ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆಯ ಡೈರಿಯ ಪುಟಗಳಿಂದ…

ಸ೦ಬ೦ಧಗಳು, ಬ೦ಧನಗಳು..

ನಟರಾಜು ಎಸ್ ಎಮ್

ನಿನ್ನೆ ಸಂಜೆ ಎಷ್ಟೋ ವರ್ಷಗಳ ಹಿಂದೆ ಓದಿದ್ದ ಒಂದು ಪುಟ್ಟ ಝೆನ್ ಕತೆ ನೆನಪಿಗೆ ಬಂತು. ಒಬ್ಬ ರಾಜ ಟೀ ಕುಡಿಯುತ್ತಾ ಇರುವಾಗ ಕೈ ತಪ್ಪಿ ಗ್ಲಾಸ್ ಅವನ ಕೈಯಿಂದ ಬೀಳುತ್ತದೆ. ಅಯ್ಯಯ್ಯೋ ಗ್ಲಾಸ್ ಒಡೆದು ಹೋಗುತ್ತಲ್ಲಾ ಎಂದು ಎಷ್ಟೊಂದು ಭಯದಿಂದ ಬೀಳುತ್ತಿರುವ ಗ್ಲಾಸ್ ಅನ್ನು ಹಿಡಿಯುತ್ತಾನೆ. ಒಂದರೆಕ್ಷಣ ಅವನಿಗೆ ನಾಚಿಕೆಯಾಗುತ್ತದೆ. ಇಷ್ಟೆಲ್ಲಾ ಸಾಮ್ರಾಜ್ಯವನ್ನು ಗೆದ್ದಿದ್ದರೂ ಈ ಪುಟ್ಟ ಗ್ಲಾಸ್ ಗಾಗಿ ನಾನು ಇಷ್ಟು ಭಯಪಟ್ಟೆನಾ ಅಂತ ಯೋಚಿಸಿ ತನ್ನಲ್ಲೇ ನಕ್ಕು ಆ ಗ್ಲಾಸನ್ನು ಎಸೆದುಬಿಡುತ್ತಾನೆ. ಈ ಕತೆ ನೆನಪಿಗೆ ಬಂದ ಮೇಲೆ ಇಷ್ಟು ವರ್ಷಗಳ ತುಂಬು ಜೀವನವನ್ನು ನಡೆಸಿದ ಮೇಲೂ ಕೆಲವು ಸಲ ಯಾರನ್ನೋ, ಏನನ್ನೋ, ಯಾವ ಸಂಬಂಧವನ್ನೋ ಕಳೆದುಕೊಳ್ಳುತ್ತೇವಾ ಅನ್ನೋ ಭಯದಿಂದಲೇ ನಾವು ಬದುಕು ಸಾಗಿಸುತ್ತೇವಾ? ಅನ್ನಿಸಿತು. ಅಂತಹ ಕಳೆದುಕೊಳ್ಳುತ್ತೇನೆ ಅನ್ನೋ ಭಯದಲ್ಲೇ ಆ ಸಂಬಂಧವನ್ನು, ವ್ಯಕ್ತಿಯನ್ನು ಅಥವಾ ವಸ್ತುವನ್ನು ಉಳಿಸಿಕೊಳ್ಳಲು ನಾವು ಏನೆಲ್ಲಾ ತಿಪ್ಪರಲಾಗ ಹಾಕಿ ನಮ್ಮ ನೆಮ್ಮದಿಯನ್ನು, ನಮ್ಮ ನಗುವನ್ನು ಹಾಳು ಮಾಡಿಕೊಳ್ಳುತ್ತಿದ್ದೇವಾ ಅನ್ನಿಸಿತು. ನಿಜ ನಮಗೆಲ್ಲಾ ಗೊತ್ತಿರುವ ಹಾಗೆ ಬದುಕು ದೊಡ್ಡದು. ಬದುಕಿನಲ್ಲಿ ಏನೆಲ್ಲಾ ಬರುತ್ತೆ ಹೋಗುತ್ತೆ. ಈ ಬಂದು ಹೋಗುವ ಗಳಿಗೆಗಳನ್ನು ಆರಾಮಾಗಿ ಅನುಭವಿಸಬೇಕು. ಒಂದು ಪಶ್ಚತ್ತಾಪವಿಲ್ಲದ, ಪಾಪಪ್ರಜ್ಞೆಯಿಲ್ಲದ, ಭಯವಿಲ್ಲದ ಅಧ್ಬುತವಾದ ಬದುಕೊಂದನು ಬದುಕಿ ತೋರಿಸಬೇಕು. ಒಂದು ಕ್ಷಣ ಗೊತ್ತಿದ್ದೋ ಗೊತ್ತಿಲ್ಲದೇನೋ ಏನೆಲ್ಲಾ ಮಾಡಿಬಿಡುತ್ತೇವೆ. ಏನೆಲ್ಲಾ ಮಾತನಾಡಿಬಿಡುತ್ತೇವೆ. ಏನೇನೋ ಭಾವನೆಗಳನ್ನು ಯಾವುದ್ಯಾವುದೋ ರೂಪಗಳಲ್ಲಿ ಹೊರ ಹೊಮ್ಮಿಸಿಬಿಡುತ್ತೇವೆ. ಆ ಎಲ್ಲಾ ಕ್ಷಣಗಳಲ್ಲಿ ಈ ಪಾಪಪ್ರಜ್ಞೆ, ಪಶ್ಷತ್ತಾಪ ಅನ್ನೋದು ಯಾವತ್ತಿಗೂ ನಮ್ಮಲ್ಲಿ ಸುಳಿಯಬಾರದು. ಸುಳಿದರೂ ಜಸ್ಟ್ ನೆಗ್ಲೆಟ್ ಮಾಡಬೇಕು. ಯಾಕೆಂದರೆ ಬದುಕಿನಲ್ಲಿ ಎಲ್ಲರಿಗೂ ತಿಳಿದಂತೆ ಯಾರೂ perfect ಅಲ್ಲ. ಬದುಕು ಬಂದಂತೆ ಸ್ವೀಕರಿಸೋಣ. ಚಂಚಲವಾದ ಮನಸ್ಸಿನ ಜೊತೆ ಬದುಕೋದು ಒಂದು ಕಲೆ. ತುಂಬಾ ಬೇಸರವಾದಾಗ ಆ ಬೇಸರವನ್ನು ಅಧ್ಬುತವಾಗಿ ಅನುಭವಿಸೋದನ್ನು ಕಲಿಯೋಣ. ಬದುಕೇ ಸುಂದರವಾಗು. ಸಿಹಿ ಸಿಹಿ ದಿನಗಳನ್ನು, ಕ್ಷಣಗಳನ್ನು ಹೊತ್ತು ಬಾ..]]>

‍ಲೇಖಕರು G

23 June, 2012

2 Comments

  1. malathi S

    ಪುಟ್ಟಣ್ಣ ಎಷ್ಟು ಚಿಕ್ಕವನು ನೀನು, ಆದ್ರೂ ಎಷ್ಟು ಅನುಭವಸ್ಥನಂತೆ ಮಾತನಾಡುತ್ತೀಯಾ. ಖುಶಿ ಯಾಗುತ್ತೆ ನಿನ್ನ ಬರಹ ಓದಿದಾಗ. ಯಾವಾಗಲೂ ಒಂದು feel good factor irutte’ proud of u tamma!!!
    akka

  2. Badarinath Palavalli

    ನಿಮ್ಮ ಮಾತು ನನಗೆ ಅರೆ ಒಪ್ಪಿಗೆ ನಟಣ್ಣ, ಯಾಕೆಂದರೆ ಒಳ್ಳೆಯ ಮಿತ್ರರನ್ನು ಉಳಿಸಿಕೊಳ್ಳಲು ನಾನು ತಿಪ್ಪರಲಾಗ ಹಾಕಲೂ, ಅವರ ಕ್ಷಮೆ ಕೇಳಲೂ ಸೈ. ಪೊಳ್ಳು ಗೆಳತನಗಳೆಲ್ಲ ಆರಿ ಹೋಗುವ ದೀಪಗಳು. ನನಗೆ ದಿವ್ಯ ಗೆಳೆತನದ ಬೆಳಕು ಬೇಕು ನಿಮ್ಮಂತ ಸದಾ ಬೆಳಗುವ ನಂದಾ ದೀಪಗಳು ಬೇಕು. ಅಗಲೇ ಮಿತ್ರತ್ವಕ್ಕೂ ಮೌಲ್ಯವರ್ಧನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading