ಸರೋಜಿನಿ ಪಡಸಲಗಿ ಹೊಸ ಕವಿತೆ- ಬೆ‌ಸೆವ ಕೊಂಡಿ…

ಸರೋಜಿನಿ ಪಡಸಲಗಿ

ಅಚ್ಚರಿ ದಿಗಿಲು ತಬ್ಬಿಬ್ಬುಗಳ
ಗುಂಪಿನಲಿ ಕೊನೆಯಿರದ ಚರ್ಚೆ
ಜಗದಲಿ ಜಾಗಕೆ ಕೊರತೆಯಂತೆ
ಕಾಲಿಟ್ಟು ತಳ ಊರಲು ತಿಳೀದಂತೆ

ತುಸು ಹಿಂಜರುಗಿ ಆಚೀಚೆ ತಿರುಗಿ
ಮೆಲ್ಲಗೆ ನುಸುಳಿ ತುಟಿಯರಳಿಸೆ
ಅನುಮಾನದ ನೋಟಗಳ ಓಡಾಟ
ಹೊರಳಬೇಕು ಇಲ್ಲ ಜಾಗ ಎಂದು

ತುಸು ಹೆಜ್ಜೆ ಮುಂದೆ ಸರಿಸಿಟ್ಟು
ಕೊಂಚ ಬಿಂಕು ತೋರಿ ಬೀಗುತಲೆ
ಸುತ್ತಿ ಮುತ್ತಿ ತುಟಿಯ ಕೊಂಕುಗಳು
ಮತ್ತೆ ಮರಳಬೇಕು ಇಲ್ಲ ಜಾಗ ಎಂದು

ಇದ್ದಲ್ಲೇ ಇದ್ದಂತೆ ನಾನು ನಾನೆ ಆಗಿ
ಹೊರಳಿ ನರಳಿ ನಿರಾಳ ಆದ ಗಳಿಗೆ
ಅಲ್ಲೊಂದು ಚುಚ್ಚಿ ಇಲ್ಲೊಂದು ಕಚ್ಚೆ
ಎದ್ದೇಳಬೇಕು ನಂದಲ್ಲದ ಜಾಗ ಎಂದು

ಏನೂ ತಿಳೀದೆ ಮಂಕಾಗಿ ಮಬ್ಬಾಗಿ
ಒಗಟುಗಳ ನೆರವಿಯಲಿ ಕಳೆದಾಗ
ಮೆಲ್ಲನುಸುರಿತು ಒಳದನಿ ತಿಳಿಯಾಗಿ
ಅನಂತ ಸತ್ಯದ ಗಟ್ಟಿ ಗುಟ್ಟನೊಂದ

ಮರುಳೆ ಕನಿಕರ ನಂಗೆ ಗೊತ್ತಾಗಿಲ್ವೆ
ನೀನೊಂದು ಬೆಸೆವ ಕೊಂಡಿ ಎಂದು
ಅಲ್ಲೊಮ್ಮೆ ಇಲ್ಲೊಮ್ಮೆ ಇಲ್ಲ ಪಕ್ಕಾ ಜಾಗ
ಬೇಡ ವ್ಯರ್ಥ ಹುಡುಕಾಟ ಅಲ್ಲಾಗ ಮೌನ
ಅಚ್ಚರಿ ದಿಗಿಲು ತಬ್ಬಿಬ್ಬುಗಳ ಚರ್ಚೆಗೆ ತೆರೆ

‍ಲೇಖಕರು Admin

April 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: