ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂಗ ಹೇಳಿದ್ದಕ್ಕೆ ಸಿಟ್ಟಾಗಬ್ಯಾಡ್ರಿ..

ರಾಜಕುಮಾರ ಮಡಿವಾಳರ 

ಅಸಹ್ಯವಾಗಿ ನಡೆಸುವುದಕ್ಕಿಂತ ಮುಚ್ಚಿಬಿಡುವುದು ಹೆಚ್ಚು ಸೂಕ್ತ…

ಧಾರವಾಡ…

ಹೆಚ್ಚು ಓದಿದವರುಳ್ಳ ಊರು, ಹೆಚ್ಚು ಶಿಕ್ಷಣ ಸಂಸ್ಥೆಗಳಿರುವ ಊರು, ನಾಡಿಗೆ ಹೆಚ್ಚು ಮೊದಲುಗಳು ಕೊಟ್ಟ ಊರು, ಹೆಚ್ಚು ಸಾಹಿತಿಗಳಿರುವ ಸಾಂಸ್ಕೃತಿಕ ತವರೂರು!!!!!!! ಹಾಗಿದ್ದರೂ ಸಹ
ಧಾರವಾಡದಲ್ಲಿದ್ದು ಧಾರವಾಡವೇ ಆದ ವರಕವಿಯ ಸ್ಮಾರಕದ ಸ್ಥಿತಿ ಗತಿ ಇದು.

ಆಗೊಬ್ಬ ಯಾರೋ ಹೊಸದಾಗಿ ಮೇಯರ್ ಆಗಿ ಬಂದ ಪುಣ್ಯಾತ್ಮ ಬೇಂದ್ರೆಯವರನ್ನ ಭೇಟಿಯಾಗಿ ಅಜ್ಜಾರ ಆಶೀರ್ವಾದ ಮಾಡ್ರಿ, ನಾ ಮೇಯರ್ ಆಗೇನಿ, ನಿಮಗೇನ್ ಬೇಕು ಹೇಳ್ರಿ ಮಾಡತೇನಿ ಅಂದಿದ್ನಂತೆ, ಅದಕ್ಕೆ ಪ್ರತಿಯಾಗಿ ಬೇಂದ್ರೆ ನೋಡಪಾ ಮೇಯರ ಸಾಹೇಬ ಸ್ವತಾಃ ಬೇಂದ್ರೇನ ಬೇಂದ್ರೆ ಸಲುವಾಗಿ ಏನೂ ಮಾಡಕೊಂಡಿಲ್ಲ, ಇನ್ನ ನೀ ಏನ್ ಮಾಡ್ತಿಯೋ ಅಂದಿದ್ರಂತ ಮಹಾನ್ ಸ್ವಾಭಿಮಾನಿ ಬೇಂದ್ರೆ…

ಈಗ ಆ ಮಾತೇ ನನ್ನದೂ….

ಬೇಕಾದರ ಖಾಸಗಿ ಸಹಯೋಗದಾಗ ನಡಸ್ರಿ, ನಿಮಗ ಸಾಧ್ಯ ಆದರ ಮಾಡ್ರಿ, ನಮ್ಮ ಕೈಲೆ ಆಗೂದಿಷ್ಟಾ, ಅನ್ನುವ ಅನಿಷ್ಟ ಮಾತಿನವರ ಮುಂದೆ ಅಂಗಲಾಚುವುದಕ್ಕಿಂತ ಟ್ರಸ್ಟ್ ಮುಚ್ಚಿ, ಅದರಿಂದ ಬಂದ ಹಣವನ್ನೂ ಸರಕಾರಕ್ಕೆ ವಾಪಸ್ ಮಾಡಿ “ಸುಖೀಭವ ಫ್ರಮ್ ಸಖೀಗೀತ” ಅಂದ್ರ ಮುಗಿತಪಾ..

ಹಿಂಗ ಹೇಳಿದ್ದಕ್ಕೆ ಸಿಟ್ಟಾಗಬ್ಯಾಡ್ರಿ..

ಯಾಕ್ ಹೇಳಾಕತ್ತೇನಿ ಅಂದರ ಇಲ್ಲೇ ಇದಾ ಈ ಪೇಪರಿನ್ಯಾಗ ಉಲ್ಲೇಖಿಸಿದಂಗ ಕುವೆಂಪು ಪ್ರಶಸ್ತಿಗೆ 5 ಲಕ್ಷ ಆದರ ಬೇಂದ್ರೆ ಪ್ರಶಸ್ತಿಗೆ 1 ಲಕ್ಷ ಕೊಡುವುದು ಕಷ್ಟ ಅಂತ ಬರದೈತಲ್ಲ ಅದು ಸರಕಾರದ ಕೆಲಸಲ್ರಿ, ಯಾಕ್ ಕೊಡಂಗಿಲ್ಲ? ಅಂತ ಸರಕಾರದ ಕೊಳಪಟ್ಟಿ ಹಿಡ್ದು ಕೇಳು ಒಬ್ಬ ಮಗನೂ ಇಲ್ಲಿ ಇಲ್ರಿ..

ಪಾಪ ಅಜ್ಜ ಕಾಡಿದಾಂವ ಅಲ್ಲ, ಬೇಡಿದಾಂವ ಅಲ್ಲ, ಹಾಡಿ ಹೋದಾಂವ, ನಾಕು ಮಂದಿ ಆಡಕೊಳ್ಳಂಗಾಗೂದು ಬ್ಯಾಡಾ…

ಏನಂತೀರಿ?

‍ಲೇಖಕರು avadhi

25 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading