ಸುರೇ೦ದ್ರನಾಥ್ ಹ೦ಚಿಕೊ೦ಡಿದ್ದು…"…ಕೆಲವರಿಗಿ ಮನೀನs ಗೋರಿ. ಕೆಲವರಿಗಿ ಆಫೀಸೇ ಗೋರಿ. ಇನ್ನ ಕೆಲವರಿಗಿ ಜಗತ್ತs ಗೋರಿ.."
ಕಂಬಾರರ “ಚಾಳೇಶ” ಮತ್ತೆ ಪ್ರಿಂಟ್ ಆಗಿದೆ. ಅಂಕಿತದಿಂದ ಹೊರಬಂದಿದೆ. ಮೊನ್ನೆ ಓದುತ್ತಿದ್ದೆ. ಕೆಲವು ಸಾಲುಗಳು ಹೀಗಿವೆ.
” ಹುಶಪ್ಪ: ಸಾಯೋದರೊಳಗೂ ಒಂದುನೂರಾ ಎಂಟ ಪ್ರಕಾರ ಅದಾವರಿ. ಕೆಲವರು ಜೀವ ಹೋಗಿ ಸಾಯತಾರ. ಕೆಲವರು ಹೋಗದ ಸಾಯತಾರ. ಕೆಲವರು ಹರೇದಾಗs ಸತ್ತ ಮುದುಕರಾಗೋತನಕ ಜೀವಂತ ಇರತಾರ. ಕೆಲವರು ಹುಟ್ಟಿದಾಗs ಸತ್ತ ತೋರಿಕೆಗಾಗಿ ನಡದಾಡತಿರತಾರ. ಸಾವಿನಾಗs ಇಷ್ಟ ಪ್ರಕಾರ ಇದ್ದರ, ಗೋರಿಯೊಳಗೂ ಇರಬೇಕೋ ಬ್ಯಾಡ್ರೋ?
ಗೋವಿಂದ: ಇರಬೇಕಾಯ್ತಲ್ಲ.
ಹುಶಪ್ಪ: ಹಾ! ಅದಕ್ಕs ಕೆಲವರಿಗಿ ಮನೀನs ಗೋರಿ. ಕೆಲವರಿಗಿ ಆಫೀಸೇ ಗೋರಿ. ಇನ್ನ ಕೆಲವರಿಗಿ ಜಗತ್ತs ಗೋರಿ. ಕೆಲವರಿಗಿ ಹೆಣ್ಣ, ಹರೇ, ಚಟ, ಏನ ಒಂದೋ? ಎರಡೋ?”]]>
ನಿಮಗೆ ಇವೂ ಇಷ್ಟವಾಗಬಹುದು…






ಎಷ್ಟ್ ಖರೆ ಅಲ್ಲ ಈ ಮಾತು!! ಹಸಿ ಗ್ವಾಡ್ಯಾಗ್ ಹಳ್ಳ್ ಒತ್ತಿಧಂಗ!!