ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂದೆ ಹೇಗೆ ಚಿಮ್ಮುತಿತ್ತು…


 

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ….


ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ
ಏನೋ ಶಂಕೆ ಭೀತಿ
 
ಹಿಂದೆ ಹೇಗೆ ಚಿಮ್ಮುತಿತ್ತು …
 
ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ
 
ಹಿಂದೆ ಹೇಗೆ ಚಿಮ್ಮುತಿತ್ತು …
 
ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ
 
ಹಿಂದೆ ಹೇಗೆ ಚಿಮ್ಮುತಿತ್ತು …
 
ಹಮ್ಮು ಬೆಳದು ನಮ್ಮ ಬಾಳು
ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು
 
ಹಿಂದೆ ಹೇಗೆ ಚಿಮ್ಮುತಿತ್ತು ..
 

‍ಲೇಖಕರು G

14 February, 2014

1 Comment

  1. sudha chidanand gowd

    ಹಮ್ಮು ಬೆಳದು ನಮ್ಮ ಬಾಳು
    ಆಯ್ತು ಎರಡು ಸೀಳು
    ಕೂಡಿಕೊಳಲಿ ಮತ್ತೆ ಪ್ರೀತಿ
    ತಬ್ಬಿಕೊಳಲಿ ತೋಳು
    ಆಹಾ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading