ಲಂಕೇಶ್ ಅವರನ್ನು ಯಾವ ದಿಕ್ಕಿನಿಂದೆಲ್ಲಾ ನೋಡಬಹುದು ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಲಂಕೇಶ್ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಪುಂಡಲೀಕ ಕಲ್ಲಿಗನೂರು ಅವರು ‘ಹುಳಿಮಾವು’ ಲಂಕೇಶರನ್ನು ಗ್ರಹಿಸಿರುವುದು ಹೀಗೆ. ಕಲಾವಿದರು ಬ್ಲಾಗ್ ಲೋಕಕ್ಕೆ ಪ್ರವೇಶಿಸಿರುವುದು ತೀರಾ ಕಡಿಮೆ. ಪುಂಡಲೀಕ ಕಲಾಪ್ರಪಂಚ ಇವರ ಬ್ಲಾಗ್. ಚಿತ್ರ ಬರೆಯುವುದರ ಜೊತೆಗೆ ಕವಿತೆ ಕಥೆ ಇವರ ಹವ್ಯಾಸ.
‘ಹುಳಿಮಾವು’ ಲಂಕೇಶ್



ಅದ್ಭುತ !!!! ಬಹುಷಃ ಲಂಕೇಶರನ್ನು ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಿಸಲು ಸಾದ್ಯವೇ ಇಲ್ಲವೇನೋ….ಸುಘೋಷ್ ನಿಗಳೆ
“ಹುಳಿಮಾವಿನ ಮರ” ಪುಸ್ತಕ ಎಲ್ಲಿ ಸಿಗತ್ತೆ? ನಾನಂತೂ ಎಷ್ಟೋ ವರ್ಷಗಳಿಂದ ಹುಡುಕ್ತಾ ಇದೀನಿ. ಆನ್‍ಲೈನ್ ಮೂಲಕ ತರಿಸಬಹುದೇ ತಿಳಿಸಿ.
wonderful!
uma rao
ಕಲಾವಿದ ಪುಂಡಲೀಕ ಅವರನ್ನು ಬ್ಲಾಗ್ ಲೋಕಕ್ಕೆ ಸ್ವಾಗತಿಸಿದ ಪರಿ ಕಂಡು ಸಂತೋಷವಾಯಿತು. ಪುಂಡಲೀಕ ಹಳ್ಳಿಯಿಂದ ಬಂದವರು. ಹಳ್ಳಿ ಸಹಜವಾದ ವಿನಯ, ಸಂಕೋಚ, ಮುಗ್ಧತೆಗಳು ಅವರ ಗುಣ. ಹೀಗಾಗಿಯೇ ಅವರ ರೇಖೆಗಳಲ್ಲಿ ಜೀವಂತಿಕೆಯಿದೆ, ಸ್ವಂತಿಕೆಯಿದೆ.
ಪುಂಡಲೀಕ ಲಂಕೇಶರ ಗರಡಿಯಲ್ಲಿ ಮಿಂಚುತ್ತಿದ್ದಾಗ ನೂರಾರು ಕಲಾವಿದರು ಅವರನ್ನು ಅನುಕರಿಸುವ ಮೂಲಕವೇ ಕಲಾಲೋಕ ಪ್ರವೇಶಿಸಿ ನಂತರ ತಮ್ಮದೇ ಶೈಲಿ ರೂಢಿಸಿಕೊಂಡಿದ್ದರು. ಪುಂಡಲೀಕರ ರೇಖೆಗಳ ಶಕ್ತಿ ಹಾಗಿತ್ತು. ಹೊಸಪೀಳಿಗೆಯ ಕಲಾವಿದರನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುವ ಪುಂಡಲೀಕ ತಮ್ಮ ಹಣ, ಶ್ರಮ, ಸಮಯ ವಿನಿಯೋಗಿಸಿ ಕಲಾಶಾಲೆಯೊಂದನ್ನು ತೆರೆದು ಕಲಾವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದವರು.
ಪುಂಡಲೀಕ ಅಪ್ಪಟ ದೇಸೀಪ್ರತಿಭೆ. ಹೀಗಾಗಿ ಅಕಾಡೆಮಿಕ್ ಶಿಸ್ತನ್ನು ಮೀರಿದ ಮಣ್ಣಿನ ವಾಸನೆ ಇವರ ಚಿತ್ರಗಳಲ್ಲಿದೆ.
ಅವಧಿಗೆ ಮತ್ತೊಮ್ಮೆ ಧನ್ಯವಾದಗಳು.