ಮಾರ್ಚ್ 26 ರಂದು ಸಿನಿಮಾ ಸಮಯದಲ್ಲಿ ದಿ ಅದರ್ ಸನ್ ಚಿತ್ರ ಪ್ರದರ್ಶನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ಕರ್ನಾಟಕ ಚಲನಚಿತ್ರ ಅಕಾಡೆಮಿ,
ಮೈಸೂರು ಫಿಲ್ಮ್ ಸೊಸೈಟಿ,
ಅಲಿಯನ್ಸ್ ಫ್ರೆಂಚೈಸ್
ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಮಾರ್ಚ್ 26 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಲೊರೆನ್ ಲೆವಿ ನಿರ್ದೇಶನದ ದಿ ಅದರ್ ಸನ್ ಚಲನಚಿತ್ರ ಪ್ರದರ್ಶಿಸಲಾಗುವುದು.
ಯುದ್ದದ ದಾಳಿಯ ವೇಳೆ ಆಸ್ಪತ್ರೆಯಲ್ಲಿ ಅದಲು-ಬದಲಾಗುವ ಮಕ್ಕಳು ವಿಭಿನ್ನ ಪರಿಸರದ ಕುಟುಂಬಗಳಲ್ಲಿ ಬೆಳೆಯುತ್ತವೆ. ಜ್ಯೂಯಿಷ್ ಕುಟುಂಬ ಹಾಗೂ ಪ್ಯಾಲೆಸ್ತೀನಿನ ಮುಸ್ಲಿಂ ಕುಟುಂಬದ ಮಕ್ಕಳು ಅದಲು ಬದಲಾಗಿರುತ್ತವೆ ಸತ್ಯ ತಿಳಿದುಬಂದಾಗ ಎರಡೂ ಕುಟುಂಬಗಳು ಅದನ್ನು ಸ್ವೀಕರಿಸುವ ಬಗ್ಗೆ ಹಾಗೂ ತಾಕಲಾಟಗಳನ್ನು ಚಿತ್ರ ನಿರೂಪಿಸಿತ್ತದೆ.
ಇದಕ್ಕೂ ಮುನ್ನ ಸಂಜೆ 5-30 ಗಂಟೆಗೆ ಖ್ಯಾತ ನಟಿ ಬಿ. ಸರೋಜದೇವಿ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಕೋರಿದ್ದಾರೆ.






0 Comments