ಸದಾಶಿವ್ ಸೊರಟೂರು ಹೊಸ ಕವಿತೆ- ರೊಟ್ಟಿಯ ಸದ್ದು…

ಸದಾಶಿವ್ ಸೊರಟೂರು

ಬಾಲ್ಯದ ಪ್ರತಿ ಬೆಳಗು
ಅವ್ವ ಬಡಿಯುವ
ರೊಟ್ಟಿಯ ಸದ್ದಿನಿಂದಲೇ ಆದದ್ದು..

ಕೊಣಮಿಗಿಯಲಿ ಪಟ್ ಪಟ್
ಏಟು ತಿನ್ನುತ್ತಾ ವೃತ್ತದ ರೂಪ
ಪಡೆದ ರೊಟ್ಟಿಗೆ
ನಾಲ್ಕು ಹರಳು ಉಪ್ಪು ಹಾಕಿದ
ಕೆಂಪು ಮೆಣಸಿನಕಾಯಿಯ
ಅಚ್ಚಖಾರದ ಹಿಂಡಿ ಕಾದಿರುತ್ತಿತ್ತು..

ರೊಟ್ಟಿ ಬಡಿಯದ ದಿನ
ಸೂರ್ಯ ಮಂಕು
ಒಲೆಗೆ ಬಿದ್ದ ನೀರೆ
ಹೊಟ್ಟೆಗೂ-ನಮ್ಮೆಲ್ಲರ
ತಟ್ಟೆಗೂ

ಹಸಿದ ಹೊಟ್ಟೆಯಲಿ
ತುಂಬಾ ಉಂಡಂತೆ
ನಟಿಸಿದ ದಿನಗಳಲ್ಲಿ
ರೊಟ್ಟಿ ಬಡಿಯುವ ಸದ್ದು ನನ್ನನ್ನು
ತೊರೆದು ಹೋಯಿತು
ಅನಿಸಿ,
ಬೀದಿ ಬೀದಿಯಲಿ ಅದನ್ನೆ ಹುಡುಕಿ
ಅಲೆಯುತ್ತಿದ್ದೆ

ರೊಟ್ಟಿ ಬಡಿಯುವ ಸದ್ದು ಹುಡುಕಿ
ಅಲೆದು ಅಲೆದು
ಸರಿಯಾದ ವಿಳಾಸ ತಲುಪಿದೆ
ಅನಿಸುತ್ತೆ ಈಗೀಗ
ಅವ್ವ ಒಂದೂ ಮಾತಾಡದೇ ಬರೀ
ರೊಟ್ಟಿ ಬಡಿಯುತ್ತಾ ನನ್ನ
ನಾಳೆಗಳನ್ನು ಹೇಗೆ ಕಟ್ಟಿದಳೊ..!
ಬದುಕು ಈಗ ವೃತ್ತಾಂತಗಳ
ಕಟ್ಟಿಕೊಂಡ ವೃತ್ತ

ಜಗತ್ತು ಸದ್ದುಗಳಿಂದಲೇ ತುಂಬಿದೆ
ಎಲ್ಲರೂ ಒಂದೊಂದು
ಸದ್ದು ಹುಡುಕುತ್ತಾ ಹೊರಟಿದ್ದಾರೆ
ದೇವರೆ,
ಅವರಿಗೆ ಅವರವರ ಸದ್ದುಗಳು
ದಾರಿಯ ಕೊನೆಯಲಾದರೂ ಸಿಗಲಿ
ಸದ್ದಿಗೆ ಹಸಿದ ಗೇಣು ಹೊಟ್ಟೆಗೆ
ಒಂದು ತುಣುಕಾದರೂ ದಕ್ಕಲಿ..

‍ಲೇಖಕರು Admin

July 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: