ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಲ್ಮಿಡಿ ಶಾಸನ ದೊರೆತ ಗ್ರಾಮ ಇಂದು ಅನಾಥ…


ಮದನ್ ಗೌಡ

ಕನ್ನಡದ ಮೊದಲ ಅಕ್ಷರ ಆರಂಭವಾದ ಹಲ್ಮಿಡಿ ಶಾಸನ ದೊರೆತ ಪುಟ್ಟ ಗ್ರಾಮ ಇಂದಿಗೂ ಅನಾಥವಾಗಿದೆ. 2003ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಸಮಯದಲ್ಲಿ ಗ್ರಾಮದಲ್ಲಿ ಶಾಸನದ ಪ್ರತಿರೂಪದ ನೆನಪಿನ ಮಂಟಪ ನಿರ್ಮಿಸಲಾಗಿದೆ. ಅದಕ್ಕೆ ಅಂದಿನ ಸಚಿವರಾದ ಶ್ರೀಮತಿ ರಾಣಿ ಸತೀಶ್ ಮತ್ತು ಅಂದಿನ ಜಿಲ್ಲಾಧಿಕಾರಿ ಎಲ್.ಕೆ.ಅತಿಖ್ ಅವರು ಹಾಗೂ ಸ್ಥಳೀಯ ಗ್ರಾಮಸ್ಥರ, ಜನಪ್ರತಿನಿಧಿಗಳ ಸಹಕಾರ ಕಾರಣ, ಕನ್ನಡದ ಜನ್ಮಭೂಮಿಗೆ ಅನೇಕ ಮಹಿನೀಯರು ಬಂದು ಭಾಷಣ ಮಾಡಿ ಹೋಗಿದ್ದಾರೆ. ಗ್ರಾಮ ಏಳಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವುದಾಗಿ ಹೇಳಿ ಹೋಗಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಆದರೆ ಈ ಹಿಂದಿನ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮುಖ್ಯಸ್ಥರಾಗಿದ್ದ ಮನು ಬಳಿಗಾರ ಅವರು ಗ್ರಾಮಕ್ಕೆ ಅವರೇ ಸ್ವತ: ಭೇಟಿ ನೀಡಿ, ಕನ್ನಡ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ರು.

ಹಣ ಬಿಡುಗಡೆಯಾಗಿ 7 ವರುಷ ಕಳೆದರೂ ಸಹ ಜಿಲ್ಲಾ ಆಡಳಿತ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಚಕಾರವೆತ್ತಿಲ್ಲ. ಇತ್ತೀಚಿಗೆ ಈ ಹಿಂದಿನ ಜಿಲ್ಲಾಧಿಕಾರಿ ಕೆ.ಮೋಹನ್ ರಾಜ್ ಅವರನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿ ಗ್ರಾಮದ ಪ್ರಮುಖ ಸಮಸ್ಯೆಗಳನ್ನು ತೋರಿಸಲಾಯಿತು. ಕನ್ನಡ ಭವನ ನಿರ್ಮಾಣದ ಬಗ್ಗೆ ಸ್ಪಷ್ಟ ಭರವಸೆ ನೀಡಿದ್ರು. ಈಗ ಬೇರೆ ಜಿಲ್ಲಾಧಿಕಾರಿಗಳು ಬಂದಿದ್ದಾರೆ. ಯಾವುದೇ ಫಲಿತಾಂಶವಿಲ್ಲ. ಶಾಸಕ ರುದ್ರೇಶಗೌಡ ಶಾಸನದ ಮೇಲ್ಚಾವಣೆ ನಿರ್ಮಾಣಕ್ಕೆ 50 ಲಕ್ಷ ರೂ. ಸರಕಾರ ಬಿಡುಗಡೆ ಮಾಡಿದೆ ಅಂದ್ರು, ಕೆಲಸವಾಗಿಲ್ಲ.
ಕನ್ನಡದ ಮೊದಲ ಶಾಸನ ದೊರೆತ ಗ್ರಾಮವೆಂದರೆ ಕನ್ನಡಿಗರಿಗೆ ಹೆಮ್ಮೆಯ ತಾಣವಾಗಬೇಕು. ಆದರೆ ಇಲ್ಲಿಯವರೆಗೆ ಯಾವುದೇ ಕನ್ನಡ ಪರ ಸಂಘಟನೆಯ ನಾಯಕರು ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ನವೆಂಬರ್ ಬರುತ್ತಿದೆ ಮತ್ತೆ ವೀರ ಕನ್ನಡಿಗರು ಬರುತ್ತಾರೆ, ಅದೇ ರಾಜಕಾರಣಿಗಳು ಭಾಷಣ ಮಾಡುತ್ತಾರೆ, ಸಾಹಿತಿಗಳು ಗಂಟೆಗಟ್ಟಲೇ ಕನ್ನಡ ಶಾಸನದ ಇತಿಹಾಸ ಹೇಳುತ್ತಾರೆ ಆದರೆ ಅವೆಲ್ಲವೂ ನೆನಪಿನ ಮಂಟಪಕ್ಕೆ ಹಾಕಿದ ಹೂವಿನಂತೆ ಒಂದೇ ದಿನಕ್ಕೆ ಬಾಡುತ್ತದೆ. ಗ್ರಾಮದ ಜನರ ಭಾವನೆಗಳು ಬಾಧಿಸುತ್ತಲೆ ಇರುತ್ತದೆ. ಇದು ಕನ್ನಡ ನೆಲದ ದುರಂತ.
 

‍ಲೇಖಕರು avadhi

22 August, 2013

2 Comments

  1. chalam

    ನಮ್ಮ ನೆಲದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು ನಾಡಿನ ತುಂಬಾ ಅದರಲ್ಲೂ ಸ್ವತಃ ಹಾಸನದಲ್ಲೇ ಇದ್ದಾರೆ.ನೆಲ ಜಲದ ಬಗ್ಗೆ ಕಾಳಜಿ ಕಾಣೆಯಾಗುತ್ತಿರುವುದರ ಹಿಂದೆ ಮದನಗೌಡರು ಹೇಳಿರುವ ವೀರಕನ್ನಡಿಗರ ಕೊಡುಗೆಯು ಸಾಕಷ್ಟಿದೆ.ಹಲ್ಮಿಡಿಯ ಬಗ್ಗೆ ಇಂತಹ ನಿಲ್ರ್ಯಕ್ಷ ಸಲ್ಲದು.

  2. nagaraj hettur

    Matte madan goudru ee vichRa tegedukollBeku

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading