ಸಿಜಿಕೆ ಉತ್ಸವದಲ್ಲಿ ಇಂದು ‘ಅವ್ವೈ’

ಭಾನುವಾರ, ಏಪ್ರಿಲ್ ೨೯ ರಂದು ನಾಟಕ…

ಅವ್ವೈ
ನಿರ್ದೇಶಕರು : ಎ ಮಂಗೈ
ತಂಡ : ಮರಪ್ಪಾಚಿ,

’ಅವ್ವೈ’ ನಾಟಕ

ಕವಯತ್ರಿಯ ಮೇಲೆ ಸಮಾಜ ಹೊದಿಸಿದ ಇಳಿವಯಸ್ಸು ಎನ್ನುವ ಪೊಳ್ಳು ಚಾದರವನ್ನು ಈ ನಾಟಕ ಪ್ರಶ್ನಿಸುತ್ತದೆ. ಸಮಾಜದ ನಿರ್ಬಂಧವನ್ನು ಇದು ಗಟ್ಟಿ ಮತ್ತು ಸ್ಪಷ್ಟ ದನಿಯಲ್ಲಿ ನಿರಾಕರಿಸುತ್ತದೆ. ಇಳಿವಯಸ್ಸು ನಿಸರ್ಗ ಸಹಜ, ಅದಕ್ಕೆ ಅದರದೇ ಆದ ಸೌಂದರ್ಯವಿದೆ. ಆದರೆ ಗಂಡು ಸಮಾಜ ಅದನ್ನೊಂದು ಕೊರತೆಯಾಗಿ, ಋಣಾತ್ಮಕ ಅಂಶವಾಗಿ ನೋಡುತ್ತದೆ. ನಾಟಕ ಆ ಪೊರೆಯನ್ನು ಕಳಚಿ ಕಣ್ಣಿಗೆ ಹಿಡಿಯುತ್ತದೆ.

ಸಂಗಂ ಕಾಲದಲ್ಲಿನ ಬದುಕಿನ ದೃಷ್ಟಿಕೋನವನ್ನು ಸಹ ನಾಟಕ ತೆರೆದಿಡುತ್ತದೆ. ಸರ್ವದೇವತಾರಾಧನೆಯನ್ನು ಪ್ರತಿಪಾದಿಸಿದ್ದ, ಬದುಕಿನ ವಾಸ್ತವಗಳಿಗೆ ಹತ್ತಿರವಾಗಿದ್ದ ಸಂಗಂ ಸಾಹಿತ್ಯವನ್ನು ಇಂದಿಗೂ ಸರಿಯಾಗಿ ವಿಶ್ಲೇಷಿಸಲಾಗಿಲ್ಲ. ಅದು ವಾಸ್ತವದ ನೆಲೆಯಲ್ಲಿ ತಮಿಳು ಮನಸ್ಸಿನ ವಿಶ್ಲೇಷಣೆಗೆ ಅಪಾರವಾಗಿ ನೆರವಾಗುತ್ತದೆ. ಸತ್ಯ ಮತ್ತು ಮಿಥ್ಯದ ನಡುವಿನ ವ್ಯತ್ಯಾಸವನ್ನು ಅದು ತಿಳಿಸುತ್ತದೆ. ’ಅವ್ವೈ’ ಅಂತಹ ಒಂದು ಪ್ರಯತ್ನ.

ನಿರ್ದೇಶಕರ ಬಗ್ಗೆ : 

’ಮಂಗೈ’ – ಡಾ ವಿ ಪದ್ಮಾ ಅವರ ಕಾವ್ಯನಾಮ. ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಅವರು ಇಂಗ್ಲಿಷ್ ಕಲಿಸುತ್ತಿದ್ದವರು. ತಮಿಳು ರಂಗಭೂಮಿಯಲ್ಲಿ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ನಾಟಕಕಾರ್ತಿಯಾಗಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಡಾ ಪದ್ಮಾ, ಇಲ್ಲಿ ತಮ್ಮ ಶೈಕ್ಷಣಿಕ, ಕಲಾತ್ಮಕ ಮತ್ತು ಆಕ್ಟಿವಿಸ್ಟ್ ವ್ಯಕ್ತಿತ್ವಗಳು ಸಂಧಿಸುತ್ತವೆ ಎನ್ನುವ ವಿಶ್ವಾಸ ಇಟ್ಟುಕೊಂಡಿದ್ದಾರೆ.

ಅವರ ಆಸಕ್ತಿಯ ಕ್ಷೇತ್ರಗಳು, ರಂಗಭೂಮಿ ಮತ್ತು ಜೆಂಡರ್ ಅಂಡ್ ಟ್ರಾನ್ಸ್ ಲೇಶನ್ ಸ್ಟಡಿಸ್. ಎರಡು ಸಲ ಅವರು ಫುಲ್ ಬ್ರೈಟ್ ಫೆಲೋಶಿಪ್ ಗೆ ಭಾಜನರಾಗಿದ್ದಾರೆ. ಈ ಎರಡೂ ಸಲ ಅವರಿಗೆ ರಂಗಭೂಮಿ ಮತ್ತು ಲಿಂಗ ದ ಕುರಿತ ಅಧ್ಯಯನಕ್ಕಾಗಿ ಈ ಫೆಲೋಶಿಪ್ ಸಿಕ್ಕಿದೆ. ಈ ಬಗ್ಗೆ ವಿದೇಶದ ವಿಶ್ವವಿದ್ಯಾಲಯಗಳಲ್ಲೂ ಕಲಿಸಿರುವ ಇವರಿಗೆ ಇನ್ನೂ ಅನೇಕ ಪುರಸ್ಕಾರಗಳು ಲಭಿಸಿವೆ.

ಇದುವರೆವಿಗೂ ಇವರು ಸುಮಾರು ಹದಿನೈದು ನಾಟಕಗಳನ್ನು ನಿರ್ದೇಶಿಸಿದ್ದು, ಅವೆಲ್ಲವೂ ಮಹಿಳಾ ಕೇಂದ್ರಿತ ವಸ್ತು ಮತ್ತು ಪಾತ್ರಗಳನ್ನು ಹೊಂದಿವೆ. ಅವರ ’ಕಾಲ ಕನವು’ – (ಕಾಲದ ಕನಸು) ತಮಿಳುನಾಡಿನ ಫೆಮಿನಿಸ್ಟ್ ಇತಿಹಾಸದ ಕುರಿತ ಡಾಕ್ಯೂ-ಡ್ರಾಮ. ಫೆಮಿನಿಸ್ಟ್ ಇತಿಹಾಸಕಾರ್ತಿ ವಿ ಗೀತ ಅದನ್ನು ಬರೆದಿದ್ದಾರೆ.

ತಮಿಳು ಸಾಹಿತ್ಯವನ್ನು ಸಮಕಾಲೀನ ಲಿಂಗ, ಸಂಸ್ಕೃತಿ ಮತ್ತು ಪರಿಸರ ವಿಜ್ಞಾನದ ದೃಷ್ಟಿಕೋನದಿಂದ ನೋಡುವುದರಲ್ಲಿ ಪದ್ಮಾ ಅವರಿಗೆ ಹೆಚ್ಚಿನ ಆಸಕ್ತಿ. ಅವ್ವೈ, ಮಣಿಮೇಖಲೈ, ಕುರಿಂಜಿ ಪಟ್ಟು ಅವರ ತಮಿಳು ನಾಟಕಗಳಲ್ಲಿ ಕೆಲವು. ಅವರ ಎರಡು ನಾಟಕಗಳು ಇಂಗ್ಲಿಷಿನಲ್ಲೂ ಲಭ್ಯವಿವೆ, Frozen Fire ಮತ್ತು New Born. ಸಾಮುದಾಯಿಕ ರಂಗಭೂಮಿಯಲ್ಲಿ ಅವರಿಗೆ ಅಪರಿಮಿತ ಆಸಕ್ತಿ.

ಕಳೆದ ಕೆಲವು ವರ್ಷಗಳಿಂದ ಟ್ರ್ಯಾನ್ಸ್ ಜೆಂಡರ್ ಸಮುದಾಯದೊಡನೆ ಕೆಲಸ ಮಾಡುತ್ತಿರುವ ಪದ್ಮ ಅವರಿಗಾಗಿ ಎರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದಾರೆ. ಶ್ರೀಲಂಕೆಯ ಬಟ್ಟಿಕಲೋವಾದಲ್ಲಿರುವ ’ಸುರಿಯಾ’ ಎನ್ನುವ ಮಹಿಳಾ ಸಂಘಟನೆಯ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಅವರ ಕೃತಿಗಳು ಹಲವಾರು ಭಾಷೆಗೆ ಅನುವಾದಗೊಂಡಿದ್ದು, ಪದವಿಪೂರ್ವ ತರಗತಿಗಳಿಗೆ ಅವರ ನಾಟಕ ಪಠ್ಯವಾಗಿದೆ.

‍ಲೇಖಕರು avadhi

April 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: