ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಟ್ಟುಹಬ್ಬವೆಂಬ ದಿಗಿಲೂ, ಸಂಭ್ರಮವೂ…

ರೇಖಾ ಗೌಡ

ಈ ಸಲ ಹುಟ್ಟಿದಹಬ್ಬ ವಿಶೇಷ ಅನ್ನಿಸ್ತು.

ಮೊದಲಿಗೆ ಆ ದಿನ ಹತ್ತಿರ ಬಂದಂತೆ, ವಯಸ್ಸು ಹೆಚ್ಚಾಗುತಿರುವುದರ ಸೂಚಕವೆನ್ನಿಸಿ ಭಯ, ಜಿಗುಪ್ಸೆ ಹುಟ್ಟಿಸಿದರೂ ನಿಧಾನವಾಗಿ ಖುಷಿ, ಸಂಭ್ರಮ ತುಂಬಿಕೊಳ್ಳತೊಡಗಿತು, ಕಾರಣ ಕೆಲವಾರು.

ಮೊದಲಿಗೆ ನನ್ನ ಮನದ ಮಾತಿಗೆ ಕಿವಿಯಾದೆ, ಅದರ ಭಯ, ಚಿಂತೆ, ತಲ್ಲಣಗಳಿಗೆ.ತದನಂತರ ದನಿಯಾದೆ ಮನಸಿಗೆ, ಅದಕ್ಕೆ ಉತ್ತರಿಸುವ, ದಾರಿ ತೋರಿಸುವ, ಧೈರ್ಯ ಹೇಳುವ ಮೂಲಕ!

ಈ ನಿಟ್ಟಿನಲ್ಲಿ ಧ್ಯಾನಿಸಿದೆ, ಪ್ರಾರ್ಥಿಸಿದೆ. ಭಾವಿಸಿದೆ ಇನ್ನು ಹೇಗಿರಬೇಕೆಂದು! ನನ್ನೊಂದಿಗೆ ಮತ್ತಷ್ಟು easy ಯಾಗಿ, ಒಳ್ಳೆಯದಾಗಿ, ಖುಷಿಯಾಗಿರಬೇಕೆಂದು. ಇತರರೊಂದಿಗೆ easy attitude ಇನ್ನಷ್ಟಿರಬೇಕೆಂದು!

ಹೀಗೆ ಆಲೋಚನೆಯ ದಿಕ್ಕು ಬದಲಾಯಿಸಿದೆ. ಮನಸು ಹುರುಪುಗೊಂಡಿತು. ಮನಸು ತಪ್ಪುಗಳ ರಾಶಿ ಹಾಕಿ ತೋರಿ ನನ್ನನ್ನೇ ದಿಟ್ಟಿಸಿತು. ಮಾಡಿದ್ದ ಕೆಲಸಗಳ ನೆನಪಿಸಿ ಕೊಟ್ಟೆ, ಮನಸು ಕಣ್ಣು ತಪ್ಪಿಸಿತು.

ಏನು ಮಾಡಬೇಕೆಂದು, ಹೇಗಿರಬೇಕೆಂದುಮನಸು ಜೀವನದ ದೊಡ್ಡ ಪ್ರಶ್ನೆ ಮುಂದಿಟ್ಟಿತು, ಗಾಬರಿ ಹುಟ್ಟಿಸಲು!
ನನಗೆ ನಾ ಬುದ್ಧಿ ಹೇಳಿದೆ, ನಿನಗೆ ಹೆಮ್ಮೆ ಮತ್ತು ಖುಷಿಯಾಗುವ ಕೆಲಸ ಮಾಡೆಂದು. ಅಷ್ಟು ಸಾಕೆಂದು.ಮನಸ್ಸು ಸಮಾಧಾನವಾಗಿ ಸುಮ್ಮನಾಯಿತು. ಎಷ್ಟೊಂದು ಕಳೆದು ಹೋಗಿದ್ದೆ, ಮುಳುಗಿ ಹೋಗಿದ್ದೆ ಮನಸು ಮತ್ತೆ ಪ್ರಶ್ನೆ ಮಾಡಿತು.

ನನ್ನ ನಾ ಹುಡುಕಿಕೊಳ್ಳಲು, ನಿಜದ ನನ್ನ ಅರಿತು ಕೊಳ್ಳಲು ನನ್ನಿಂದಲೂ ಕಳೆದು ಹೋಗಬೇಕು  ಅಲ್ಲವೇ? ನನ್ನೊಳಗೆ ನಾ ಮುಳುಗದೆಎಷ್ಟೊಂದ ಮರೆಯದೆ, ಮೈಮರೆಯದೆ ಮನಸ ಕಾರ್ಯ ಅರಿಯಲು ಸಾಧ್ಯವೇ? ಕೇಳಿದೆ,ಇನ್ನು ಎಚ್ಚರ ಮೈಗೂಡಿಸಿಕೊಳ್ಳುವೆ ಹೇಳಿದೆ.ಪ್ರಫುಲ್ಲಗೊಂಡಿತು ಮನಸು. 

ಮರೆತರೇನೇ ಎಚ್ಚರದ ಅರಿವು, ಅವಶ್ಯಕತೆ ಕಾಣುವುದು ಆಲೋಚನೆ ತೂರಿ ಬಂತು, ಮನಸು ಮಾರುತ್ತರಿಸಿರಬೇಕು.
ಹೇಗೆ ಬದುಕಬೇಕು, ಯಾರ ಮಾತ ಕೇಳಬೇಕು. ಹಳೆಯ ಆದರೆ ಉತ್ತರಿಸಿರದಿದ್ದ ಪ್ರಶ್ನೆಯೊಂದು ಆಳದಿಂದ ಚಿಮ್ಮಿ ಬಂತು. ನಿನ್ನ ಬದುಕು ನೀ ಬದುಕಬೇಕು, ಯಾರು ಏನೇ ಹೇಳಿದ್ದರೂ!ಮನಸು, ಒಂದು ಹಂತ ಮೇಲೆ ಹೋಯಿತು,ಹಬ್ಬ ಸಂಭ್ರಮಿಸಲು ತಯಾರಾಯಿತು, ಸಂಭ್ರಮ ತುಂಬಿಕೊಳ್ಳಲು, ಖಾಲಿಯಾಯಿತು, ಜಾಗ ಮಾಡಿತು!

‍ಲೇಖಕರು Admin

26 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading