ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿನೆಮಾ ಲೈಬ್ರರಿ ಮಾಡಿದ್ರೆ ಹೇಗೆ?

ಸ್ನೇಹಿತರೆ, ನನ್ನದೊಂದು ಆಲೋಚನೆ ನಿಮ್ಮ ಮುಂದಿಡುತ್ತಿದ್ದೇನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಜಾಗತಿಕ ಸಿನಿಮಾಗಳ ಉಚಿತ ಲೈಬ್ರರಿ ಮಾಡಿದರೆ ಹೇಗೆ? ಈ ಗುಂಪಿನಲ್ಲಿರುವ ಬಹುತೇಕರ ಬಳಿ ಜಗತ್ತಿನ ಅತ್ತುತ್ತಮ ಸಿನಿಮಾಗಳ ಸಂಗ್ರಹ ಇದೆಯೆಮ್ದು ನಂಬಿದ್ದೇನೆ. ಆದರೆ ಕೆಲವೊಂದು ಸಿನಿಮಾಗಳು ಕೆಲವರಿಗೆ ಲಭ್ಯವಿರುವುದಿಲ್ಲ. ಕೆಲವು ಆನ್ಲೈನ್ ನಲ್ಲಿ ಸಿಕ್ಕರೆ ಕೆಲವೊಂದನ್ನು ಅಂಗಡಿಗಳಲ್ಲಿ ಹುಡುಕಬೇಕಾಗುತ್ತದೆ. ಅದರ ಬದಲಿಗೆ ಒಂದು ಲಬ್ರರಿ ಮಾಡಿ ಅಲ್ಲಿ ಸಿನಿಮಾಗಳ ಸಂಗ್ರಹ ಮಾಡಿ ಆಸಕ್ತರು ಉಚಿತವಾಗಿ ಕಾಪಿ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಿದರೆ ಹೇಗೆ? ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. -ಮನ್ಸೋರೆ ]]>

‍ಲೇಖಕರು G

18 August, 2012

6 Comments

  1. prajna

    great idea, please do that
    -prajna

  2. D.RAVI VARMA

    ಇದು ತುಂಬಾ ಒಳ್ಳೆ ಆಲೋಚನೆ ,ಹಾಗೆ ಮಾಡಿದಲ್ಲಿ ನಾವೋ ನೋಡದಿರುವ ಹಾಗು ನೋಡಲೇಬೇಕಾದ ಸಿನಿಮಾ ಗಳ ಬಗ್ಗೆ ಒಂದಿಸ್ತು ಮಾಹಿತಿ, ಸಿಕ್ಕ ಹಾಗಾಗುತ್ತದೆ, ನಾನು ನಿಮ್ಮ ಜೊತೆ ಇರುವೆ, ನನ್ನ ಬಳಿ ಯಿರುವ ಸಿನೆಮಾಗಳ ಸಿ ದಿ ಗಳ ಕಾಪಿ ಮಾಡಿ ಕಳಿಸುವೆ .
    ರವಿ ವರ್ಮ ಹೊಸಪೇಟೆ

  3. neelanjala

    ಆಸಕ್ತರು ಉಚಿತವಾಗಿ ಕಾಪಿ ಮಾಡಿಕೊಂಡು ಹೋಗುವ ವ್ಯವಸ್ಥೆ !! wht abt copyright?

  4. amara

    ಇದು ಒಳ್ಳೆಯ ಕೆಲಸ, ನನ್ನ ಬಳಿ ಇರುವ ಸಿನೆಮಾಗಳನ್ನ ಖಂಡಿತ ಹಂಚಿಕೊಳ್ಳುವೆ.
    ಅಮರ
    mail2amar@gmail.com

  5. keshav

    What about copyright? We need a good bilingual blog to promote good movies tough high we can give links.

  6. ಮಂಸೋರೆ

    🙂 ಇದು ನಾನು ಫೇಸ್ ಬುಕ್ಕಲ್ಲಿರೋ ವರ್ಲ್ಡ್ ಸಿನಿಮಾ ಪೇಜಲ್ಲಿ ಪೋಸ್ಟ್ ಮಾಡಿದ್ದದ್ದು. ಇಲ್ಲಿಯೂ ಬಂದಿದೆ. ಖುಶಿಯಾಯ್ತು. ನನ್ನ ಯೋಚನೆ ಇದನ್ನು ಅಧಿಕೃತವಾಗಿ ಮಾಡುವುದಲ್ಲ. ಇದು ಖಾಸಗಿಯಾಗಿ ಮಾಡುವುದು. ಯಾರದರು ಒಬ್ಬರ ಬಳಿ ಎಲ್ಲರ ಬಳಿ ಇರುವ ಸಂಗ್ರಹವನ್ನು ಸೇರಿಸಿ ಅಲ್ಲಿ ಸಿಗುವ ಮಾಹಿತಿ ಮತ್ತು ಸಿನಿಮಾಗಳ ವಿವರಗಳನ್ನು ಖಾಸಗಿಯಾಗಿಯಾಗಿ ಶೇರ್ ಮಾಡಿಕೊಳ್ಳುವುದು. ಬೇಕಿದ್ದವರು ಅದನ್ನು ಅಲ್ಲಿಂದ ಕಾಪಿ ಮಾಡಿಕೊಳ್ಳುವುದು. ಈಗಾಗಲೇ ವರ್ಲ್ಡ್ ಸಿನಿಮಾ ಗುಂಪಿನಲ್ಲಿರುವ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಕಾಪಿರೈಟ್ಸ್ ಇಶ್ಯೂ ವಿಷಯಕ್ಕೆ ಬಂದಲ್ಲಿ ನಮಗೆ ಲಭ್ಯವಿರುವಂತ ಇಲ್ಲಿನ ಸಿನಿಮಾಗಳ ಒರಿಜನಲ್ ಕಾಪಿಗಳನ್ನ್ನೇ ಸಂಗ್ರಹಿಸುವುದು. ನಮಗೆ ಲಭ್ಯವಿರದ ಜಗತ್ತಿನ ಬೇರೆ ಬೇರೆ ಭಾಷೆಯ ಸಿನಿಮಾಗಳಿಗಾಗಿ ಆನ್ಲೈನ್ ಡೌನ್ಲೋಡ್ ಮಾಡಿರುವ ಫೈಲ್ ಗಳನ್ನು ಸಂಗ್ರಹಿಸುವುದು. ಇದು ವಾಣಿಜ್ಯ ಉದ್ದೇಶಕ್ಕಾಗಿ ಮಾಡುತ್ತಿರುವುದಲ್ಲ. ಇದು ಜಗತ್ತಿನ ಸಿನಿಮಾಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಷ್ಟೆ ಉದ್ದೇಶ.
    ಮಂಸೋರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading