ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು

ನನಗೊಂದು ಗುಮಾನಿ ಇದೆ: ರೈತ ಚಳವಳಿಯಿಂದಲೂ ಸಂಘಪರಿವಾರದಿಂದಲೂ ಬೆಳೆದು ಬಂದ ಶ್ರೀ ಯಡಿಯೂರಪ್ಪನವರು ಮೋದಿಯಂತೆ ಆಗಲು ಬಯಸಿದರೂ ಸಂಪೂರ್ಣ ಆಗಲಾರದೆ ಈಗ ಕಷ್ಟದಲ್ಲಿದ್ದಾರೆ. ಅವರನ್ನು ಕೆಳಗಿಳಿಸಲೆಂದೇ ಅವರ ಪಕ್ಷದ ಉಗ್ರರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ವಚನಕಾರರ ನಾಡು; ಕುವೆಂಪು ಬೇಂದ್ರೆ ಕಾರಂತರ ನಾಡು. ಇಲ್ಲಿ ಮೋದಿಯಾಗುವುದು ಕಷ್ಟವೆಂದು ನಾನು ಭಾವಿಸುತ್ತಲೇ ಗಾಂಧಿಯೇ ಹುಟ್ಟಿದಲ್ಲಿ ಮೋದಿ ಹುಟ್ಟಿದನಲ್ಲವೆ ಎಂದು ಆಶ್ಚರ್ಯ ಪಡುತ್ತೇನೆ. ಇದೇ ಶಿವನಿಗೇ ಕಂಟಕಪ್ರಾಯನಾದ ಭಸ್ಮಾಸುರನ ಕತೆ. ಕರ್ನಾಟಕ ಯಡಿಯೂರಪ್ಪನವರನ್ನು ಇಳಿಸಿ ಇನ್ನೊಬ್ಬ ಮೋದಿಗೆ ಕಾದಿದೆಯೇನೊ! ನಮ್ಮ ವಿದ್ಯಾವಂತರಾದ ಹಲವರಿಗೆ ಈಗ ಬೇಕಾಗಿರುವುದು ಸರ್ವಜನಹಿತ ನಿರ್ಲಕ್ಷಿಸಿ ಏನನ್ನಾದರೂ ಮಾಡಬಲ್ಲ, ಮಾಡಿ ಗೆಲ್ಲಬಲ್ಲ ನಾಯಕ. ಅಂಥವರು ಮಾತ್ರ ೨೧ ನೇ ಶತಮಾನದಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವಾಗಿ ಮಾಡಬಲ್ಲರೆಂಬ ಭ್ರಮೆ ಇವರಿಗೆ ಇದೆ. ಆದ್ದರಿಂದ ವಿಚಾರ ವಿಮರ್ಶೆ ಚರ್ಚೆ ಅನುಮಾನಗಳ ಪಿಸುನುಡಿಯ ತೊದಲುಗಳು ಇವರಿಗೆ ರಾಷ್ಟ್ರದ್ರೋಹವಾಗಿ ಕಾಣಿಸತೊಡಗಿದೆ. ದಿನಕ್ಕೆ ಹಲವು ಬಾರಿ ನಮಾಜುಮಾಡುವ ಮುಸ್ಲಿಮರಂತೂ Development ನ ಶತ್ರುಗಳಾಗಿ ಕಾಣುತ್ತ ಇದ್ದಾರೆ.
ಸಂಪೂರ್ಣ ಓದಿಗೆ ಭೇಟಿ ಕೊಡಿ: ಋಜುವಾತು
+++
ಹುಲಿ ಬಂತು ಹುಲಿ
೨೦೦೮ರ ಏಪ್ರಿಲ್ ತಿಂಗಳ ಒಂದು ದಿನ ಈ ಬಿಳೀಹುಲಿ ನನ್ನಂಗಡಿ ಹೊಕ್ಕಿತು. ಬೆಂಗಳೂರಿನ ವಿನಾಯಕ ಬುಕ್ ಡಿಸ್ಟ್ರಿಬ್ಯೂಟರ್ಸ್ ಎಂದಿನಂತೆ ಹೊಸತುಗಳಲ್ಲಿ ಒಂದಾಗಿ The White Tiger ಒಂದು ಪ್ರತಿ ಕಳಿಸಿದ್ದರು. ನನ್ನ ವನ್ಯದ ಗುಂಗಿನಲ್ಲಿ ಇದೇನಾದರೂ ಮಧ್ಯಪ್ರದೇಶದಲ್ಲಿ ಸೆರೆಯಲ್ಲಿರುವ ಆಲ್ಬಿನೋ ಹುಲಿಗಳ ಕಥೆಯೋ ಎಂದು ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿದೆ. ಗಟ್ಟಿ ರಟ್ಟಿನ ದಪ್ಪ ಪುಸ್ತಕ – ಎಂಥದೋ ಕಾದಂಬರಿ. ಹೀಗೇ ನೋಡಿದಾಗ ಅದರ ಮೋಡಿ ಲಿಪಿಯ ಮುಖಪುಟದಲ್ಲಿ ಯಾರೋ ಅರವಿಂದ ಎಂಬಾತನ ಚೊಚ್ಚಲ ಕೃತಿ ಎಂದಷ್ಟೇ ಕಂಡದ್ದು ನೆನಪು. ಮುನ್ಸೂಚನೆ, ಪೋಸ್ಟರ್, ನಾಮ ಅಥವಾ ಪ್ರಚಾರದ ಬಲ ಯಾವುದೂ ಇಲ್ಲದ ಆ ಪುಸ್ತಕವನ್ನು ಶೆಲ್ಫಿಗೆ ರವಾನಿಸಿದ್ದೆ. ಆ ದಿನಗಳಲ್ಲಿ ಅಂಗಡಿಗೆ ಭೇಟಿಕೊಟ್ಟ ನನಗೆ ಅಷ್ಟೇನೂ ಪರಿಚಿತನಲ್ಲದ ತರುಣ ವೈದ್ಯ ಡಾ| ಅನಿಲ್ ಶೆಟ್ಟಿ ಈ ಪುಸ್ತಕವನ್ನು ಕುರಿತು ಕೇಳಿದಾಗ ಗ್ರಂಥಾಲಯ ವಿಜ್ಞಾನ ಕತೃವಿನ ಖ್ಯಾತ ಉಕ್ತಿ, `ಪ್ರತಿಪುಸ್ತಕಕ್ಕೊಬ್ಬ ಓದುಗ’ ಮಾತ್ರ ನೆನಪಾಯ್ತು! ಅನಿಲ್ ಪುಸ್ತಕ ಒಯ್ಯುವ ಮುನ್ನ ಕೆಳಧ್ವನಿಯಲ್ಲಿ ಹೇಳಿದರು “ಈ ಲೇಖಕ, ಅರವಿಂದ ಅಡಿಗ ಊರಿನವನೇ. ಆರು ವರ್ಷ ನನ್ನ ಸಹಪಾಠಿ, ಆತ್ಮೀಯ ಮಿತ್ರ. ಆ ದಿನಗಳಲ್ಲೇ ಕಂಡಿದ್ದೇನೆ – ಇವನು, ಇವನಣ್ಣ
_ ಆನಂದ ಅಡಿಗನೂ ಭಾರೀ ಬುದ್ಧಿವಂತರು. ಹೆಚ್ಚು ಪ್ರತಿ ತರಿಸಿಡಿ, ಚೆನ್ನಾಗಿ ಹೋದೀತು”. ಶಂಬಾ ಜೋಶಿಯ ಪುಸ್ತಕದಿಂದ ಹಿಡಿದು ಥರ್ಡ್ ಕ್ಲಾಸಿನ ಕನ್ನಡ ಮೀಡಿಯಂ ಸೋಶಿಯಲ್ ಗೈಡಿನವರೆಗೂ ಸಲ್ಮನ್ ರಶ್ದಿಯ Satanic Verseನ ಕಳ್ಳಮುದ್ರಣದಿಂದ ಹಿಡಿದು Nincomcoopನ ಬರೆಯದ ಪುಸ್ತಕದವರೆಗೂ ತರಿಸಿಡಲು ಶಿಫಾರಸು ಮಾಡುವವರನ್ನು ಸಾಕಷ್ಟು ಕಂಡಿರುವುದರಿಂದ ಬರಿದೆ ಗೋಣು ಹಾಕಿದ್ದೆ. ಆದರೂ…
ಸಂಪೂರ್ಣ ಓದಿಗೆ ಭೇಟಿ ಕೊಡಿ: ಅತ್ರಿ ಬುಕ್ ಸೆಂಟರ್


0 Comments