ಹಿರಿಯ ಪತ್ರಕರ್ತ ಎಂ ವಿ ಕಾಮತ್ ಇನ್ನಿಲ್ಲ


೧೯೨೧ರಲ್ಲಿ ಉಡುಪಿಯಲ್ಲಿ ಜನಿಸಿದ ಮಾಧವ್ ವಿಟ್ಠಲ್ ಕಾಮತ್ ರವರು ಕರ್ನಾಟಕದ ಪತ್ರಿಕೋದ್ಯಮದಲ್ಲಿ ಹಿರಿಯ ತಲೆ.
೧೯೪೬ ರಲ್ಲಿ ಬೊಂಬಾಯಿನ ‘ಫ್ರೀ ಪ್ರೆಸ್ ಜರ್ನಲ್ ಪತ್ರಿಕೆ,’ ಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿ ಆರಂಭಿಸಿದ ಅವರು ಕಾನ್ಸ್‌ಟಿಟ್ಯೂಯಂಟ್ ಅಸ್ಸೆಂಬ್ಲಿ, ನಾಥೂರಾಮ್ ಗೋಡ್ಸೆ ವಿಚಾರಣೆ, ಪ್ರಥಮ ಸ್ವಾತಂತ್ರ್ಯೋತ್ಸವ ವರದಿಯಂತಹ ಮಹತ್ವದ ಸಂಧರ್ಭಗಳಲ್ಲಿ ವರದಿಗಾರರಾಗಿದ್ದವರು.
ಎಂ.ವಿ.ಕಾಮತ್ ‘ಫ್ರೀ ಪ್ರೆಸ್ ಜರ್ನಲ್, ಭಾರತ್ ಜ್ಯೋತಿ’ ಪತ್ರಿಕೆಗಳಿಗೆ ಸಂಪಾದಕರಾಗಿ ದುಡಿದರು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ ವರದಿ ಮಾಡಲು ಪಿ.ಟಿ.ಐ ವರದಿಗಾರರಾಗಿ ೧೯೫೫ ರಿಂದ ೧೯೫೮ ರ ವರೆಗೆ ನೇಮಕಗೊಂಡಿದ್ದರು.
ಅವರು ಸೇವೆ ಸಲ್ಲಿಸಿದ ಹುದ್ದೆಗಳು : ’ಮುಂಬೈನ ಯುನೈಟೆಡ್ ಏಶಿಯ’, ‘ಟೈಮ್ಸ್ ಆಫ್ ಇಂಡಿಯ’ದ ಯೂರೋಪಿಯನ್ ಪ್ರತಿನಿಧಿ, ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ’ ದ ಭಾನುವಾರದ ಸಂಪಾದಕ, ’ಪ್ರಸಾರ ಭಾರತಿಯ ಅಧ್ಯಕ್ಷ’ರಾಗಿ,’ಮಣಿಪಾಲ್ ನ ಡಾ. ಟಿಎಂಎ ಪೈ ಪ್ರತಿಷ್ಠಾನ’,’ಟೈಮ್ಸ್ ಆಫ್ ಇಂಡಿಯ’, ಪತ್ರಿಕೆಯ ವಾಷಿಂಗ್‍ಟನ್ ನಗರದಲ್ಲಿ ಭಾರತದ ಪ್ರತಿನಿಧಿಯಾಗಿ ಸುಮಾರು ೧೦ ವರ್ಷಗಳು.
ಭಾರತ ದೇಶದ ಸಾಮಾಜಿಕ ಸಮಸ್ಯೆಗಳನ್ನೂ ಹಾಗೂ ಅನೇಕ ವಿಷಯಗಳನ್ನು ಆರಿಸಿಕೊಂಡು, ಸುಮಾರು ೪೦ ಪುಸ್ತಕಗಳನ್ನು ರಚಿಸಿದ್ದಾರೆ.
ಅವರು ‘ಪದ್ಮಭೂಷಣ ಪ್ರಶಸ್ತಿ’ ಗೆ ಭಾಜನರು.
೯೩ ವರ್ಷದ ಪ್ರಾಯದಲ್ಲಿ, ವೃದ್ಧಾಪ್ಯದಿಂದ ಬಳಲುತ್ತಿದ್ದ ಕಾಮತರನ್ನು ‘ಮಣಿಪಾಲಿನ ಕಸ್ತುರ್ಬಾ ಆಸ್ಪತ್ರೆ’ಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರುಯಾಗದೆ ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ.
’ಅವಧಿ’ಯ ನಮನಗಳು.
 

‍ಲೇಖಕರು G

October 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: