ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿಗೆ ‘ಸೃಷ್ಟಿ ಕಾವ್ಯ ಪುರಸ್ಕಾರ’

೨೦೨೧ನೆಯ ಸಾಲಿನ “ಸೃಷ್ಟಿ ಕಾವ್ಯ ಪುರಸ್ಕಾರ” ಪ್ರಶಸ್ತಿಗೆ ೭೩ ಕವನ ಸಂಕಲನಗಳು ಬಂದಿದ್ದವು. ಆಯ್ಕೆಗೆ ಅಂತಿಮ ಸುತ್ತಿನ ಐದು ಕವನ ಸಂಕಲನಗಳ ತೀರ್ಪುಗಾರರಾಗಿ ನಾಡಿನ ಕವಿಗಳು, ಕಥೆಗಾರರು ಹಾಗೂ ವಿಮರ್ಶಕರಾದ ಡಾ.ಚನ್ನಪ್ಪ ಕಟ್ಟಿ ಹಾಗೂ ಸಿ.ಎಸ್.ಭೀಮರಾಯ ಅವರು ಐದೂ ಕೃತಿಗಳ ಮೌಲ್ಯಮಾಪನದ ನಂತರ ಕವಿಗಳಾದ ಡಾ. ಸದಾಶಿವ ದೊಡಮನಿ ಅವರ “ಇರುವುದು ಒಂದೇ ರೊಟ್ಟಿ” ಕವನ ಸಂಕಲನವನ್ನು ೨೦೨೧ ನೇ ಸಾಲಿನ ರಾಜ್ಯ ಮಟ್ಟದ “ಸೃಷ್ಟಿ ಕಾವ್ಯ ಪುರಸ್ಕಾರ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಅವರ ಈ ಕವನ ಸಂಕಲನಕ್ಕೆ ೩೦೦೦ ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಅಂತಿಮವಾಗಿ ತೀವ್ರ ಸ್ಪರ್ಧೆಯೊಡ್ಡಿದ ಕೃತಿಗಳೆಂದರೆ..      

೨.ದೇವರಿಲ್ಲದ ಸಾಕ್ಷಿಗೆ ರುಜು    
ಬಿದಲೋಟಿ ರಂಗನಾಥ್ –  
೩.ಶಯ್ಯಾಗೃಹದ ಸುದ್ದಿಗಳುಡಾ.
ಶೋಭಾ ನಾಯಕ
೪. ನಗುವಿಗೊಂದು ಧನ್ಯವಾದ    
ಶ್ರೀದೇವಿ ಕೆರೆಮನೆ    
೫. ಬಾ ಭವಿಷ್ಯದ  ನಕ್ಷತ್ರಗಳಾಗೋಣ     
ತೇಜಾವತಿ ಎಚ್.ಡಿ.

೨೦೨೧ ನೇ ಸಾಲಿನ ರಾಜ್ಯ ಮಟ್ಟದ “ಸೃಷ್ಟಿ ಕಾವ್ಯ ಪುರಸ್ಕಾರ”ವಿಜೇತರಿಗೆ ಹಾಗೂ ಪ್ರಶಸ್ತಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೆ ಹಾಗೂ ತೀರ್ಪುಗಾರರಿಗೆ ಅಭಿನಂದನೆಗಳು..

‍ಲೇಖಕರು Admin

11 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading