ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಚ್ ಶಾಂತಾರಾಮ್ ಪ್ರಶಸ್ತಿಗೆ ಕಾದಂಬರಿ ಆಹ್ವಾನ…

ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, ೨೦೨೧ರಿಂದ ೨೦೨೨ರ ಅವಧಿಯಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಮೇ ೨೦ರೊಳಗೆ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾಕಾರ‍್ಸ್ ಕಾಲೇಜು ಕುಂದಾಪುರ -೫೭೬೨೦೧ ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶವಿರುವುದಿಲ್ಲ.

ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, ಹದಿನೈದು ಸಾವಿರ ರೂಪಾಯಿಯೊಂದಿಗೆ ಬೆಳ್ಳಿಫಲಕ ನೀಡಲಾಗುವುದೆಂದು ಪ್ರಶಸ್ತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 9449257263 ಸಂಪರ್ಕಿಸಬಹುದು.

‍ಲೇಖಕರು avadhi

30 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading