ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುನಂದಾ ಅವರ ರೆಕ್ಕೆ

ಸುನಂದಾ ಪ್ರಕಾಶ್ ಕಡಮೆ ಕಾದಂಬರಿ ಬರೆದಿದ್ದಾರೆ. ಹುಬ್ಬಳ್ಳಿಯಲ್ಲಿದ್ದುಕೊಂಡೇ ಇಡೀ ಜಗತ್ತನ್ನು, ಮಾನವ ಜಗತ್ತಿನ ವ್ಯಾಪಾರವನ್ನು ಸೂಕ್ಷ್ಮ ಕಣ್ಣಿನಿಂದ ನೋಡುವ ಸುನಂದಾ ‘ಪುಟ್ಟ ಪಾದದ ಗುರುತಿ’ನ ಮೂಲಕ ಈಗಾಗಲೇ ಓದುಗರ ಮನದಲ್ಲಿ ಗುರುತು ಮೂಡಿಸಿದ್ದಾರೆ. ಪುಟ್ಟ ಪಾದದ ಗುರುತನ್ನು ಹೊರತಂದ ‘ಛಂದ’ವೇ ಈಗ ಕಾದಂಬರಿಯನ್ನೂ ಹೊರತರುತ್ತಿದೆ. ‘ಎರಡೇ ಎರಡು ರೆಕ್ಕೆ’ ಕಾದಂಬರಿ ಓದುವ ಆಸೆಯಿದ್ದರೆ ಮುಂದಿನ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಗೆ ಬನ್ನಿ. ಸುನಂದಾ ಅವರ ಜೊತೆ ಮಾತುಕಥೆಯಾಡಬಹುದು. ಪುಸ್ತಕ ಕೊಳ್ಳಬಹುದು. ವಸುಧೇಂದ್ರರ ಕ್ಲೋಸ್ ಅಪ್ ಸ್ಮೈಲ್ ನೋಡಬಹುದು. ಅಂದ ಹಾಗೆ ಈ ಪುಸ್ತಕಕ್ಕೆ ಛಂದ ಮುಖಪುಟ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ವಿನಯ ಕುಮಾರ್ ಸಾಯ ಕುಸುರಿಗೆಲಸ ನಡೆಸಿದ್ದಾರೆ. ]]>

‍ಲೇಖಕರು G

18 January, 2011

3 Comments

  1. Poornima Bhat

    ಕಂಗ್ರಾಚುಲೇಷನ್ಸ್ ಸುನಂದಕ್ಕ, ಎಲ್ಲಾ ಚೊಲೋದಾಗ್ಲಿ..
    ಪ್ರೀತಿಯಿಂದ,
    ಪೂರ್ಣಿಮಾ.

  2. ಅಪಾರ

    ವಿನಯ್‌ ಮುಖಪುಟ ತುಂಬಾ ಚೆನ್ನಾಗಿದೆ. ಸುನಂದಾ ಪುಸ್ತಕಕ್ಕೆ ಶುಭಾಶಯಗಳು
    ~ಅಪಾರ

  3. ಗವಿಸಿದ್ಧ ಹೊಸಮನಿ

    ಮುಖಪುಟ ಲೈಕ್ ಆಯ್ತು. “ಬರೀ ಎರಡು ರೆಕ್ಕೆ” ಅಂದ್ರ ಏನಿರಬಹುದು..!?
    ಅಂತ ಕಾದಂಬರಿ ಬಗ್ಗೆ ಕುತೂಹಲವಿದೆ ನನಗೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading