ಡಿ ವಿ ಪ್ರಹ್ಲಾದ್
ಇತ್ತೀಚಿಗೆ ಸಿಕ್ಕವರದೆಲ್ಲಾ ಒಂದೇ ಪ್ರಶ್ನೆ ಈಗ ಏನ್ ಮಾಡ್ತಾ ಇದ್ದೀರಾ ಅಂತ .
ಅದು ಸಹಜವೂ ಹೌದು . ಬಹುಪಾಲು ಜನ ‘ಸಂಚಯ’ವೇ ನನ್ನ ಚಟುವಟಿಕೆ ಎಂದುಕೊಂಡಿದ್ದರು, ನನಗೂ ಅದರ ಭಾರ ಹೆಗಲಿಳಿದ ಮೇಲೇ ಅರಿವಾದದ್ದು, ಯಾವುದೋ ಕಾಲವಾಗಿದ್ದ ನನ್ನ ಕವಿತೆ ಬರೆಯುವ ಮನಸ್ಥಿತಿ ಮತ್ತೆ ರೂಢಿಸಿಕೊಂಡೆ, ಕವಿತೆ ತಿದ್ದುತಿದ್ದ ಬರೆಸುತಿದ್ದ ತೀವ್ರವಾಗಿ ಹುಡುಕಿ ಓದುತಿದ್ದ ಕವಿತೆಗಳ ಗುಂಗು ಮತ್ತೆ ಮರಳಿ ಮನೆಗೆ ಬಂದಹಾಗೆ ಆಯಿತು, ಒಂದೆರೆಡು ಕವಿತೆಯ ಹಸ್ತಪ್ರತಿಗಳಿಗೆ ಕೊಡುವ ಪ್ರಶಸ್ತಿಗಳಿಗೂ ಕಳಿಸಿ ಕಾದೆ, ಆದ್ರೆ ಯಾವ ಪ್ರಶಸ್ತಿಯೂ ಬರಲಿಲ್ಲ. ಆದದ್ದೆಲ್ಲ ಒಳಿತೇ ಆಯ್ತು ಮತ್ತಷ್ಟು ಕವಿತೆಗಳನ್ನ ತಿದ್ದಲು ಅನುವಾಯ್ತು. ನನ್ನ ಕವಿತೆಗಳ ಔಕಾತ್ (ಮಟ್ಟ ) ಗೊತ್ತಾಯ್ತು.
ಅದೇ ಯಾವತ್ತಿನ ಭಂಡತನದಲ್ಲಿ ಈಗ ಅವುಗಳನ್ನ ಪ್ರಕಟಿಸಲು ಮುಂದಾಗಿರುವೆ, ನನ್ನ ಮಿತ್ರ ರವೀಂದ್ರಕುಮಾರ್ ಈ ಸಂಕಲನದ ಮುನ್ನುಡಿ ಬರೆಯಲು ಒಪ್ಪಿದ್ದರು, ಅವರ ನಿರ್ಗಮನದ ನಂತರ ಈಗ ಖಾಲಿ, ಮಿತ್ರ ಡಿ.ಎಸ್ . ರಾಮಸ್ವಾಮಿ ಈ ಸಂಕಲನದ ಬೆನ್ನುಡಿ ಬರೆಯಲಿದ್ದಾರೆ. ಮುಖಪುಟ ಮತ್ತು ಪುಸ್ತಕ ವಿನ್ಯಾಸ ನನ್ನ ಕಿರಿಯ ಮಿತ್ರ ಗುರುಪ್ರಸಾದ್ ಮಾಡಿದ್ದಾರೆ. ಸುಮ್ಮನೆ ಅದರ ಮುಖಪುಟಗಳ ವಿನ್ಯಾಸ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ, ಗುರುವಿಗೂ ಇದು ತನ್ನ ಕ್ಯಾನ್ಸರ್ ಪರ್ವದ ನಂತರ ಸಹಜ ಸ್ಥಿತಿಗೆ ಬರಲು ನೆರವಾಗುತ್ತೆ ಅಂತ ಭಾವಿಸುವೆ.
ತೊಣಚಿ ಹೊಕ್ಕವನ ಹಾಗೆ ಏನಾದರೂ ಮಾಡಬೇಕು ಅಂತ ಮನಸಿಗೆ ಬಂದರೆ ಅದು ಮುಗಿಯುವತನಕ ಹಾರಾಡುವದು ವಯಸ್ಸಾದರೂ ಬುದ್ಧಿ ಬರಲಿಲ್ಲ. ಜೊತೆಯಲ್ಲಿ ಇರುವವರನ್ನು ಸುಮ್ಮನೆ ಇರಲೂ ಬಿಡುವದಿಲ್ಲ. ‘ದಯಾನಿ ಭಾವನಿ’ ನನ್ನ ಮೂರನೇ ಕವನ ಸಂಕಲನ, ನಾಳೆಯಿಂದ (೨೦೦೫) ಸಂಕಲನ ಪ್ರಕಟಿಸಿ ಹದಿನಾಲ್ಕು ವರ್ಷ ವನವಾಸದ ನಂತರ ಈಗ ಮತ್ತೊಮ್ಮೆ ಕಾವ್ಯ ಯೋಗ .






shubavagali Prahlad.
abhinandanegalu sar, sankalanavannu eduru noduttiddene.
-vidyarashmi pelathadka
ಶುಭಾಷಯಗಳು