ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀದೇವಿ, ಸಿರಿ ಜುಗಲಬಂದಿ..

ನಮಸ್ತೆ..ಹೇಗಿದ್ದೀರಿ?ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಎನ್ನುವುದು ನಿಮ್ಮ ಹತ್ತಿರವೂ ಸುಳಿಯಲಾರದು. ಇನ್ನು ’ನೆಪ’ ಎನ್ನುವುದು ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ!

ಖಂಡಿತ ಬಂದೇ ಬರುತ್ತೀರಿ…
ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ 🙂
ಪ್ರೀತಿಯಿಂದಶ್ರೀದೇವಿ ಕಳಸದ

 

ದೂರ ದಾರಿಯೂ ಹತ್ತಿರ

ನೀವಿದ್ದರೆ…

ಅವತ್ತು, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಬರೆಯಲು ಶುರು ಮಾಡಿದಾಗ ನನಗೆ ಟೈಪ್ ಮಾಡುವುದು, ಬ್ಲಾ
ಗು ಕಮೆಂಟುಗಳು ಇದ್ಯಾವುದರ ಗಂಧ ಗಾಳಿಯೂ ಇರಲಿಲ್ಲ. ಅಮರ ಶ್ರೀನಿಧಿ ಸೋಮು ಇವರೆಲ್ಲರೂ ಈ ಜಗತ್ತಿಗೆ ನನ್ನ ಪರಿಚಯಿಸಿದವರು, ಬ್ಲಾಗ್ ಮಾಡಿಕೊಟ್ಟು ಅದಕ್ಕೊಂದು ಚಂದದ ಹೆಸರಿಟ್ಟು ನನ್ನ ಬರಹಗಳನ್ನ ಟೈಪ್ ಮಾಡಿಕೊಟ್ಟ ಅವರೆಲ್ಲರೂ ಅಷ್ಟೊಂದು ಪ್ರೀತಿಯಿಂದ ಇಷ್ಟೆಲ್ಲಾ ಸಹಾಯ ಮಾಡಿದರು, ನೀವುಗಳು ನನ್ನ ಕಥೆಗಳನ್ನ ಓದಿ ನಾನು ತಪ್ಪು ಮಾಡಿದಾಗಲೆಲ್ಲಾ ತಿದ್ದಿ, ನಿಮಗಿಷ್ಟವಾದದ್ದನ್ನ ಹೇಳಿ ನನ್ನ ಪ್ರೋತ್ಸಾಹಿಸಿದ್ದೀರಿ. ಈ ಸಂಭ್ರಮದ ಸಮಯದಲ್ಲಿ ನಿಮ್ಮನ್ನೆಲ್ಲ ಹೇಗೆ ನೆನಪಿಸಿಕೊಳ್ಳದೆ ಇರಲಿ? ಅಂಕಿತ ಪ್ರಕಾಶನದವರು ನನ್ನ ಕಥಾ ಸಂಕಲನ ನಡೆದಷ್ಟು
ದಾರಿ ದೂರ ಹೊರತರುತ್ತಿದ್ದಾರೆ. ಈ ತಿಂಗಳ ಹದಿನೇಳರಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಬಿಡುಗಡೆ. ದಯವಿಟ್ಟು ಬನ್ನಿ. ಕಾಯುತ್ತಿರುತ್ತೇನೆ. ಅಲ್ಲಿ ಸಿಗೋಣ,
-ಸಿರಿ

 

‍ಲೇಖಕರು avadhi

14 November, 2010

2 Comments

  1. ಸುಘೋಷ್ ಎಸ್ ನಿಗಳೆ

    ಶ್ರೀದೇವಿ, ಕಾರ್ಯಕ್ರಮದಲ್ಲಿ ಒಂದು ಹಾಡು ಹೇಳುತ್ತೇನೆ ಎಂದು ಪ್ರಾಮಿಸ್ ಮಾಡಿದರೆ ಮಾತ್ರ ಬರ್ತೇನೆ… 🙂

  2. shreedevi kalasad

    ಓಹ್‌ ಸುಘೋಷ್‌ ಬನ್ನಿ… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading