ಸರೋಜಿನಿ ಪಡಸಲಗಿ
ಅದೇನೋ ಹಂಬಲ ಬಯಕೆ
ವಿಲಕ್ಷಣ ತುಮುಲ ದುಗುಡ
ಹುಬ್ಬ ಮಧ್ಯೆ ಮಬ್ಬು ಗೀರು
ಕಣ್ಣಲಿ ಅರ್ಥವೆ ಇರದ ಸುಕ್ಕು
ಯಾಕೆ ತಿಳಿಯದು ಉಂಟಾ ಹೀಗೂ
ಏನೇನೋ ಹೇಳಲುಂಟು ಅಲ್ಲಿ
ಅದೆಷ್ಟೋ ಕೇಳಲೂ ಉಂಟು
ಅಸಂಖ್ಯ ಭಾವಗಳ ಸುಳಿಯುಂಟು
ಮೌನ ದೊಡಲಲಿ ಮಟಾ ಮಾಯ
ಯಾಕೆ ತಿಳಿಯದು ಉಂಟಾ ಹೀಗೂ
ಮಾಯವಾದವುಗಳು ಅಂಕೆ ತಪ್ಪಿ
ಗಾಳಿಯಲಿ ತೇಲಿ ದೂರ ಹೋಗಿ
ಒಂದಕೂ ನಿಶ್ಚಿತ ರೂಪ ಇಲ್ಲ
ಧೃಡ ಆಕಾರವಂತೂ ಇಲ್ಲವೇ ಇಲ್ಲ
ಯಾಕೆ ತಿಳಿಯದು ಉಂಟಾ ಹೀಗೂ
ಕಾಲನ ಸೆಳವಿನಲಿ ಕೊಚ್ಚಿ ಹೋದಾಗ
ಎಲ್ಲಿ ರೂಪ ಅದಕ್ಯಾವ ಆಕಾರ
ಹುಚ್ಚು ಭ್ರಮೆಯ ಗಾಳಿಯಲಿ ತೇಲಿಸಿ
ಅಂಕೆ ತಪ್ಪಿದವುಗಳನ ಎಳೆದು
ಬಚ್ಚಿಟ್ಟು ಬಿಡಬೇಕೆನಿಸಿತದ್ಯಾಕೋ
ಯಾಕೆ ತಿಳಿಯದು ಉಂಟಾ ಹೀಗೂ
0 ಪ್ರತಿಕ್ರಿಯೆಗಳು