ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೂ ಉಂಟೇ..!!

ಅತೀ ಉದ್ದನೆಯ ಪ್ಯಾಂಟ್, ಅಕ್ಕಿಕಾಳಿನ ಮೇಲೆ ಸಂಪೂರ್ಣ ಭಗವದ್ಗೀತೆ, ಅಂತರಿಕ್ಷದಲ್ಲಿ ಮದುವೆ, ಒಂದೇ ಏಟಿಗೆ 100 ಜಿರಳೆ ಅಥವಾ ಮೆಣಸಿನಕಾಯಿ ಸ್ವಾಹಾ…ಹೀಗೆ ಪ್ರತಿಯೊಬ್ಬರೂ ದಾಖಲೆ ಮಾಡುತ್ತಾರೆ. ಆದರೆ ರಂಗಭೂಮಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರ ನೀಡಲು ತಡಕಾಡಬೇಕಾಗುತ್ತದೆ.

neleಇದೆಲ್ಲ ಯಾಕಪಾ ಅಂದರೆ, ಟಿವಿ ಹಾಗೂ ಚಲನಚಿತ್ರ ಹಾವಳಿಯಿಂದ ರಂಗಭೂಮಿ ಉಳಿಸಿ, ಬೆಳೆಸಲು ಹಾಗೂ ದಾಖಲೆ ಮುಖಾಂತರವಾದರೂ ನಾಟಕಕ್ಕೆ ಜನರನ್ನು ಮರಳಿ ತರುವ ಪ್ರಯತ್ನ ಚನ್ನರಾಯಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದೆ. ‘ನಿರಂತರ’ ತಂಡ ಈವರೆಗೆ ಏರ್ಪಡಿಸಿರುವ ನಾಟಕಗಳನ್ನೇ ನೋಡಿದರೆ, ಚಪ್ಪಾಳೆ ಹೊಡೆದು, ಶಿಳ್ಳೆ ಹಾಕಿ, ವನ್ಸ್ ಮೋರ್ ಹೇಳಬೇಕೆನಿಸುತ್ತದೆ.

ಫೆಬ್ರುವರಿ 23 ರಂದು ಚನ್ನರಾಯಪಟ್ಟಣದಲ್ಲಿ ಬೃಹತ್ ತೊಟ್ಟಿಲೊಂದರಲ್ಲಿ ನಾಟಕವಾಡಲು ನಿರಂತರ ಸಿದ್ಧತೆ ನಡೆಸಿದೆ. ಈ ನಾಟಕದ ಕರ್ಟನ್ ಎಳೆಯುವ ಮೊದಲು ತಂಡದ ಕುರಿತು ಒಂದು ಚಿಕ್ಕ ಫ್ಲಾಶ್ ಬ್ಯಾಕ್.

1979, ಜನವರಿ 26 ರಂದು ಸ್ಥಾಪನೆ. ಅದಕ್ಕೂ ಮೊದಲು ಕಲಾಸಂಪದ ಹೆಸರಿನಿಂದ ರಂಗಚಟುವಟಿಕೆ. ಸ್ಥಾಪನೆಯ ಆರಂಭದಲ್ಲಿ ಖ್ಯಾತ ಲೇಖಕರ, ಖ್ಯಾತ ನಾಟಕಗಳ ಪ್ರದರ್ಶನ. ‘ಜೋಕುಮಾರಸ್ವಾಮಿ’,‘ಸಂಗ್ಯಾಬಾಳ್ಯಾ’ ನಾಟಕಗಳ ಹಲವು ಪ್ರದರ್ಶನ. ನಂತರ ‘ಗೋಡೆ ಬೇಕೆ ಗೋಡೆ’, ‘ಅಪ್ಪ’, ‘ಮನೆ’,‘ವಿದೂಷಕ’ ಮುಂತಾದ ಅಸಂಗತ ನಾಟಕಗಳನ್ನು ಸುಸಂಗತದ ಟಚ್ ನೀಡಿ ರಾಜ್ಯದೆಲ್ಲೆಡೆ ಪ್ರದರ್ಶಿಸಿದ ಕೀರ್ತಿ ನಿರಂತರದ್ದು.

ಈ ಎಲ್ಲ ಚಟುವಟಿಕೆಗಳ ಹಿಂದೆ ಇದ್ದಿದ್ದು ನಿರಂತರದ ನಂಜುಂಡ ಮೈಮ್. ರಂಗಭೂಮಿಯ ಬಗ್ಗೆ ಜನರ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ನಂಜುಂಡ ಮೈಮ್, ಹೊಸ ರೀತಿಯ ನಾಟಕಗಳನ್ನು ರಂಗದ ಮೇಲೆ ತರಲು ಮುಂದಾದರು. ಆಗ ರೂಪಗೊಂಡದ್ದು ‘ಸ್ಫೋಟ’ ಅನ್ನುವ ನಾಟಕ. ಎಂಟು ಪಾತ್ರಧಾರಿಗಳು ಹಾಗೂ 1 ಹಾಡು ಇರುವ ಈ ನಾಟಕದ ಅವಧಿ ಕೇವಲ 19 ಸೆಕೆಂಡ್. ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ನಡೆದ ಈ ನಾಟಕ ಸೂಪರ್ ಹಿಟ್ ಆಯಿತು. ಜೊತೆಗೆ ಲಿಮ್ಕಾ ಪುಸ್ತಕದಲ್ಲಿ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿತು.

ಈ ನಾಟಕದಿಂದ ಪ್ರೇರಣೆ ಪಡೆದ ನಿರಂತರ, 2007 ರಲ್ಲಿ ತಲಾ 15 ನಿಮಿಷಗಳ 10 ಬೇರೆ ಬೇರೆ ನಾಟಕಗಳನ್ನು ಆಡುವುದರ ಮೂಲಕ ಮತ್ತೊಂದು ದಾಖಲೆ ಬರೆಯಿತು.

mukhagaluನಂಜುಂಡ ಹಾಗೂ ಕೋಟೆ ನಾಗರಾಜ ಸೇರಿ 2005 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮರದ ಮೇಲೆ ‘ನೆಲೆ’ನಾಟಕ ಆಡುವುದರ ಮೂಲಕ ಎಲ್ಲರ ಹುಬ್ಬೇರಿಸಿದರು.

ಕಳೆದ ವರ್ಷ ನಿರಂತರ ಪ್ರದರ್ಶಿಸಿದ ನಾಟಕ ‘ಮುಖಗಳು’. ಈ ನಾಟಕ ನೋಡಲು ನಿರಂತರ ಜನರನ್ನು ಚನ್ನರಾಯಪಟ್ಟಣದ ರಾಜರಾಜೇಶ್ವರಿ ಕೊಳಕ್ಕೆ ಕರೆದಾಗ ಎಲ್ಲರಿಗೂ ಆಶ್ಚರ್ಯ. ಆದರೆ ‘ಮುಖಗಳು’ ನಾಟಕ ನಡೆದಿದ್ದು, ನೀರಿನ ಮೇಲೆಯೇ. 100*60 ಅಡಿ ವಿಸ್ತಾರದ ಹಾಗೂ 60 ಅಡಿ ಆಳದ ಕೊಳದಲ್ಲಿ 16 ಕಲಾವಿದರು 15 ಬೆಸ್ತರ ಕಾವಲಿನಲ್ಲಿ, 6000 ಜನರ ಸಮ್ಮುಖದಲ್ಲಿ ನಾಟಕ ಪ್ರದರ್ಶಿಸಿದರು. ನೀರಿನಿಂದ 2 ಅಡಿ ಆಳದಲ್ಲಿ ತೆಪ್ಪ ಕಟ್ಟಿ ಅದರ ಆಧಾರದ ಮೇಲೆ ನಟರು ನಿಂತು ನಾಟಕವಾಡಿದಾಗ, ನೀರಿನ ಮೇಲೆಯೇ ನಿಂತಂತೆ ಜನರಿಗೆ ಭಾಸವಾಯಿತು. ಈ ನಾಟಕಕ್ಕೆ ತಗುಲಿದ ವೆಚ್ಚ 1,65,000 ರೂಪಾಯಿಗಳು.

ಈ ವರ್ಷ ನಿರಂತರದ ನಂಜುಂಡ ಬೃಹತ್ ತೊಟ್ಟಿಲಲ್ಲಿ ನಾಟಕವಾಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ 12* 15 ಅಡಿ ಅಗಲದ ಕಬ್ಬಿಣದ ತೊಟ್ಟಿಲು ಸಿದ್ಧವಾಗಿದೆ. 9 ಕಲಾವಿದರು, 4 ತಂತ್ರಜ್ಞರು ‘ಧ್ವಜದ ಹಿಂದೆ’ ನಾಟಕ ಪ್ರದರ್ಶಿಸಲಿದ್ದಾರೆ. ತೊಟ್ಟಿಲ ಮೇಲೆ ‘ಧ್ವಜದ ಹಿಂದೆ’ ಹೇಗಿದೆ ನೋಡಲು ಫೆಬ್ರುವರಿ 23 ರಂದು ಚನ್ನರಾಯಪಟ್ಟಣಕ್ಕೆ ಬನ್ನಿ.

ನಾಟಕ – ಧ್ವಜದ ಹಿಂದೆ

ರಚನೆ – ನಿರ್ದೇಶನ – ನಂಜುಂಡ ಮೈಮ್

ತಂಡ – ನಿರಂತರ, ಚನ್ನರಾಯಪಟ್ಟಣ.

ಸ್ಥಳ – ತೊಟ್ಟಿಲು!!

‍ಲೇಖಕರು admin

27 March, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading