ನೂರರ ಹರೆಯದ ಖಾಸಿಂಬಿ
ರವಿಕುಮಾರ್ ಈಚಲಮರ
ಇಂದು ಸಮ್ಮೇಳನದ ಕೊನೆಯ ದಿನವಾದ್ದರಿಂದ ಅಡುಗೆ ಮನೆಯನ್ನು ನೋಡುವ ಕುತೂಹಲ ನಮ್ಮಲ್ಲಿ ಹುಟ್ಟಿತು. ನಮ್ಮ ತಂಡದವರು ಹಾಗೆ ಕ್ಯಾಮೆರಾ ಕೈಲಿ ಹಿಡಿದು ಒಳಗೆ ನಡೆದೊ. ಅಲ್ಲೆ ಪಕ್ಕದಲ್ಲಿ ಪಾತ್ರೆಗಳ ನಡುವೆ ಹಣ್ಣು ಹಣ್ಣು ಮುದುಕಿ ಕುಳಿತಿದ್ದರು, ಈ ಜಾಗದಲ್ಲಿ ಇಂತಹ ಅಜ್ಜಿಗೇನು ಕೆಲಸ ಎಂದು ಕುತೂಹಲದಿಂದ ಹತ್ತಿರ ಹೋಗಿ ಮಾತನಾಡಿಸಿದರೆ ಕ್ಯಾಮೆರಾ ಮತ್ತು ನನ್ನನ್ನು ನೋಡಿದೊಡನೆ ಅಜ್ಜಿ ನಾಚಿತು, ನಂಗು ನಿನ್ನಂತ ಮೊಮ್ಮಕ್ಕಳು ಅವ್ರೆ ಕಣಪ್ಪ ಅಂತ ಮಾತು ಶುರು ಮಾಡಿದ ಅಜ್ಜಿ ಮಾತು ಮುಗಿಸುವಷ್ಟರಲ್ಲಿ ನೀನು ನನ್ನ ಮೊಮ್ಮಗ ಅಂತ ಹೇಳಿ ಆರೈಸಿತು, ಹೆಸರೇನು ಅಂತ ಕೇಳಿದ್ದಕ್ಕೆ ಮೆಲು ದನಿಯಲ್ಲಿ ಖಾಸಂಬಿ ಅಂತ ಹೇಳಿದ್ರು ವಯಸ್ಸು ಕೇಳಿದ್ದಕ್ಕೆ ಅಜ್ಜಿ ನೋರಕ್ಕು ಮೇಲ್ಪಟ್ಟು ಅಂತ ಹೇಳಿದ್ರು.

ನನಗೆ ನಿಜವಾಗಲು ಶಾಕ್ ಆಯ್ತು. ಅಜ್ಜಿಯನ್ನು ನೋಡಿದರೆ ನೂರು ವರ್ಷ ಇರಬಹುದು ಎನಿಸುತ್ತದೆ, ಈ ವಯಸ್ಸಿನಲ್ಲಿಯು ಅಜ್ಜಿಯ ಹುಮ್ಮಸ್ಸು ನೋಡಿದರೆ ನಮ್ಮಂತಹವರು ಈ ಅಜ್ಜಿಯ ಮುಂದೆ ಏನೇನು ಇಲ್ಲವೆನಿಸುತ್ತದೆ. ದೂರದ ಗಂಗಾವತಿಯಿಂದ ಬಿಜಾಪುರದ ಸಮ್ಮೇಳನಕ್ಕೆ ಈ ಅಜ್ಜಿ ಕೆಲಸಕ್ಕೆ ಬಂದಿದ್ದಾರೆ, ಇವರ ಜೊತೆ ಊರಿನ 36 ಜನ ಬಂದಿದ್ದಾರೆ, ಅದರಲ್ಲಿ ಈ ಅಜ್ಜಿಯೆ ತುಂಬಾ ಹಿರಿಯರು. ಗುರುವಾರದಂದು ಊರಿನ ಮೇಸ್ರ್ತಿಯ ಜೊತೆ ಇವರು ಕೆಲಸಕ್ಕೆ ಬಂದಿದ್ದಾರೆ, ಇಲ್ಲಿ ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಇನ್ನಿತರ ಕೆಲಸಗಳನ್ನು ಮಾಡುತ್ತಾರೆ, ಇವರಿಗೆ ದಿನಕ್ಕೆ 200ರೂಪಾಯಿಗಳನ್ನು ಕೂಲಿಯಾಗಿ ನೀಡುತ್ತಾರೆ, ಇಷ್ಟು ಮಾಹಿತಿಯನ್ನು ಅಜ್ಜಿ ಪಟ ಪಟನೆ ನನ್ನ ಮುಂದಿಟ್ಟಿತು, ದಿನಕ್ಕೆ ಸುಮಾರು ಎರಡು ಲಕ್ಷ ಜನರಿಗೆ ಊಟ ತಯಾರಿಸುವ ಈ ನೂರು ವರ್ಷದ ಜೀವ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ.

ಅಜ್ಜಿ ಇದು ಏನು ಕಾರ್ಯಕ್ರಮ ಅಂತ ಕೇಳಿದ್ದಕ್ಕೆ ನಂಗೆ ಗೊತ್ತಿಲ್ಲ ಅಂದ್ರು ಆಮೇಲೆ ಪ್ರೋಗ್ರಾಮ್ ಅಂತು, ಮತ್ತ ನಾನು ಪ್ರಶ್ನೆ ಮಾಡಿ ಏನು ಪ್ರೋಗ್ರಾಮ್ ಅಂತ ಕೇಳಿದೆ, ಗೌರ್ಮೆಂಟ್ ಫಂಕ್ಷನ್, ವೋಟ್ ಹಾಕ್ತಾರಲ್ಲ ಆ ಫಂಕ್ಷನ್ ಅಂದ್ರು ಆಮೇಲೆ ತಮ್ಮ ಮಕ್ಕಳು, ಮೊಮ್ಮಕ್ಕಳು ಹೀಗೆ ತನ್ನ ಕುಟುಂಬದ ವಿವರವನ್ನೆಲ್ಲಾ ನೀಡಿದರು. ಅಜ್ಜಿ ನಿನ್ನ ಹೆಸರಿನ ಅರ್ಥವೇನು ಅಂತ ಕೇಳಿದ್ದಕ್ಕೆ ‘ಖಾಸಿಂ ಸಾಬ್’ ನಮ್ಮ ದೇವರು ಅದಕ್ಕೆ ನಂಗೆ ಖಾಸಿಂಬಿ ಅಂತ ಹೆಸರಿಟ್ಟಿದ್ದಾರೆ ಎಂದರು. ಎಲ್ಲಾ ಮುಗಿದ ಮೇಲೆ ಯಾರೋ ತಟ್ಟೆಯಲ್ಲಿ ಅಜ್ಜಿಗೆ ನೀರು ತಂಧು ಕೊಟ್ಟರು ಅಜ್ಜಿ ನನ್ನ ಮುಂದೆ ಕುಡಿಯಲು ನಾಚಿಕೆಯಿಂದ ಬೇಡ ಆಮೇಲೆ ಕುಡೀತಿನಿ ಅಂದ್ರು ನಾನು ಬಲವಂತ ಮಾಡಿ ಪರವಾಗಿಲ್ಲ ಕುಡಿಯಿರಿ ಎಂದು ಬಲವಂತ ಮಾಡಿದ್ದಕ್ಕೆ ಕುಡಿದು ಮತ್ತೆ ನನ್ನ ಕಡೆ ತಿರುಗಿ ಅದೇ ಹುಮ್ಮಸ್ಸಿನ ನಗೆ ಬೀರಿದರು, ನಾನು ಹೊರಟಾಗ ಏನು ಓದಿದ್ದೀಯ ಅಂತಾ ಕೇಳಿದ್ರು ನಾನು ಹದಿನೈದು ಅಂತ ಹೇಳಿದ್ದಕ್ಕೆ, ಹಾಗಾದ್ರೆ ನೀನು ತುಂಬಾ ದೊಡ್ಡ ಕೆಲಸಾನ ತಗೊ ಚೆನ್ನಾಗಿರು, ಅಮ್ಮ ಅಪ್ಪ ಅಕ್ಕ ತಂಗಿ ಹೀಗೆ ನನ್ನ ವಿವರವನ್ನು ಕೇಳಿದರು, ನಾನು ನನ್ನ ವಿವರವನ್ನು ತಿಳಿಸಿ ಅಜ್ಜಿಗೆ ಧನ್ಯವಾದ ತಿಳಿಸಿದೆ ಅಜ್ಜಿ ನನ್ನ ಗಲ್ಲ ಹಿಡಿದು ಒಳ್ಳೆಯದಾಗಲಿ ನೀನು ನನ್ನ ಮೊಮ್ಮಗ ಇದ್ದಂಗಿದೀಯ ಎಂದು ಹೇಳಿ ನಗೆ ಚೆಲ್ಲಿತು, ಆ ನಗೆ ಸಣ್ಣ ಮಗುವನ್ನು ನಾಚಿಸುವಂತಿತ್ತು ಒಟ್ಟಾರೆ ಅಜ್ಜಿ ನನ್ನ ನೆನಪಿನಲ್ಲಿ ಉಳಿಯುವಂತ ಬಾವನಾತ್ಮಕ ಪರಿಚಯ ಆಯಿತು
ಸಾಹಿತ್ಯ ಸಮ್ಮೇಳನ ಇಂದು ಯಶಸ್ವಿಯಾಗಿದೆ ಎಂದು ಯಾರಾದರು ಹೇಳಿದರೆ ಅದರಲ್ಲಿ ಈ ನೂರು ವರ್ಷದ ಖಾಸಿಂಬಿ ಮತ್ತು ಇಂತಹ ಹಲವಾರು ಶ್ರಮ ಜೀವಿಗಳ ಪಾಲು ಇದೆ.







Super pics and writeup. Though it’s sad to see an old person toiling hard, felt good to see her cheerful smile.
ಅಜ್ಜಿಯ ಕಥೆಯನ್ನು ಚೆನ್ನಾಗಿ ನಿರೂಪಿಸಿದ್ದೀಯಾ ರವಿ. ಇನ್ನಷ್ಟು ಕಥೆಗಳು ಅಲ್ಲೇ ಓಡಾಡುತ್ತಿರುತ್ತವೆ. ಸಾಧ್ಯವಾದರೆ ಆ ಕಥೆಗಳಿಗೆ ಕವಿಕೊಟ್ಟು ನಮಗೆ ತಲುಪಿಸು.
ಆ ಹಿರಿಯ ಜೀವದ ಜೀವನ ಪ್ರೀತಿಗೆ ನನ್ನದೊಂದು ಸಲಾಂ. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸಿದ ಎಲ್ಲಾ ಶ್ರಮಜೀವಿಗಳ ಶ್ರಮ ನಿಜಕ್ಕೂ ಸಾರ್ಥಕವಾಗಿದೆ, ಸಮ್ಮೇಳನ ಯಶಸ್ವಿಯಾದದ್ದನ್ನು ಅವಧಿಯ ವರಿದಿಗಳಿಂದಲೇ ತಿಳಿಯಬಹುದಾಗಿದೆ. ಅವಧಿಯವರ ‘ವಿಜಾಪುರ ಸಾಹಿತ್ಯ ಸಮ್ಮೇಳನ’ ಎಂಬ ಲೇಖನ ಮಾಲೆ ಅರ್ಥಪೂರ್ಣವಾಗಿದೆ, ಅಭಿನಂದನೆಗಳು ಅವಧಿಗೆ. 🙂
– ಪ್ರಸಾದ್.ಡಿ.ವಿ.
ಖಾಸಂಬಿ ಅತಂಹ ಅಜ್ಜಿಯ ಪರಿಚಯ ಮಾಡಿಕೊಡಲು ರವಿ ನಿನ್ನಿಂದ ಸಾಧ್ಯ ಹೀಗೆ ನಿನ್ನ ಬರವಣಿಗೆಯನ್ನು ಮುಂದುವರೆಸು