ್ದರೂ ನಲುಗುತ್ತಿರುವೆ ನಿನ್ನದೆಂತಹ ನೋವು
super lines chennagide
very nice prakha avare..