ಅವಿಸ್ಮರಣೀಯ ಗಾಂಧಿ ಜಯಂತಿ

ಅದೊಂದು ಅವಿಸ್ಮರಣಿಯ ಘಟನೆ. ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವನ್ನು ಹೀಗೂ ಆಚರಿಸಬಹುದು ಎಂಬುದಕ್ಕೆ ಸಾಕ್ಷಿಯಾದದ್ದು ಗಿರೀಶ್ ಜಕಾಪುರೆಯವರು ಬರೆದ, ಅಭಿನವ ಬೆಂಗಳೂರು ಪ್ರಕಟಿಸಿರುವ ಮಲೆನಾಡ ಗಾಂಧಿ ಕೃತಿಯ ಲೋಕಾರ್ಪಣೆಯ ಸಂದರ್ಭ. ಕೊಪ್ಪದ ಮಣಿಪುರ ಎಸ್ಟೇಟ್ನಲ್ಲಿ ಸೇರಿದ ಆತ್ಮೀಯರು ಈ ಅಪರೂಪದ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಇದೇ ಸಂದರ್ಭದಲ್ಲಿ ತಮಗೆ ಸಲ್ಲಿಸಿದ ಗೌರವಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಿಕ್ಷಣಸಚಿವರು ಗಾಂಧಿವಾದಿಗಳು ಆದ ಹೆಚ್. ಜಿ. ಗೋವಿಂದಗೌಡ ಅವರು ‘ನಾನು ಗಾಂಧೀಜಿಯವರ ಶಾಂತಿ, ಶಿಸ್ತು, ಅಹಿಂಸೆ ಮುಂತಾದ ಆದರ್ಶಗಳನ್ನು ಪಾಲಿಸುವ ಮೂಲಕ ಜನಮನ್ನಣೆಗಳಿಸಿಕೊಂಡೆ. ನಾನು ನನ್ನ ಜೀವಮಾನದಲ್ಲಿ ಒಂದೇ ಒಂದು ಪೈಸೆ ಲಂಚ ತೆಗೆದುಕೊಳ್ಳಲಿಲ್ಲ. ಹೀಗಾಗಿ ಸಂವಿಧಾನದ ಘನ ಆಶಯಗಳನ್ನು ಜಾರಿಗೆ ತರುವುದು ಸಾಧ್ಯವಾಯ್ತು’ ಎಂದರು. ‘ಯಾವತ್ತು ನಮ್ಮಂಥ ಪ್ರಾಮಾಣಿಕರ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಳ್ಳುವ ದಿನ ಬರುತ್ತದೋ ಅದೇ ನಿಜವಾದ ಗಾಂಧಿ ಜಯಂತಿಯ ದಿನವಾಗಿರುತ್ತದೆ, ಆಗ ಇಂಥ ಆಚರಣೆಗಳಿಗೆೆ ಪ್ರಾಮುಖ್ಯತೆ ದೊರೆಯುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕವಿ ನಾಗತಿಹಳ್ಳಿ ರಮೇಶ್ ಅವರು ‘ವಿಷಮಗೊಂಡಿರುವ ಸದ್ಯದ ರಾಜಕೀಯ ವಾತವರಣ ಮತ್ತು ಆಧುನಿಕತೆಯ ಕೂಸಾದ ಜಾಗತೀಕರಣವನ್ನು ಎದುರಿಸಲು ಗೋವಿಂದಗೌಡರಂಥ ಆದರ್ಶಗಳು ಸಹಕಾರಿ’ ಎಂದರು. ಮುಂದುವರೆದ ಅವರು ‘ಹೆಂಡ, ಹಣ ಮತ್ತು ಭೂಮಾಫಿಯಾದಂಥ ವಿಷಯಗಳೇ ಅಧಿಕಾರದ ನಿಣರ್ಾಯಕ ಶಕ್ತಿಗಳಾಗಿರುವಾಗ ಗೋವಿಂದಗೌಡರಂಥ ಶುದ್ಧಹಸ್ತ ಹಾಗೂ ಪ್ರಾಮಾಣಿಕ ವ್ಯಕ್ತಿತ್ವಗಳು ನಮಗೆ ಸಮಾಧಾನವನ್ನು, ಸಾಂತ್ವಾನವನ್ನು ನೀಡುತ್ತದೆ. ಇಂಥ ಪರಿವಾರ ಬೆಳೆದು ಗಾಂಧಿ ಕನಸಿನ ರಾಷ್ಟ್ರ ನಿಮರ್ಾಣವಾಗಬೇಕು’ ಎಂದರು.
ನುಡಿನಮನ ಸಲ್ಲಿಸಿದ ಜನಸಂಸ್ಕೃತಿ ಪತ್ರಿಕೆಯ ಸಂಪಾದಕ ಪ್ರದೀಪ್ ಮಾಲ್ಗುಡಿಯವರು ‘ಗಾಂಧಿ ಜಯಂತಿಯನ್ನು ಹೀಗೆ ಗೋವಿಂದಗೌಡರ ಸಮಕ್ಷಮ ಆಚರಿಸುತ್ತಿರುವುದರಿಂದ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಘನತೆ ದಕ್ಕಿದೆ’ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿನವ ರವಿಕುಮಾರ್ ಮಾತನಾಡಿ ಮುಂದಿನ ಜನಾಂಗಕ್ಕೆ ಇಂಥ ಮೇರು ವ್ಯಕ್ತಿತ್ವಗಳನ್ನು ಪರಿಚಯ ಉದ್ದೇಶದಿಂದ ಇಂಥ ಕೃತಿಗಳನ್ನು ಪ್ರಕಟಿಸಲಾಗುವುದೆಂದು ತಿಳಿಸಿದರು.
ಸಮಾರಂಭವನ್ನು ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು. ಹಾರ ತುರಾಯಿಗಳಿಲ್ಲದೆ ಪುಸ್ತಕವನ್ನು ನೀಡುವ ಮೂಲಕ ಗೋವಿಂದೇಗೌಡರನ್ನು ಗೌರವಿಸಲಾಯಿತು. ಲೇಖಕ ಗಿರೀಶ್ ಜಕಾಪುರೆ, ವೆಂಕಟೇಶ್, ಸಂದೀಪ್, ಕಾಫಿ ಉದ್ಯಮದವರಾಂದತಹ ಸಹದೇವ್ ಮತ್ತು ಶಿರೀಶ್ ಗುಜರ್ಾರ್ ಹಾಗೂ ವೆಂಕಟೇಶ್ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ 180 ಪ್ರತಿಗಳು ಮಾರಾಟವಾದದ್ದು ಅಚ್ಚರಿ ಮೂಡಿಸಿತು. ಗೋವಿಂದೇಗೌಡರ ಆತ್ಮೀಯ ವಲಯ ಸಮಾರಂಭಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.





0 Comments