ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೂ ಒಂದು ಸ್ವಾತಂತ್ರ್ಯ ದಿನದ ಶುಭಾಶಯ!

ಸುನಿಲ್ ರಾವ್


ಈ ದಿನ ಬಂದ್ರೆ ಸಾಕು ನಾಲ್ಕಕ್ಕೆ ಎದ್ದು ಹಂಡೆಲಿ ಎರಡು ಚೊಂಬು ನೀರ್ ಹೊಯ್ಕಂಡು ಆರಕ್ಕೆ ಮನೆ ಬಿಟ್ಟು ಗವರ್ನರ ಗತ್ತಲ್ಲಿ ಸ್ಕೂಲು ಸೇರ್ತಿದ್ದೆ.
ನಮ್ ಸ್ಕೂಲಿಗೆ ನಾನೇ ಮಹಮದ್  ರಫಿ ಆದ ಕಾರಣ ಸೋಷಿಯಲ್ ಮೇಡಂ ಕಲ್ಪನಾ ಮಗಳು ಪದ್ಮ ಶನಿ ತರ ವಕ್ಕರಿಸೋ ವರೆಗೂ ಎಲ್ಲಾ ಸಮಾರಂಭಕ್ಕೂ ನಾನೇ, ಬರ್ತಿದ್ದ ಎರಡೇ ಹಾಡನ್ನ alternate ಆಗಿ ಹಾಡ್ಕೊಂಡು ನೆಮ್ಮದಿಯಾಗಿದ್ದೆ. ಆ ಲೌಡಿ ಬಂದ್ಮೇಲೆ ನನ್ ಮಾತಾಡ್ಸೋರೆ ಗತಿ ಇರುಲ್ಲ. ಹಾಳ್ ಬಿದ್ದು ಹೋಗ್ಲಿ ಅಂತ ನಾನೂ ಚಾನ್ಸ್ ಕೊಟ್ಟು ಸುಮ್ನಾಗಿದ್ದೆ.
ಸ್ಕೂಲಲ್ಲಿ ಸಮಾರಂಭ ಮುಗಿದು ನಮ್ಮೂರಿನ ಮಿನಿಷ್ಟರ್ ಗೌಡ್ರು ಹತ್ ಗಂಟೆಗ್ ಬರೋದಕ್ಕೆ ಹೊರ್ಟು ಒಂದಕ್ ಬಂದು ಸೇರೋರು.
ನಾವೂ ಅಂಡ್ ಸುಡೋ ಬಿಸ್ಲಲ್ಲಿ ಅವರ ಭಾಷಣ ಕೇಳಕ್ಕೆ ಕೂತು ಅವರ ಕುಲ ಗೋತ್ರ ಎಲ್ಲಾ ಜಾಲಾಡಿ ಹಲ್ಕಟ್ ಮುಂಡೇ ಮಗ ತಾನ್ ಮಾತ್ರ ಹೊಟ್ಟೆ ಬಿರಿಯೊ ಹಾಗೆ ತಿಂದು ಬಂದು ನಮ್ಮನ್ ಮಾತ್ರ ಈ ಬಿಸ್ಲಲ್ಲಿ ಅಂಡೊಣಗಿಸ್ತಾನೆ ಅಂತ ಬೈಕಂಡು ಕೂತಿರ್ತಿದ್ವು.
ಪಕ್ದಲ್ ಹುಡ್ಗಿರು ಇದ್ರೆ ಇನ್ನೂ ಇನ್ನೂ ಬೈಕಂಡು ನಮಗಾಗುತ್ತಿದ್ದ ಭಾರೀ ಅನ್ಯಾಯದ ವಿರುದ್ಧ ಆಕ್ರೋಶ ತೋರಿಸಿಕೊಳ್ಳೋದು ಮಾತ್ರ ಮರೀತಿರ್ಲಿಲ್ಲ.
ಕೊನೆಗೆ ಮಿನಿಷ್ಟರ್ ಬಂದ್ಮೇಲೆ ಕೋತಿಗಳ ತರ drill ಮಾಡಿ, ಅವನ ಭಾಷಣ ಕೇಳೋಕ್ ಕೂರ್ಬೇಕಿತ್ತು.
ವಿರೋಧ ಪಕ್ಕದೋರನ್ನೆಲ್ಲಾ ಬೈದು ಜಾಲಾಡ್ತಾ ಇದ್ರೆ ನಾವು ಏನೂ ಅರ್ಥ ಆಗ್ದೇ ಕೋತಿಗಳ್ ತರ ಮೈ ಕೈ ಕೆರ್ಕೋಂಡ್ ನೋಡ್ತಾ ಇರ್ತಿದ್ದು. ಭಾಷಣ ಆದ್ಮೇಲೆ “ಇಷ್ಟೊತ್ ಗಂಟ ಪಾಪ ಬಿಸಲಾಗ್ ಕೂತು ನನ್ ಮಾತ್ ಕೇಳಿಸ್ಕೊಂಡ ಅಕ್ಕ ತಂಗಿಯರೇ ಅಣ್ ತಂಮ್ಮಂದ್ರೆ ನಿಮ್ಮೆಲ್ಲರ್ಗೂ ನಂದೊಂದಿದು…………….. ” ಅನ್ನುವಾಗ ಮಿನಿಷ್ಟರ್ ಕೈ ಮುಕ್ಳಿ ಹತ್ರ ಹೋಗಿರ್ತಿತ್ತು…..
ಹೌದ್ದಪ್ಪ ನಿಂಗ್ ನಾವು ಓಟ್ ಹಾಕಿದ್ಕೆ ಸರಿಯಾದ ಕಾಣಿಕೇನೆ ಕೊಟ್ಟೆ ಬಿಡು ಅನ್ಕಂಡು ಮನೆ ಕಡೆ ಬರ್ತಿದ್ವು.
ಪ್ರತೀ ಸಲವೊ ಅವನದ್ದೊಂದು ಅದನ್ನ ನಮಗೆ ಕೊಡದೇ ಭಾಷಣ ಮುಗಿಸ್ತಿರ್ಲಿಲ್ಲ ಬಡ್ಡಿ ಮಗ.
ಅಂದ್ಹಾಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು.
 

‍ಲೇಖಕರು avadhi

17 August, 2013

4 Comments

  1. Prabhakar Nimbargi

    balyada nenapugala hasyalepita niroopane. chennagide.

  2. vanamala

    ಎಲ್ಲರೂ ಓದುವ ಹಾಗೆ ದಯವಿಟ್ಟು ಸ್ವಲ್ಪ ಒಳ್ಳೆ ಭಾಷೆಯಲ್ಲಿ ಬರೀರಿ. ಖುಷಿಯಲ್ಲಿ ಓದ್ತೀವಿ.

  3. manjunathan

    Ha ha i remember that days…

  4. samyuktha

    idanna avatte odi…nin voice nalle odkondu…chennagi nakkidde 😀

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading