ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಹಾರ್ದತೆಗಾಗಿ ಮಾನವ ಸರಪಳಿ


2018 ಜನವರಿ 30

ಪ್ರತಿಜ್ಞೆ ಸ್ವೀಕಾರ ಸಂದೇಶ

ಭಾರತೀಯ ಪ್ರಜೆಗಳಾದ ನಾವು, ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ
ಸಾವಿರಾರು ವರುಷಗಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸ್ಮರಿಸುತ್ತೇವೆ.

ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವ ವನ್ನು ಮತ್ತು ಈ ಉದಾತ್ತ ಮೌಲ್ಯಗಳನ್ನು ಹೊಂದಿರುವ ನಮ್ಮ ಸಂವಿಧಾನದ ಆಶಯಗಳನ್ನು ದೃಢವಾಗಿ ಪ್ರತಿಪಾದಿಸುತ್ತೇವೆ.

ಶಾಂತಿ, ಸ್ನೇಹ, ಸೌಹಾರ್ದತೆ, ಸಹಬಾಳ್ಬೆಗೆ ಬದ್ದರಾಗಿ ಕೋಮು ಸಾಮರಸ್ಯ ವನ್ನು ನಾವು ಕಾಪಾಡಿಕೊಂಡು ಬರುತ್ತೇವೆ.

ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಈ ದಿನದಂದು ಕೋಮುವಾದ, ಮತೀಯ ಮೂಲಭೂತವಾದ, ಎಲ್ಲಾ ಬಗೆಯ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಪಣ ತೊಡುತ್ತೇವೆ. ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿರುವ ಕರ್ನಾಟಕ ದ ವೈವಿಧ್ಯತೆಯ ಸಂಸ್ಕೃತಿಯನ್ನು ಸಂರಕ್ಷಸುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸುತ್ತಿದ್ದೇವೆ.

ಸೌಹಾರ್ದತೆಗಾಗಿ ಕರ್ನಾಟಕ
ಮಾನವ ಸರಪಳಿ

‍ಲೇಖಕರು Avadhi GK

30 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading