ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಯೋಧನ ಸಂಭ್ರಮ ಮತ್ತು ಪ್ರಕಾಶ್ ಹೆಗ್ಡೆ

ಸುಯೋಧನ ಪ್ರಕಾಶನದ  ಮೂರು ಕೃತಿಗಳು ಬಿಡುಗಡೆಯಾದವು. ಅವು ಬಿಡುಗಡೆಯಾದವು ಎಂದು ಗೊತ್ತಾಗುವುದು ಹೇಗೆ ?

ಆಗ ಎಂಟ್ರಿ ಕೊಟ್ಟವರು ನಮ್ಮ ಪ್ರೀತಿಯ ಪ್ರಕಾಶ್ ಹೆಗ್ಡೆ  ಒಮ್ಮೆ ಪ್ರಕಾಶ್ ಹೆಗ್ಡೆ ಕ್ಯಾಮೆರಾ ಹಿಡಿದು ತಮ್ಮ ಅಜಾನುಬಾಹು ದೇಹಕ್ಕೆ ಸಾಕಷ್ಟು ಮುಗುಳ್ನಗೆ ತೀಡಿಕೊಂಡು ಕಣಕ್ಕಿಳಿದರೆಂದರೆ  ನಿನ್ನೆಯ ನೆನಪುಗಳು ಶಾಶ್ವತವಾಗಿ ದಾಖಲಾಗುತ್ತದೆ.

ಅಂತೆ ಆ ರೀತಿಯಲ್ಲಿ ಅವರು  ಭಾನುವಾರ ಸುಯೋಧನ ಪ್ರಕಾಶನದ ಸಂಭ್ರಮವನ್ನೂ ದಾಖಲಿಸಿದರು.

ಗೋಪಾಲ ವಾಜಪೇಯಿಯವರ “ನಂದ ಭೂಪತಿ”, ಚಿದಾನಂದ ಗೌಡ ಅವರ “ಸರ್ಕಾರಿ ಲೆಕ್ಕದಲಿ ಸತ್ತಾಕಿ” ಮತ್ತು ಸುಧಾ ಚಿದಾನಂದ ಗೌಡರ “ಪರಿಷ್ಕೃತೆ” ಪುಸ್ತಕಗಳು ಬಿಡುಗಡೆಯಾದವು.

ಲಕ್ಷ್ಮಿ ಚಂದ್ರಶೇಖರ್, ಜಯಲಕ್ಷ್ಮಿ ಪಾಟೀಲ್, ಜ ನಾ ತೇಜಶ್ರೀ, ದಿಲಾವರ್ ರಾಮದುರ್ಗ,  ಮಹಮದ್ ಪಾಷ ಗೂಳ್ಯಂ,  ಹುಲುಗಪ್ಪ ಕಟ್ಟೀಮನಿ ಸಮಾರಂಭದಲ್ಲಿ ಮಾತನಾಡಿದರು.

ಶ್ರೀಪತಿ ಮಂಜನಬೈಲು ಹಾಗೂ ರಮೇಶ್ ಗುರುರಾಜ ರಾವ್ ರಂಗ ಗೀತೆಗಳ ಲೋಕಕ್ಕೆ ಕೊಂಡೊಯ್ದರು

ಆ ಅತ್ಮೀಯ ಸಮಾರಂಭದ ಕೆಲವು ದೃಶ್ಯಗಳು ನಿಮಗಾಗಿ

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi-sandhyarani

21 January, 2013

9 Comments

  1. prakash hegde

    ಸೊಗಸಾದ ಕಾರ್ಯಕ್ರಮ…….
    ಅವಧಿಗೆ ಪ್ರೀತಿಯ ನಮನಗಳು…..

  2. Gopaal Wajapeyi

    ‘ಅವಧಿ’ಯ ಅಭಿಮಾನ ದೊಡ್ಡದು… ನಿನ್ನೆಯ ನಮ್ಮ ಸಮಾರಂಭದ ಚಿತ್ರಗಳನ್ನು ಬೆಳಗಾಗುವುದರೊಳಗೆ ಜಗತ್ತಿಗೆಲ್ಲ ತಲಪಿಸಿಬಿಟ್ಟಿರಿ…! ಧನ್ಯವಾದಗಳು ನಿಮಗೂ ನಮ್ಮ ‘ಇಟ್ಟಿಗೆ ಸಿಮೆಂಟಿ’ನ ಗೆಳೆಯ ಪ್ರಕಾಶ್ ಹೆಗಡೆ ಅವರಿಗೂ…

  3. Anand

    Thanks for sharing pixs.
    -Anandateertha Pyati

  4. ಗುರುಪ್ರಸಾದ ಕುರ್ತಕೋಟಿ

    ಸಮಾರಂಭ ಅದ್ಭುತವಾಗಿತ್ತು. ಸಮಯ ಹೋಗಿದ್ದೇ ಗೊತ್ತಾಗಿಲ್ಲ!

    • Ganadhalu Srikanta

      ಆಪ್ತವೆನಿಸುವ ಚಿತ್ರಗಳು. ಕೆಲವು ಅಪರಿಚಿತ ಮುಖಗಳು. ಇನ್ನು ಕೆಲವು ‘ಮುಖ’ ಮತ್ತು ‘ಹೆಸರಿಗೆ’ ಹೊಂದಿಕೆಯಾಗದವು. ಚಿತ್ರಗಳಿಗೆ ಶೀರ್ಷಿಕೆ ಇದ್ದಿದ್ದರೆ ಬಲು ಸೊಗಸಾಗಿರುತ್ತಿತ್ತು..
      ಚಿತ್ರ ಹಂಚಿಕೊಂಡವರಿಗೆ, ಪುಸ್ತಕದ ಲೇಖಕರಿಗೆ ಅಭಿನಂದನೆಗಳು.
      Ganadhalu Srikanta

  5. umesh desai

    ನಿನ್ನೆ ನನ್ನ ಗುರುಗಳ ಪುಸ್ತಕದ ಬಿಡುಗಡೆ ..
    ನಮ್ಮ ಕಡೆಜನರ ಕಾರ್ಯಕ್ರಮ..ನಮ್ಮ ಮಂದಿ ಹಂಗರೀ ಪಾ
    ಸ್ವಲ್ಪ ಖಾರ ಒಂದೀಸು ಸಿಹಿ..ನಾಲಿಗಿಗೆ ಚವ್ ಹಿಡಸ್ತಾರು..
    ಸ್ವಲ್ಪ ಗುಡುಗು ಸ್ವಲ್ಪ ಮಿಂಚು ಅಂತಃಕರಣದ ಮಳಿ..ಭಾಷಣಗಳ ಹೊಳಿ ಎಲ್ಲಾ ಮಿಳಿತಇದ್ವು..
    ನಾಟಕದ ಮಂದಿ ಅಭಿನಯ ರಕ್ತದಾಗ ಇರತದ..ಅಲ್ಲೆ ಇಲ್ಲೆ ಒಂದು ಶಬ್ದಕೇಳಿ ಸ್ವಲ್ಪ ಕಿರಿಕಿರಿ ಆತು..
    ಇರಲಿ. ಗೋವಾ ಅವರೂ ಟೆನಶನ್ ನಾಗ ಇದ್ರು ಈಗ ನಿರಾಳಆಗಿರತಾರ.. ಉತ್ತಮ ಪ್ರೋಗ್ರಾಮು ಸರ್..!!

  6. ಸುಧಾ ಚಿದಾನಂದಗೌಡ

    thanq Avadhi

  7. ರಾಜೇಶ್ ಗೊಟೂರ್

    ಗೋಪಾಲ್ ಸರ್,
    ನೀವು ಕಾರ್ಯಕ್ರಮಕ್ಕ ನನ್ನ ಕರೆದಿದ್ರಿ. ಆದ್ರ ಕರ್ತ್ಯವದ ಕರೆಯಿಂದ ತಾಯಿನಾಡು ಬಿಟ್ಟು ಥೈಲ್ಯಾಂಡ್ (ನೀವ ಹೇಳಿಧಂಗ) ಬಂದಿದೀನಿ. ಆದ್ರ ಫೋಟೋ ಎಲ್ಲ ಅವಧಿ ನಲ್ಲೆ ನೋಡಿದೆ. ಕಾರ್ಯಕ್ರಮಕ್ಕೆ ಬಂದಸ್ತೆ ಮಜಾ ಸಿಕ್ತು.Thanks Avadhi. ಏನ ಆದರು ತಪ್ಪಿಸಿದ್ದಕ್ಕೆ ಕ್ಷಮೆಯಿರಲಿ.

  8. Pramod Ambekar

    Function photo nodi ananda wayeetu Dhnyavadaglu
    Pramod Ambekar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading