ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹೀಗೂ ಒಂದು ಲವ್ ಸ್ಟೋರಿ’ – ರಜನಿ

ರಜನಿ ಆಚಾರ್ಯ


“ಅಮ್ಮಾ ತಾಯಿ ಕೂತಲ್ಲೇ ಕೂತು ಇನ್ನಷ್ಟು ದಪ್ಪಗಾಗು ..ನಾವು ಜಾಗ್ಗಿಂಗ್ ಮಾಡ್ಕೊಂಡು ಬರ್ತೇವೆ”…ಉತ್ತರಕ್ಕೂ ಕಾಯದೆ ನನ್ನ ಅಪ್ಪ, ತಂಗಿ ಮಾತಾಡುತಾ ಪಾರ್ಕೊಳಗೆ ಹೊರಟೇಬಿಟ್ರು ..ಭಾನುವಾರದ ಈ ಬೆಳಗ ನೋಡಲಿಕ್ಕೇ ಬಂದವಳು ನಾನು..ದಿನವೂ ಈ ಕಾಲೇಜ್ ಟ್ಯೂಷನ್ ರಗಳೆಯಲಿ ಈ ನಗರದ ಟ್ರಾಫಿಕ್ ನಲ್ಲಿ ಬೇಸತ್ತಿದ್ದ ನಾನು ಬಂದದ್ದೇ ಹಸಿರು ಹಸಿರಾಗಲು ..emotional fool ಕಣೇ ನೀನು.ದೊಡ್ಡ ಗೂಸ್ಲು ಎಂದು ತಂಗಿ ಹಂಗಿಸಿದ್ದು ನೆನಪಿಗೆ ಬಂತು..ಹೌದು ಏನೀಗ..??..ಹಸಿರು ಹುಲ್ಲ ಮೇಲೆ ಇಬ್ಬನಿ ಮುತ್ತುಗಳು..ಹಸಿರು ಕೊಂಬೆಗಳು ತಂಪು ಗಾಳಿಗೆ dance ಮಾಡ್ದಾಗ ಆ ಸೂರ್ಯ ಆಡೋ ಕಣ್ಣು ಮುಚ್ಚಾಲೆ ಆಟ, ತಂಪು ಗಾಳಿಯ ಅಪ್ಪುಗೆ, ಮಂಜಿಗೂ ನೇಸರನಲೇ ಲವ್ ಅಲ್ವಾ ಅಂತ ನಕ್ಕೆ ಮನಸಲೇ.. ನಾಚಿಕೆಲೇ ಕರಗಿ ನೀರಾಗುತ್ತಲ್ಲಾ ಸೂರ್ಯನ್ನ ನೋಡ್ತಾನೇ …ಜೊತೆಗೆ ಕುಹೂ ಕುಹೂ ಕೇಳಿಸ್ತಲ್ಲಾ ಎಲ್ಲೋ ಅಂತ ಹುಡುಕ್ದೆ..ಈ ಕೋಗಿಲೆಗಳೋ ಯಾವತ್ತೂ ಕಾಣೋದೇ ಇಲ್ಲ ಅಂತ ಹಾಗೇ ನಡೀತಾ ಇದ್ದ ನಂಗೆ ಇದೆಲ್ಲಾ ಬಿಟ್ಟು ಬೆವರ ಸುರಿಸಲು ಬುಸು ಬುಸು ಓಡ್ತಿರೋ ಅಪ್ಪ ತಂಗಿ ಮೂರ್ಖರಂತೆ ಕಂಡರು..ನಂಗೇ ದಪ್ಪಾ ಅಂದ್ಲಾ ತಂಗಿ..ಹೂ, ಯಾಕೋ ಕುರ್ತಿ ಟೈಟ್ ಅನ್ನಿಸ್ತದೆಯಲ್ಲಾ ಅಂತ ಆತಂಕದಲ್ಲೇ ವಿಮರ್ಶಿಸಿ ಕಡೆಗೆ ಅಯ್ಯೋ…ಈ ಚಳಿಲಿ ಯಾರು ಓಡ್ತಾರೆ ಅನ್ನೋ ಸೋಂಬೇರಿತನದಲ್ಲೇ ಚಳಿಗಾಲ ಮುಗೀಲಿ ನಾನೂ ಇವರ ಜೊತೆ ಓಡಿದ್ರಾಯ್ತು ಅಂತ ಮನಸ್ಸಲ್ಲೇ resolution pass ಮಾಡಿಕೊಳ್ತಾ ಧೀರ್ಘ ಉಸಿರೆಳೆದುಕೊಂಡೆ.. ನಮ್ಮೂರ ಸೂರ್ಯನ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎಂದು ಬೀಗಿ ಇಬ್ಬನಿ ಹುಲ್ಲ ಮೇಲಿನ ತನ್ನ ಕಾಲ ಸ್ಪರ್ಶಕೆ ತಾನೇ ನವಿರಾಗಿ ಬೆರಗುಗೊಂಡು ನಡೆದವಳು ಅಲ್ಲೇ ಗಕ್ಕನೆ ನಿಂತುಬಿಟ್ಟೆನಲ್ಲಾ….ಓಹ್..ಅವನೇ ಅದು…ದಿನಾ ಕಾಲೇಜ್ಗೂ, ಲೈಬ್ರರಿಗೂ, ಮನೆಯ ಸುತ್ತ ಮುತ್ತಲೂ, ದೇವಸ್ಥಾನಕೂ ಎಡತಾಕಿ ಆರಾಧನಾ ನೋಟ ಎಸೆಯುತ್ತಿದ್ದವನು ಇಲ್ಲೂ ನನ್ನ ಹುಡುಕಿಕೊಂಡು ಬಂದಿದ್ದಾನಲ್ಲಾ..ಮನದಲೇನೋ ಖುಷಿ…ಅವನ ಚುರುಕು ಕಣ್ಣು, ಜೊಂಪೆ ಕೂದಲು ನನ್ನನ್ನೂ ಸೆಳೆದಿತ್ತಾದರೂ ಈ ಪುಸ್ತಕದ ಹುಳು ಎಂಬ ಹಾಳು ಬಿರುದನ್ನು ಅಂಟಿಸಿಕೊಂಡಿದ್ದ ನಾನು ಇದರಲ್ಲೆಲ್ಲ್ಲಾ ಆಸಕ್ತಿ ಇಲ್ಲದವರಂತೆ ನಟಿಸುತಲೇ ಅವನ ನನ್ನ ಎದೆಯಲ್ಲಿ
ಬಿಟ್ಟುಕೊಂಡಿದ್ದು ಸುಳ್ಳಲ್ಲ..ಪುಸ್ತಕದ ಹುಳವಾಗಿದ್ದಕ್ಕೆ ಈ ಕನ್ನಡಕದ ಬಳುವಳಿ ಬೇರೆ ನನಗೇ ಗೊತ್ತಿಲ್ಲದೇ ನನ್ನ ಕುಗ್ಗಿಸಿಬಿಡ್ತಿತ್ತಲ್ಲಾ.. ಕನ್ನಡಿ ಮುಂದೆ ನಿಂತರೆ ಕನ್ನಡಕವೇ ಮುಖದ ತುಂಬಾ ಕಾಣುವಾಗ ಯಾಕಷ್ಟು ಓದಿದ್ನೋ ಆಗೆಲ್ಲಾ ಅನ್ಸತ್ತೆ..contact lenses ಬೇಕು ಅಂತ ಕೇಳಕ್ಕೂ ಬಿಗುಮಾನ..ಈ ಬಾರಿ ಅಪ್ಪನ್ನ birthdayನಲ್ಲಿ ಕೇಳೇಬಿಡ್ತೀನಿ.. ಸೌಂದರ್ಯಪ್ರಜ್ಞೆ ಇಲ್ಲ ನಿಂಗೆ ಅಂದ ತಂಗಿ ನೆನಪಾಗಿ ಮನಸು ಮುದುಡಿತು..ಬಿಗುಮಾನದ ಮುಖವಾಡ ಕಿತ್ತುಹಾಕೋದೂ ಕಷ್ಟನೇ…ಅಯಾಚಿತವಾಗಿ ದುಪಟ್ಟಾ ಸರಿ ಮಾಡಿಕೊಳ್ಳುತಾ ನೋಡಿದರೆ ಅವನು ಅಲ್ಲೇ ..ದೃಷ್ಟಿ ಮಾತ್ರ ಇಲ್ಲೇ..ನನ್ನನ್ನೇ ಹುಡುಕಿಕೊಂಡು ಬಂದಿರಬೇಕು ಎಂಬ ಭಾವದಿ ಎದೆ ಬಡಿತ ತೀವ್ರವಾಯಿತು. ಈ ಹದಿನೇಳು ವಸಂತಗಳಲ್ಲಿ ಬುದ್ಧಿ ಬಂದಾದ ದಿನದಿಂದ ಮನದ ಪ್ರೇಮ ಸಾಮ್ರಾಜ್ಯವನು ನಾ ನೋಡಿದ ಅನೇಕ ಹಿಂದಿ ಕನ್ನಡ ಫಿಲಂ ಹೀರೋಗಳೇ ಆಳುತ್ತಿದ್ದರು..
ಕಾಲ ಕಾಲಕ್ಕೆ ಬದಲಾಗುವ ಈ ದೊರೆಗಳನು ಒದ್ದೋಡಿಸಿದ credit ಈ ಜೊಂಪೆ ಕೂದಲಿಗೇ ಹೋಗ್ಬೇಕು..ಅವರನ್ನೆಲ್ಲಾ ಮೂಲೆಗೆ ತಳ್ಳಿ ಇವನು ಕೂತು ಕೆಲದಿನ ಸಂದಿತ್ತು ಅಷ್ಟೇ. ಆದರೂ ಅದೆಷ್ಟೋ ಯುಗಗಳ ರಾಜ್ಯಭಾರ ಅವನದು ಎನ್ನುವಂತ ಭಾವ ನನ್ನ ಮನದಲಿ..ದಿನವಿಡೀ ಅವನದೇ ಲಹರಿ ಮನದಲಿ..ನಿಂತಾಗ ಕೂತಾಗ ಮಲಗಿದಾಗಲೂ ಪದೇ ಪದೇ ನೆನಪು ಅವನದ್ದೇ..ಕಾಲೇಜ್ ನ
ಪಾಠಗಳ ಮಧ್ಯೆಯೇ ಅವನ ಜೊತೆ ಡುಯೆಟ್ ಹಾಡುವ ಮನಸ್ಸು ಕನಸು..ಮತ್ತೆ ಮತ್ತೆ ಅವನನ್ನೇ ನೆನಪಿಸಿಕೊಳ್ಳುವ ಮನಸ್ಸು ಅವನ ಮುಖವನ್ನು ಕಲ್ಪಿಸಿ ಕೊಳ್ಳುವಲ್ಲಿ ಮಾತ್ರ ಸೋಲುತ್ತಿತ್ತು..ಹೇಗಿದ್ದ ಅವನು..ಕಪ್ಪು ಕಣ್ಣಾ ಕಂದು ಕಣ್ಣಾ..ಮೀಸೆ ಇದೆಯೋ ಇಲ್ವೋ..ಇಂತಹುದೇ ಗೊಂದಲಗಳ ನಡುವೆಯೇ ಅವನು ತನ್ನ ನೋಡಿದಾಗ,,ಕಣ್ನೋಟ ಬೆರೆತಾಗ ಆದ ರೋಮಾಂಚನವನು ನೆನೆ ನೆನೆದು ಮತ್ತೆ ಮತ್ತೆ ರೋಮಾಂಚನ..ರಾತ್ರಿಗಳಲ್ಲೋ ಕದಲುವ ಕಣ್ಣಾಲಿಗಳ ತುಂಬಾ ನೂರು ಕನಸು..ಬೈಕ್ನಲ್ಲಿ ಕುಳಿತಿರುವರು ನಾನು ಅವನು..ರಾಜ ರಾಣಿಯರಂತೆ..ಫುಲ್ ಸ್ಪೀಡಲ್ಲಿ ಹೋಗ್ತಿದ್ವಾ…ಓಹ್..ಹತ್ತಿರವೇ ಬರುತ್ತಿದ್ದನಲ್ಲಾ ಅವನು…ಲೆಟರ್ ಕೊಟ್ಟು ಬಿಟ್ಟರೆ ಏನು ಮಾಡುವುದು..? ಈ ಮುಂಜಾವಲಿ ಅವನ ದರ್ಶನ ಆಯಿತಲ್ಲಾ ಎಂಬ ಖುಷಿಯಲೇ tensionno tensionnu..ಹೇಗೆ ಕಾಣ್ತಾ ಇದ್ದಿನೋ ಎಂಬ ಆತಂಕ…ಕನ್ನಡಕ ಬಿಚ್ಚಿಡೋಕ್ಕೂ ಆಗಲ್ವಲ್ಲಾ ಈಗ ಛೇ..ಹತ್ತಿರ ಬಂದವನು ಅಲ್ಲೇ ನಿಂತು ನೆಟ್ಟ ನೋಟ ಬೀರುತ್ತಿದ್ದಾನಲ್ಲ ….ಆ ನೋಟಕ್ಕೆ ನಾನು ಮೋಸ್ಟ್ಲಿ ಆ ಬೋಗನ್ವಿಲ್ಲ ಹೂಗಳನ್ನೇ ನಾಚಿಸುವಷ್ಟು ಕೆಂಪಗಾಗಿರಬೇಕು..ಯಾಕೋ ಕೆನ್ನೆಯೆಲ್ಲಾ ಬಿಸಿಯಾಗುತ್ತಿದೆಯಲ್ಲಾ..ಛೆ..ಈ ಪುಳಕದ ಹೊಟ್ಟೆಗೆ ಬೈಯಲೋ..ಬಿಸಿ ಕೆನ್ನೆಗೆ ಗದರಲೋ..ಎಲ್ಲೆಲ್ಲೋ ಓಡುತ್ತಿರುವ ಕಂಗಳಿಗೆ ತೆಪ್ಪಗಿರಿ ಅಂತ ಹೇಳಲೋ..ಗಾಬರಿ ಸ್ಥಿತಿಯಲಿ ಕಣ್ಣು ತೀವ್ರವಾಗಿ ಅಪ್ಪ ತಂಗಿಯರನ್ನು ಹುಡುಕತೊಡಗಿತು..ಅವನೋ ಎವೆಯಿಕ್ಕದೆ ದಿಟ್ಟಿಸುತಾ ಹತ್ತಿರ ಬಂದೇಬಿಟ್ಟನಲ್ಲಾ..ನನ್ನೆದೆಯಲಿ ಮೋಹನ ರಾಗ..ಹೊಟ್ಟೆಯಲಿ ಮಾತ್ರ ಆತಂಕದ songu..ಎದೆಬಡಿತ ಇಮ್ಮಡಿಯಾಗಿ ಆ ಚಳಿಯಲೂ ಕೈ ಕಾಲು ಬೆವರಿ ಮೂಕಳಾಗಿ ನಿಂತುಬಿಟ್ಟೆ ತಲೆತಗ್ಗಿಸಿ..ನಂಗೇನಾದ್ರೂ statue ಕೊಟ್ನಾ ಇವನು..ತಲೆ ತಗ್ಗಿಸಿದ್ದರೂ ಕಣ್ಣು ಮಾತ್ರ ಹತ್ತಿರ ಬರುತ್ತಿದ್ದ ಜೋಡಿ ಕಾಲ್ಗಳನ್ನೇ ದಿಟ್ಟಿಸುತ್ತಿತ್ತು..ಹತ್ತಿರ ಹತ್ತಿರ ಬಂದಷ್ಟೂ ಮೈ ರಕ್ತವನು ಭೂಮಿಯೇ ಹೀರಿತೇನೋ ಎಂಬಷ್ಟು ನಿಶಕ್ತಿಯಲೇ ಸಂತಸ ..ಓಹ್..ಹತ್ತಿರ ಬಂದವನು ಹಾಗೆಯೇ ನನ್ನ ದಾಟಿ ಹೋಗಿಬಿಟ್ಟನಲ್ಲಾ..ಆಗಲೇ ನಾನು ತಲೆ ಎತ್ತಿದ್ದು..ನೋಡಿದರೆ ಕಣ್ಣೆದುರು ಅಪ್ಪ ತಂಗಿ…ಆಗ್ಲೇ ಅವರನ್ನು ಹುಡುಕ್ತಿದ್ದ ಮನಸು ಈಗ ನರಳಿತು ನಿರಾಸೆಯಲಿ.ಥೋ ..ಇಷ್ಟು ಬೇಗ ಬರಬೇಕಿತ್ತಾ ಇವರು…mostly ಅವರನ್ನು ನೋಡಿರಬೇಕು ಅವನು…ಅದಕ್ಕೇ…ಛೆ ಛೆ ಅಂತ ನಾ ಶಪಿಸಿದ್ದು ಯಾರನ್ನೋಪ್ಪಾ..ನಂಗೇ ಗೊತ್ತಾಗ್ಲಿಲ್ಲಾ..
 

‍ಲೇಖಕರು G

28 February, 2015

3 Comments

  1. mahima

    baNNIsale henne..haaDu nenapaaytu…

  2. shobhavenkatesh

    wow nice rajani

  3. Shylesh

    Suuuper ……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading