ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸತ್ಯಮೇವ ಜಯತೆ’ ಬಗ್ಗೆ ಕೆ ವಿ ತಿರುಮಲೇಶ್

ಕೆ.ವಿ. ತಿರುಮಲೇಶ್

ಅಮೀರ್ ಖಾನ್ ಅವರ ಎರಡನೇ ಕಂತು ಸಹಾ ನಮ್ಮ ಸಮಾಜಕ್ಕೆ ಅತ್ಯಗತ್ಯದ ವಿಷಯವನ್ನು ಒಳಗೊಂಡಿದೆ. ಈ ಸರಣಿಯನ್ನು ಯೋಜಿಸಿದ್ದು ಅಮೀರ್ ಖಾನ್ ಆದರೂ ಅವರು ಹಲವು ಚಿಂತಕರ ಸಹಾಯ ಪಡೆದುಕೊಂಡಿದ್ದಾರೆ ಎನ್ನುವುದು ಇದರ ಋಜುತ್ವವನ್ನು ಮತ್ತು ಮಾನ್ಯತೆಯನ್ನು ಹೆಚ್ಚಿಸಿದೆ. ಅಮೀರ್ ಮಕ್ಕಳಿಗಾಗಿ ನಡೆಸಿಕೊಟ್ಟ ಚಿಕ್ಕ ವರ್ಕ್ ಶಾಪ್ ಅಂತೂ ಎಲ್ಲರೂ ಶ್ಲಾಘಿಸುವಂಥದು. ಇಲ್ಲಿ ನನ್ನ ಒಂದೆರಡು ಸೂಚನೆಗಳೆಂದರೆ:

೧. ದೇಹದ ಅಪಾಯದ ಜಾಗಗಳಲ್ಲಿ ಬಾಯಿ ಕೂಡಾ ಒಂದು; ಆದ್ದರಿಂದ ಮೂರರ ಜತೆ ಇದನ್ನೂ ಸೇರಿಸಿದರೆ (ಸೇರಿಸಲೇ ಬೇಕು) ನಾಲ್ಕು ಆಗುತ್ವೆ.

೨. ಶಾಲೆಗಳಲ್ಲೂ ಈ ತರದ ವರ್ಕ್ ಶಾಪುಗಳನ್ನ ನಡೆಸಲು ಏರ್ಪಾಡು ಮಾಡಬೇಕು. (ದುರ್ದೈವವೇ! ಕೆಲವು ಶಾಲಾ ಅಧ್ಯಾಪಕರೇ ಪೆಡೋಫೈಲ್ಸ್!)

೩. ಪಠ್ಯ ಪುಸ್ತಕಗಳಲ್ಲಿ ಈ ತರದ ವಿಷಯಗಳನ್ನು ಸೇರಿಸಿ ಪಾಠದಲ್ಲಿ ಅಳವಡಿಸುವುದು ಅಗತ್ಯ.

(ಇದೇ ತರದ ವರ್ಕ್ ಶಾಪುಗಳನ್ನು ಎಳೆ ಹರೆಯದ ಸ್ತ್ರೀಯರಿಗೋಸ್ಕರವೂ ನಡೆಸುವುದು ಸಾಧ್ಯ: ಅತ್ಯಾಚಾರಿಯೊಬ್ಬನನ್ನು ಎದುರಿಸುವುದು ಹೇಗೆ? )

ಇದನ್ನು ನೇರ ಅಮೀರ್ ಖಾನಿಗೇ ತಿಳಿಸೋಣವೆಂದು ವೆಬ್ ಸೈಟಿಗೆ ಹೋದರೆ ಅದು ಅದ್ಭುತ ಸಂಖ್ಯೆಯ ಪ್ರತಿಸ್ಪಂದನಗಳಿಂದಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ತಿಳಿದುಬರುತ್ತದೆ. ಆದರೆ ಜನಾಭಿಪ್ರಾಯ ರೂಪಿಸುವುದೂ ಒಳ್ಳೆಯ ಕೆಲಸ ಎಂದುಕೊಂಡು ಈ ಪತ್ರ ಅವಧಿಗೆ ಬರೆಯುತ್ತಿದ್ದೇನೆ.

 

 

 

‍ಲೇಖಕರು G

14 May, 2012

1 Comment

  1. ratna k

    super program and super review

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading