ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೇಡಂನಲ್ಲಿ ಅಮ್ಮ ಪ್ರಶಸ್ತಿ ಸಂಭ್ರಮ

ಲಾಬಿಯ ನೋಬೆಲ್ಗಿಂತ ಪ್ರಾಂಜಲ ‘ಅಮ್ಮ ಪ್ರಶಸ್ತಿ’ ಶ್ರೇಷ್ಠ : ಹುಡಗಿ

ಲಾಬಿಯ ನೋಬೆಲ್, ಆಸ್ಕರ ಪ್ರಶಸ್ತಿಗಳ ಬೆನ್ನು ಬೀಳದೆ, ಮನುಷ್ಯತ್ವದ ಆಧಾರದ ಮೇಲೆ ಪ್ರಾಂಜಲ ಮನಸ್ಸಿನಿಂದ ಕೊಡಮಾಡುವ ‘ಅಮ್ಮ ಪ್ರಶಸ್ತಿ’ ಪಡೆಯುವುದು ಶ್ರೇಷ್ಠ ಎಂದು ರಂಗಾಯಣ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಪ್ರೊ ಆರ್ ಕೆ  ಹುಡಗಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ಬುಧವಾರ ಆಯೋಜಿಸಿದ್ದ 14ನೇ ವರ್ಷದ ಅಮ್ಮ ಪ್ರಶಸ್ತಿ ಹಾಗೂ ಅಮ್ಮ ಗೌರವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವದ ನೋಬೆಲ್ ಹಾಗೂ ಆಸ್ಕರ್ ಪ್ರಶಸ್ತಿ, ರಾಜ್ಯದ ಜ್ಞಾನಪೀಠ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳ ಹಿಂದೆ ದೊಡ್ಡ ಲಾಬಿಯೇ ನಡೆಯುತ್ತಿದೆ ಎಂದು ಆಪಾದಿಸಿದ ಅವರು, ಅಂತಹ ಪ್ರಶಸ್ತಿ ಪಡೆಯುವುದಕ್ಕೂ ಮುನ್ನ ‘ಅಮ್ಮ ಪ್ರಶಸ್ತಿ’ಯಂತಹ ಮಾನವೀಯತೆ ಆಧಾರದ ಮೇಲೆ ಲಭಿಸುವ ಪ್ರಶಸ್ತಿಗಳತ್ತ ಮುಖಮಾಡಬೇಕು ಎಂದು ಕರೆ ನೀಡಿದರು.

ಸತತ ಮೂರುವರೆ ಸಾವಿರ ವರ್ಷಗಳ ಕಾಲ ಕೃಷಿ ಪ್ರಧಾನ ದೇಶವಾದ ಭಾರತವು ಈಗ ರೈತರ ಸಾವುಗಳಿಂದ ನಲುಗಿ ಹೋಗಿದೆ. ಮನುಷ್ಯತ್ವದ ಬರಗಾಲದಲ್ಲಿ ಜೀವಿಸುವ ವಾತಾವರಣ ನಿರ್ಮಾಣಗೊಂಡಿದೆ. ಸಮಾಜವು ಮನುಷ್ಯಹೀನ ಪರಿಸರದಲ್ಲಿ ವಾಸಿಸುತ್ತಿದೆ ಆದ್ದರಿಂದ ತಾಯಿಯನ್ನು ಪ್ರೀತಿಸುವ ಮನೋಭಾವ ಬೆಳೆದಲ್ಲಿ ಮನುಷ್ಯತ್ವ ಮೆರೆಯಲು ಸಾಧ್ಯ.
ಈ ಸಂದರ್ಭದಲ್ಲಿ ‘ಗಜಲೋತ್ಸವ’ ಗಜಲ್ ಸಂಕಲನಕ್ಕಾಗಿ ಡಾ. ಕಾಶಿನಾಥ ಅಂಬಲಗೆ, ’ಜೋಗಿ ರೀಡರ್ ವಾಚಿಕೆ’ ಸಂಪಾದನೆ ಕೃತಿಗಾಗಿ ಸಂಧ್ಯಾರಾಣಿ, ’ಅಜೀಬು ದುನಿಯಾ’ ಕವನ ಸಂಕಲನಕ್ಕಾಗಿ ಪ್ರವರ ಕೊಟ್ಟೂರು ಅವರಿಗೆ ತಲಾ ಐದು ಸಾವಿರ ರೂಪಾಯಿಗಳ ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಕಾಣಿಕೆ ಒಳಗೊಂಡ ‘ಅಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಕನ್ನಡ ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ದೂರದರ್ಶನ ಕಾರ್ಯಕ್ರಮ ನಿರ್ಮಾಪಕಿ ಹೆಚ್.ಎನ್.ಆರತಿ, ವಿಮರ್ಶಕ ಡಾ. ಶ್ರೀಶೈಲ ನಾಗರಾಳ, ಪತ್ರಕರ್ತ ಡಾ. ಶಿವರಾಮ ಅಸುಂಡಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ ‘ಅಮ್ಮ’ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಡಾ. ಸಿದ್ಧತೋಟೆಂದ್ರ ಸ್ವಾಮೀಜಿ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಮಾತನಾಡಿದರು.
ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೀರಾರೆಡ್ಡಿ ಹೂವಿನಬಾವಿ, ಪ್ರತಿಷ್ಠಾನ ಸಂಚಾಲಕಿ ರತ್ನಕಲಾ ಮುನ್ನೂರು, ಅಧ್ಯಕ್ಷ ನಾಗೇಂದ್ರಪ್ಪ ಅಲ್ಲೂರು ವೇದಿಕೆಯಲ್ಲಿದ್ದರು.
ಕವಿತಾ ಮಠಪತಿ, ಲಕ್ಷ್ಮೀ ಶಂಕರ ಜೋಶಿ, ಷಣ್ಮುಖ, ಕು. ಸ್ವಾತಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು. ನಾಲವಾರ ಮಠದ ಕು. ಕಾಶಿನಾಥ ಅಮ್ಮನ ಕುರಿತು ಹಾಡಿದ ಹಾಡು ನೆರೆದವರನ್ನು ಮೂಕವಿಸ್ಮಿತರನ್ನಾಗಿಸಿತು.
ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಭಾರತಿ ಸಾಲಿಮಠ ನಿರೂಪಿಸಿದರು.

‍ಲೇಖಕರು G

29 November, 2014

4 Comments

  1. mmshaik

    ellarigu abhinandanegaLu…

  2. vijayendra kulkarni[malli] kalaburagi

    AMMA Tandakke Oleeyadaagali

  3. ನಾಗರಾಜ್ ಹೆತ್ತೂರ್

    ಅಭಿನಂದನೆಗಳು

  4. J.S.Ganjekar

    ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading