ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಸ್ತಿ ಪ್ರಕಾಶನದ ಕಥಾ ಸಂಕಲನ ಸ್ಪರ್ಧೆಗೆ ಆಹ್ವಾನ

ಸ್ವಸ್ತಿ ಪ್ರಕಾಶನವು ತನ್ನ ಎರಡನೇ ವರ್ಷದ ಸವಿನೆನಪಿಗಾಗಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ


ಹೊಸ ಕಥೆಗಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕಥಾಸಂಕಲನ ಸ್ಪಧರ್ೆಯನ್ನು ಆಯೋಜಿಸಲಾಗಿದೆ. ಇದುವರೆಗೂ ಒಂದೂ ಕಥಾ ಸಂಕಲನ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಹೊರಬಂದಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನ್ನಿಸಿದ ಸುಮಾರು ಎಂಟರಿಂದ ಹತ್ತು ಕಥೆಗಳಿರುವ 105 ರಿಂದ 110 ಪೇಜ್ (ಪಾಂಟ್ ಸೈಜ್ 12) ಪ್ರಕಟಿತ ಅಥವಾ ಅಪ್ರಕಟಿತ ಸ್ವಂತ ಕಥೆಗಳನ್ನು ಡಿಟಿಪಿ ಮಾಡಿಸಿ ಕಳುಹಿಸಬೇಕು.ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.
ಆಯ್ಕೆಯಾದ ಕತೆಗಾರರಿಗೆ ಐದುಸಾವಿರ ರೂಪಾಯಿ ನಗದು ಬಹುಮಾನ ಮತ್ತೆ ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುವುದು. ಮತ್ತು ಅವರ ಕಥಾ ಸಂಕಲನವನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆಗೆ 25 ಪುಸ್ತಕಗಳನ್ನು ಲೇಖಕರು ಪಡೆದುಕೊಳ್ಳಬಹುದು. ಈ ಪ್ರಶಸ್ತಿಯನ್ನು ಮೇ ತಿಂಗಳ ಕೊನೆಯಲ್ಲಿ ಕುಮಟಾ ದಲ್ಲಿ ಪ್ರಕಟಿಸಲಾಗುವುದು.
ಕತೆಗಳನ್ನು ಕಳಿಸಲು ಕೊನೆಯ ದಿನಾಂಕ: ಮಾರ್ಚ 5, 2014
ಕಳಿಸಬೇಕಾದ ವಿಳಾಸ
ಸ್ವಸ್ತಿ ಪ್ರಕಾಶನ,
ಐಸಿರಿ ಸುಪ್ರಭಾ ಬಿಲ್ಡಿಂಗ್
ರಾಷ್ಟ್ರೀಯ ಹೆದ್ದಾರಿ 17. ಹೊಸ ಬಸ್ ನಿಲ್ದಾಣದ ಹತ್ತಿರ
ಕುಮಟಾ. (ಉತ್ತರ ಕನ್ನಡ)
ಮೊಬೈಲ್ ನಂಬರ್: 9743741393
 
ಕಥಾ ಸಂಕಲನ ಸ್ಪರ್ಧೆಯ ನಿಯಮಗಳು ಇಂತಿವೆ :
1) ಪ್ರತಿ ಕಥೆೆಗಾರನು ತಮಗೆ ಉತ್ತಮವೆನಿಸಿದ 8 ರಿಂದ 10 ಕಥೆಗಳನ್ನು ಕಳುಹಿಸಿ ಕೊಡಬೇಕು.
2) ಪ್ರಕಟಿತ ಅಥವಾ ಅಪ್ರಕಟಿತ ಸ್ವಂತ ಕಥೆಗಳನ್ನು ಡಿಟಿಪಿ ಯಲ್ಲಿ(ಪಾಂಟ್ ಸೈಜ್ 12) ಕಳುಹಿಸಬೇಕು
3) ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೆ ಹಿಂತಿರುಗಿಸಲಾಗುವುದಿಲ್ಲ.
4) ಕಥೆಗಳು ನುಡಿ ಅಥವಾ ಬರಹದಲ್ಲಿರಲಿ.
5) ಕಥೆೆಯ ತಂತ್ರ, ಭಾಷೆ , ವಸ್ತು ನಿರೂಪಣೆಯಷ್ಟೆ ವ್ಯಾಕರಣ ಶುದ್ಧವಾಗಿರಲಿ.
6) ಸ್ಪರ್ಧೆಗೆ ಕಳುಹಿಸುವ ಕಥೆಗಳು ಮೊದಲು ಪುಸ್ತಕರೂಪದಲ್ಲಿ ಪ್ರಕಟಣೆಯಾಗಿರಬಾರದು.(ಪತ್ರಿಕೆ ಅಥವಾ ಬ್ಲಾಗ್ ಗಳಲ್ಲಿ ಪ್ರಕಟವಾಗಿದ್ದರೆ ತೊಂದರೆಯಿಲ್ಲ.)
7) ಆಯ್ಕೆಯಾದ ಕಥೆೆಗಾರರು ಪುಸ್ತಕ ಪ್ರಕಟಿಸುವಾಗ ಕತೆಗಳ ಸ್ವಂತ ರಚನೆಯ ಬಗ್ಗೆ ಮುಚ್ಚಳಿಕೆ ಬರೆದುಕೊಡಬೇಕು.
8) ಕತೆಗಳನ್ನು ಈ ಮೇಲ್ ಮಾಡಬಹುದು. (ಹಾರ್ಡ ಕಾಪಿ ಕಡ್ಡಾಯ) ಕೊನೆಯ ದಿನಾಂಕಕ್ಕೂ ಮೊದಲು ಪ್ರಕಾಶನದ ವಿಳಾಸಕ್ಕೆ ಹಾರ್ಡ ಕಾಪಿ ತಲುಪಬೇಕು. ಅವಧಿಯ ನಂತರ ಬಂದ ಕತೆಗಳನ್ನು ಪರಿಗಣಿಸಲಾಗುವುದಿಲ್ಲ. ಎಲ್ಲಾ ಕಥೆೆಗಳನ್ನು ಒಮ್ಮೇಲೆ ಕಳಿಸಿಕೊಡಬೇಕು.
9) ಕಥಾ ಸಂಕಲನದ ಆಯ್ಕೆ ನಾಡಿನ ಪ್ರಸಿದ್ಧ ಕಥೆೆಗಾರರಿಂದ ಮಾಡಿಸಲಾಗುವುದು. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ
ಪ್ರಕಾಶಕರದ್ದೇ ಅಂತಿಮ ನಿರ್ಧಾರ.
 

‍ಲೇಖಕರು G

26 February, 2014

1 Comment

  1. nagaraj v.

    tumba uttama kelasa. hosa barahagaararannu gurutisi belesuva kelasa nirantaravaagi nadeyali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading