ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಣ್ಣನ್ನು ಹೆಣ್ಣಿನ ವಿರುದ್ಧವೇ..

ಯಮುನಾ ಗಾಂವ್ಕರ್ 

ಸ್ಯಾನಿಟರಿ ನ್ಯಾಪ್ಕಿನ್ ವಿಚಾರದಲ್ಲಿ ಬರೆದ ಫೇಸ್ ಬುಕ್ ಪೋಸ್ಟ್ ಗಳು..

“ಈ ಸ್ಯಾನಿಟರಿ ಪ್ಯಾಡ್ ನ ಗುಣ ಬಿಜೆಪಿಗಿಲ್ಲದೇ ಹೋಯಿತು. ಹೆಣ್ಣಿನ ಆರೋಗ್ಯ ಕಾಪಾಡಲು ಸ್ರಾವವನ್ನು ತಾನು ಹೀರುತ್ತಿದ್ದ ಈ “ಹತ್ತಿ”ಗುಣದಿಂದ ಹಣ ಹೀರಲು ಹೊರಟ ಕೇಂದ್ರ ಬಿಜೆಪಿಯ ಜಿಎಸ್.ಟಿ ಕೇವಲ ” ಪೌರುಷಾರ್ಥಕ್ಕಾಗಿ”.

ಹೆಣ್ಣು ಹೆತ್ತವರೇ ಯೋಚಿಸಿ.

ಹೆಣ್ಣನ್ನು ಕಾಡಿಗೆ ಅಟ್ಟಿದವರ ಸಂತಾನಕ್ಕೆ ಹೆಂಡತಿಯನ್ನು ತೊರೆದು ಪ್ರಧಾನಿಯಾದವರಿಗೆ ಮತ್ತು ಮಕ್ಕಳ ಮಹಿಳೆಯರ ಮಾರಾಟ ಜಾಲದಲ್ಲಿದ್ದವರಿಗೆ ಈ ಋತುಸ್ರಾವದ ಗೋಳು ಗೊತ್ತಿಲ್ಲ…

ನೀವು ದಬ್ಬಾಳಿಕೆಯಿಂದ ಅನಾದಿ ಕಾಲದಿಂದಲೇ ಹೆಣ್ಣಿನ ಹಕ್ಕು ಸ್ವಾತಂತ್ರ್ಯ ಕಸಿದುಕೊಂಡರೂ, ಬಾಯಿ ಗಂಟಲಿಗೆ ಗಂ ಟೇಪ್ ಝಡಿದರೂ, ಕಾಲಿಗೆ ಸಂಸ್ಕೃತಿಯ ಸರಪಳಿ ಕಟ್ಟಿದರೂ, ನಾವು ಋತುಸ್ರಾವವೆಂಬ ಸೃಷ್ಟಿಕಾರ್ಯದ ಸಹಜ ನೈಸರ್ಗಿಕ ಹಕ್ಕು ಉಳಿಸಿಕೊಂಡಿದ್ದೇವೆ. ಈಗ ನಿಮ್ಮ ಕಣ್ಣು ಅದರ ಮೇಲೂ ಬಿತ್ತಾ?

ಈ ಹಿಂದೆ ಯಾರೋ ಪರಿವಾರದವರು ಹೇಳಿದ್ರು ಹೆಣ್ಣಿನ ಸ್ರಾವದಿಂದ ಕ್ಯಾನ್ಸರ್ ಗುಣವಾಗುತ್ತದೆ ಎಂದು. ಅದು ನಂಬಿ ಕೆಟ್ಟ ಭಕ್ತಾದಿಗಳು ತಣ್ಣಗೆ ಆ ವಿಷಯ ಮರೆಯಿಸಿದರು. ಅತ್ಯಾಚಾರ ಆದಾಗ ಅಣ್ಣಾ ಎನ್ನಿ ಅಥವಾ ಖುಷಿ ಅನುಭವಿಸಿ ಎಂದ್ರು ಸತ್ಸಂಗದ ಸ್ವಾಮಿಗಳು. ಆದರೂ ಹೆಣ್ಣು ಬಗ್ಗಿಲ್ಲ. ಈಗ ಹೆಣ್ಣಿನ ಬಾಯಿಂದಲೇ ಹೆಣ್ಣುಗಳ ವಿರುದ್ಧ ಸಂಸ್ಕೃತಿ ಹೆಸರಿನಲ್ಲಿ ಮಂತ್ರಾಕ್ಷತೆ ಕೊಡುತ್ತಿದ್ದೀರಿ. ಅದು ನಿಮ್ಮ ರಾಜಕಾರಣ.

ಆದರೆ ಈ ರಕ್ತ ಹೀರುವ ಸ್ಯಾನಿಟರಿ ಪ್ಯಾಡ್ ನಲ್ಲಿಯೂ ನೀವು ತೆರಿಗೆ ಹಣ ಹೀರುತ್ತಿದ್ದೀರಲ್ಲಾ? ನಿಮ್ಮ ಜಿಗಳೆ ಗುಣಕ್ಕೆ ಧಿಕ್ಕಾರ. ಅಂತಿಮ ಗೆಲುವು ನಮ್ಮದೇ. ”

@@@

“ಹೆಣ್ಣನ್ನು ಹೆಣ್ಣಿನ ವಿರುದ್ಧವೇ ಎತ್ತಿಕಟ್ಟುವ ಸನಾತನ ಮನೋವ್ಯಾದಿಗಳಿಗೆ ನನ್ನದೊಂದು ಧಿಕ್ಕಾರ.

ಮನದ ಮಾತು ಹೆಣ್ಣಿಗೆ ಒಂದೇ ಆಗಿರುತ್ತದೆ. ಆದರೆ ಮಡಿ-ಮೈಲಿಗೆಯ ಮನಸ್ಸಿನ ಪುರುಷ ಪ್ರಧಾನ ರಾಜಕಾರಣದ ವಕ್ತಾರರಾದ  ಮಾಳವಿಕಾಗೆ ಹೇಗೆ ಗೊತ್ತಾದೀತು?

ಶ್ರೀಮಂತಿಕೆಯ ಛತ್ರಿ ಕೆಳಗೆ ಇದ್ದು ಸಿನೇಮಾ ಧಾರಾವಾಹಿ ಗೆ ಮೇಕಾಪ್ ಮಾಡ್ಕೊಳ್ತಾ ಅವರ “ಆ ದಿನಗಳಲ್ಲೂ” ಮಾನ ಕಾಪಾಡಿದ್ದು ಯಾವುದೆಂದು ಅವರನ್ನು ಭೇಟಿಯಾದಾಗ ಏಕಾಂತದಲ್ಲಿ ಕೇಳೋಣ. ಅಥವಾ ಇಷ್ಟೊತ್ತಿಗೆ ಅವರ ಅಂತಃಸ್ಸಾಕ್ಷಿ ಮಾಳವಿಕಾ ನೀನು ಸುಳ್ಳು ಹೇಳಬಾರದಿತ್ತು” ಎಂದು ನುಡಿದಿರಲಿಕ್ಕೂ ಸಾಕು.

“ಮೊದಲೆಲ್ಲ “ಇದರ” ಬಗ್ಗೆ “ಆ ದಿನಗಳ” ಬಗ್ಗೆ ಟಿವಿ ಪೇಪರ್ ಗಳಲ್ಲಿ ಕಂಪನಿ ಜಾಹಿರಾತು ಬಂದರೂ ನೋಡದೇ, ಮಡಿವಂತಿಕೆಯಿಂದ ಪಾವಿತ್ರ್ಯ ಶೀಲ ಎಂದೆಲ್ಲ ಹೇಳುವ ಸಂಸ್ಕೃತಿ ವಕ್ತಾರರು ಈಗ ಅದನ್ನು ಹರಾಜಿಗಿಟ್ಟಿದ್ದಾರೆ. ಮಡಿ ಮೈಲಿಗೆ ಹೆಸರಲ್ಲಿ ಸಹಜ ಪ್ರಕ್ರಿಯೆಯನ್ನು ಅವಳ ದೌರ್ಬಲ್ಯದ ಸಂಕೇತವಾಗಿ ನೋಡಲಾಗುತ್ತಿತ್ತು. ಆದರೆ ಈ ಬಾರಿ ಮೌನ ಮುರಿದ ಹೆಣ್ಣು ಸಶಕ್ತವಾಗಿ ಬಹಿರಂಗವಾಗಿ ಹೋರಾಡುತ್ತಿದ್ದಾಳೆ.”

“ಅಚ್ಛೇದಿನದ ದಾರಿತುಂಬ ಹೆಣ್ಣಿನ ಋತುಸ್ರಾವ! ಅಂಗವಿಕಲರ ರೋದನ. ಸಾಮಾನ್ಯರ ಹಸಿವಿಗೂ ಜಿಎಸ್.ಟಿ. ಕಣ್ಣೀರು ಒಂದು ಸರಕು. ಬಿಜೆಪಿ ಇದನ್ನೂ ಮಾರಾಟಕ್ಕಿಟ್ಟಿದೆ.”

‍ಲೇಖಕರು avadhi

9 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading