ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸತ್ಯಕಾಮ'ರು ಹೀಗಿದ್ದರು..

ಅಚಿತ್ಯದ ಮೇಲೆ ಸಾಧಿಸುವಂತಹ ವಿಜಯ

ವಸಂತ ದಿವಾಣಜಿ

ಮಾತಿನಿಂದ ಬರಹಕ್ಕೆ: ವೀಣಾ ಬನ್ನಂಜೆ

(ಕುಸುಮಾಕರ ದೇವರಗೆಣ್ಣೂರ ಎಂದೇ ಖ್ಯಾತರಾದ ವಸಂತ ದಿವಾಣಜಿ ಸತ್ಯಕಾಮರ ಪರಮಾಪ್ತರು. ಅವರ ಜತೆ ಶ್ಮಶಾನದಲ್ಲಿಯೂ ಕುಳಿತು ಕಾಲಕಳೆದವರು. `ತಂತ್ರಯೋನಿ’ ಬಿಡುಗಡೆ ಸಂದರ್ಭ 1997 ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ ಮಾಡಿದ ಭಾಷಣದ ಬರೆಹರೂಪ ಇದು)
ನಾಗರನಂಜು ಕಾದಂಬರಿಯಲ್ಲಿ ಬಂದಂತಹ ವಿದ್ಯಾಥರ್ಿ ನನಗೆ ಸತ್ಯಕಾಮರೇ ಆಗಿ ಕಾಣಿಸುತ್ತ್ತಾರೆ. ಅವರ ಸಾಹಿತ್ಯದ ದೃಷಿಯೆಂದರೆ ‘ಪ್ರತಿಯೊಂದು ಕೃತಿ ಅಠಟಿಡಣಜಣ ಠಜಿ ಣಟಿಛಿಠಟಿಛಿಠಣ ಆಗಬೇಕು. ಅಚಿತ್ಯದ ಮೇಲೆ ಸಾಧಿಸುವಂತಹ ವಿಜಯ ಆಗಬೇಕು. ಅವರ ಒಂದೊಂದು ಕೃತಿಯೂ ಅಂತಹ ವಿಜಯವೇ.
ನಾಳೆ ಇಂತಹ ಹುಡುಗ ಹೇಗೆ ತಯಾರಾಗುತ್ತಾನೆ ಎನ್ನುವುದರ ಕುರಿತು ನಾನು ಅವರನ್ನು ಪ್ರಶ್ನಿಸಿದ್ದೆ. ಸತ್ಯಕಾಮರೇ ಅದಕ್ಕೆ `ನನಗೆ ತಿಳ್ಕೊಳೋ ಅಪೇಕ್ಷಾ ಭಾಳ ಅದ’ ಎಂದು ಹೀಗೆ ಹೇಳಿದ್ದರು: ‘ಇದು ಭಾಳ ಮೂರ್ಖತನದ ಮಾತು, ನೀನು ನನ್ನನ್ನು ತಿಳ್ಕೊಳ್ಳಕ್ಕೆ ಕಷ್ಟಪಡೋ ಬದಲು ನಿನ್ನನ್ನು ತಿಳ್ಕೊಳ್ಳಕ್ಕೆ ಕಷ್ಟಪಟ್ರೆ ಏನಾದ್ರೂ ಒಳ್ಳೇದಾದೀತು. ನನ್ನನ್ನು ತಿಳ್ಕೊಳ್ಳೋ ಹವ್ಯಾಸ ಬಿಡು.’
ಆದರೂ ನಾನು ಅವರ ಬೆನ್ನುಬಿಡಲಿಲ್ಲ. ಯಾಕೆಂದರೆ ಅವರ ವ್ಯಕ್ತಿತ್ವ ರೂಪುಗೊಂಡ ರೀತಿ ನಮ್ಮ ದೇಶದ ಭವಿತವ್ಯವನ್ನು ಬದಲಾವಣೆ ಮಾಡಬಹುದು ಎಂದು ನನಗೆ ಅತ್ಯಂತ ತೀವ್ರವಾಗಿ ಅನಿಸಿದೆ. ನಾನು ಒಂದು ಸಲ ಅವರನ್ನು ಕೇಳಿದೆ, ‘ಏನು ಸರ್, ನಾವು ನೀವು ಒಂದೇ ಊರಲ್ಲಿ ಹುಟ್ಟೀವಿ, ಒಂದೇ ನೀರು ಕುಡಿದೇವಿ, ಒಂದೇ ಆಕಾಶ, ಒಂದೇ ಗಾಳಿ ಹಿಂಗಿದ್ದೂ ನೀವು ಹಿಂಗ್ಯಾಕಾದ್ರಿ, ನಾನು ಹಿಂಗ್ಯಾಕಾದೆ?’ ಅವರು ಹೇಳಿದ ಮಾತು ಬಹಳ ಮಹತ್ವದ್ದು: ‘ನೋಡು ತಮ್ಮಾ, ನಾನು ನೀನು ಒಂದೇ ಊರಾಗ ಹುಟ್ಟಿದ್ರೂ ಒಂದೇ ನೀರು ಕುಡೀಲಿಲ್ಲ, ಒಂದೇ ಗಾಳಿ ಮೂಸಿಲ್ಲ. ಯಾಕೆಂದ್ರ ನಿನ್ನ ಜಗತ್ತ ಬೇರೆ, ನನ್ನ ಜಗತ್ತ ಬ್ಯಾರೆ’ ಎಂದರು. ಅವರು ಭಾಳ ಮೋಜಿನ ಮಾತಾಡುತ್ತಾರೆ. ‘ನಾವಿಬ್ರೂ ಕನ್ನಡ ಮಾತಾಡ್ತೇವೆ, ಇಬ್ರೂ ಒಂದೇ ಶಬ್ದ ಉಪಯೋಗ ಮಾಡ್ತೇವೆ. ಆದ್ರೂ ನಮ್ಮಿಬ್ಬರ ನಡುವೆ ಸಂವಹನ ಇಲ್ಲ’ ಎಂದರು ಒಮ್ಮೆ. ಅಂದರೆ ಅವರೊಂದು ಮಾತು ಭಾಳ ಓದಿ ಹೇಳಿದರು ‘ದೇವೀಂ ವಾಚಂ ಅಯನಂತದೇವಾಃ….’ ನನಗೆ ಸಂಸ್ಕೃತ ಬಹಳ ಬರೋದಿಲ್ಲ. ಅವರಿಂದ ಸ್ವಲ್ಪ ಕಿವಿಮೇಲೆ ಬಿದ್ದದ್ದು. ಅವರೇನು ಹೇಳಿದರು ಎಂದರೆ `ಮೊದಲು ನಾನು ಬರೀಬೇಕಾದರ್ರೆ ನನ್ನ ಭಾಷೆಯನ್ನು ನಾನು ಸೃಷ್ಟಿ ಮಾಡಿಕೊಳ್ಳಬೇಕು. ಈಗ ಉದಾಹರಣಾರ್ಥವಾಗಿ ನಾನು ಣಡಿಚಿರಣ ಎಂದೆ. ಅದನ್ನು ನೀನು ಏನು ತಿಳ್ಕೋತೀಯೋ ಯಾರಿಗೆ ಗೊತ್ತು. ನಾನೇನೋ ಅಂದೆ ನೀನೇನೋ ತಪ್ಪು ತಿಳ್ಕೊಳ್ತಿಯ. ಆದ್ದರಿಂದ ನನ್ನ ನಿನ್ನ ನಡುವೆ ಎಲ್ಲರ ನಡುವೆಯೂ ಸಂವಹನ ಉಂಟಾಗುವುದು ಬಹಳ ಕಠಿಣ. ಯಾಕೆಂದ್ರೆ ನಾನಿರೋದು ಯುಕ್ಲೀಡನ ಸಮತಲದ ಮೇಲೆ ಠಿಚಿಛಿಜ ರಜಠಟಚಿಣಡಿಥಿ ಒಳಗೆ’. ಅವರ ಯಾವ ಶಬ್ದವೂ ನನಗೆ ಸರಿಯಾದ ಅರ್ಥವನ್ನು ಕೊಡುತ್ತಿರಲಿಲ್ಲ.
ಗಲಗಲಿಯ ಹುಡುಗರಿಗೆ ಅವರ ಮೇಲೆ ಬಹಳ ಪ್ರೀತಿ. ಅವರು ಪ್ರಶ್ನೆ ಕೇಳಿದರು `ನಿಮಗೆ ಸತ್ಯಕಾಮರ ಪುಸ್ತಕ ತೀಳೀತಾವೇನು? ಎಂದು. ನಾನು ಸ್ವಲ್ಪ ಅಹಂಕಾರದಿಂದ ಇದ್ದೆ. ಅವರಿಗೆಲ್ಲ `ತಿಳಿಯೋದಿಲ್ಲ’ ಅಂದರೆ ಅಭಿಮಾನ. ನಾನು `ತೀಳೀತದೆ’ ಎಂದೆ. ನಾನು ಸತ್ಯಕಾಮರ ಪುಸ್ತಕ ತೀಳೀತದ ಎಂತ ಯಾಕೆಂದೆ? ಆ ವಿಚಾರ ಆಮೇಲೆ ತಿಳಿಯಿತು. ಇವರ ಕಾದಂಬರಿ ತಿಳಿಯೋದು ಬಹಳ ಕಷ್ಟ. ಯಾಕಂದರೆ ಅವರು ಒಂದು ಮಾತು ಹೇಳಿಳದ್ದರು: ‘ಜ್ಞಾನ ಅಂದ್ರೆ ಸ್ಮೃತಿಯಲ್ಲ’. ಆ ಮಾತಿನ ಅರ್ಥ ನನಗೆ ಆಗಲಿಲ್ಲ. ಅದೇ ರೀತಿ ಹೇಳಿದ ಮಾತು ‘ಅನುಭವ ಕಾಲವಶ ಅಲ್ಲ’. ನನಗೆ ಗೊಂದಲವಾಯ್ತು. ಈ ಮಾತಿನ ಅರ್ಥ ಏನೆಂದು ಸಣ್ಣ ಉದಾಹರಣೆ ಕೊಟ್ಟು ಹೇಳಿದರು: ‘ನನ್ನ ಸುತ್ತಮುತ್ತ ಜನ ಇದ್ದಾರಲ್ಲ, ಬಾಯಿಯಿಂದ `ಅಪಸರ್ಪಂತು’ ಅಂತಾರೆ. ಏನೂ ಆಗೋದಿಲ್ಲ. ಯಾವ ಅನುಭವವೂ ಇಲ್ಲ. ಧೃತಿ, ಉತ್ಸಾಹ ಶಬ್ದಗಳನ್ನು ಆಡ್ತಾರೆ, ಜೀವಂತ ಹೆಣಗಳಂತೆ ಇರ್ತಾರೆ. ಇಂಥವರನ್ನು ಕಂಡು ನನಗೆ ಮಾದರಿ, ಟಠಜಜಟ ಅಂತ ಅನಿಸ್ಲೇ ಇಲ್ಲ. ಎಷ್ಟು ಬೇಗನೆ ಅಷ್ಟು ಬೇಗ ಅವರನ್ನು ಇಳಿಸಿದೆ, ಅಂದ್ರೆ ಅವರನ್ನು ಹೊತ್ತುಕೊಳ್ಳಲೇ ಇಲ್ಲ’.

`ನೀನು ಶಾಲೆಗೆ ಹೋಗಲಿಲ್ಲ ಯಾಕೆ?’ ಅಂದರೆ ಅವರೊಂದು ಮಾತು ಹೇಳಿದರು: ‘ಶಾಲೆಗೆ ಹೋಗೋದು ಅಂದರೆ ಅದು ಗುಲಾಮಗಿರಿ’ಎಂದು. ಸತ್ಯಕಾಮರಿಗೆ ಸ್ವಾತಂತ್ರ್ಯ ಅಂತರಂಗದ ಅಗತ್ಯವಾಗಿ ಬಂತು, ‘ನನಗೆ ಯಾವ ಸ್ವಾತಂತ್ರ್ಯ ಬಹಳ ಅಗತ್ಯ ಅಂತ ಯಾರೂ ಹೇಳಲಿಲ್ಲ. ಆದರೆ ನಿಮಗೆ ಯಾರೋ ಬಂದು ಒಬ್ಬ ಮನುಷ್ಯ ಬೆಳೆಯೋದಿಕ್ಕೆ ಸ್ವಾತಂತ್ರ್ಯ ಅವಶ್ಯಕ ಅಂದ್ರು. ನೀನು ಏನು ಮಾಡ್ಕೊಂಡೆ, ನಿನಗೆ ಸ್ವಾತಂತ್ರ್ಯದ ಅವಶ್ಯಕತೆ ಇಲ್ಲದಾಗ ಯಾರೋ ಹೇಳಿದ ಸ್ವಾತಂತ್ರ್ಯವನ್ನು ನಿನ್ನ ತಲೆಯ ಮೇಲೆ ಹೊತ್ತುಕೊಂಡು ಭಾರದಿಂದ ಬಳಲ್ತಾ ಇದ್ದಿ. ಆದ್ದರಿಂದ ನೀನು ಬದುಕ್ತಾ ಇಲ್ಲ. ನನಗೆ ಸ್ವಾತಂತ್ರ್ಯ ಆಂತರಿಕ ಅವಶ್ಯಕತೆ ಆಗಿಬಿಡ್ತು.’
ನಮ್ಮ ಶಿಕ್ಷಣವೆಲ್ಲ ಜ್ಞಾನವನ್ನು ಸ್ಮೃತಿ ಮಾಡುವುದರಲ್ಲಿದೆ. ಸಂಕಲ್ಪ ಬಲದ ಮೇಲೆ ಬಹಳ ಭಾರ ಇಟ್ಟವರು. ಪ್ರಭು ಸಂಹಿತೆ ಬೇಕು ಎಂದರು. ಯಾವುದು ಕೃತಿ ಆಗುವುದಿಲ್ಲವೋ ಆ ಮಾತನ್ನು ನಾನು ಎಂದೂ ಆಡುವುದಿಲ್ಲ. ಒಮ್ಮೆ ನಾನು ಪಾಂಡಿಚೆರಿಗೆ ಹೋಗೋಣ ಎಂದೆ. ನನ್ನ ಬಳಿ ಹಣ ಇತ್ತು. ಅವರು ನಾನೂ ಹೋಗಬೇಕು ಎಂಬ ಸಂಕಲ್ಪ ಮಾಡಿದರೆ ನನಗೆ ಯಾವುದು ಅಡ್ಡಬರುವುದಿಲ್ಲ. ಇದು ಮನುಷ್ಯತ್ವ. ಅಂದರೆ ನಮ್ಮ ಸಂಕಲ್ಪಕ್ಕೆ ಯಾವ ಅಡ್ಡವೂ ಬರಬಾರದು. ಯಾವುದು ಕೃತಿಯಾಗದೋ ಆ ಮಾತನ್ನು ಆಡಬಾರದು.
ಸಂಕಲ್ಪದ ಬಗ್ಗೆ ಮಾತಾಡ್ತಾ ಅವರು `ನೋಡು ಈಗ ನನಗೆ ಬೆಣ್ಣೆ ಬೇಕು ಅಂತ ಸಂಕಲ್ಪ ಮಾಡಿದರೆ ಬೆಣ್ಣೆ ಬರಲೇಬೇಕು. ಆದರೆ ಸಂಕಲ್ಪದ ಹಿಂದೆ ಲೋಲುಪತೆ ಇದ್ದರೆ ಅದು ಸಂಕಲ್ಪ ಆಗುವುದಿಲ್ಲ ಉಡಿಜಜಜ ಆಗ್ತದೆ. ಉಡಿಜಜಜ ಅನ್ನೋದು ಎಂದೆಂದೂ ಸಫಲ ಆಗೋದಿಲ್ಲ’ ನಿಜವಾಗಿ ನಾನು ಅನೇಕ ವಿಶ್ವವಿದ್ಯಾಲಯಗಳಲ್ಲಿ ಕಲಿತದಕ್ಕಿಂತ ಹೆಚ್ಚು ಅವರಿಂದ ಕಲಿತಿದ್ದೇನೆ.
`ತರುಣರನ್ನು ಆಯ್ದು ಆ ಹುಡುಗರಿಗೆ ಸಂಕಲ್ಪ ಶಕ್ತಿಯ ಕುರಿತು ನೀವು ಯಾಕೆ ತಿಳಿಹೇಳಬಾರದು?’ ಎಂದು ಕೇಳಿದೆ. ಅವರು, ‘ನೋಡು ಹಸಿವು ಇದ್ದರೆ ಅಂಥದೊಂದು ಹಸಿವೆಗೆ ಆಲಂಬನ ತಾನೇ ದೊರಕುತ್ತದೆ’ ಎಂದುಬಿಟ್ಟರು. ಅಂದರೆ ತರುಣರಿಗೆ ಆ ಹಸಿವು ಹುಟ್ಟಬೇಕು, ಆಗ ತಾನು ಅಲ್ಲಿ ಸಿದ್ಧ ಎಂಬ ಸೂಚ್ಯ ಉತ್ತರ ಕೊಟ್ಟರು. ಒಮ್ಮೆ ನನ್ನ ಮಗ ಅವರಿಗೆ ‘ನಿಮಗೆ ಭಯ ಭೀತಿ ಇಲ್ಲವೇ?’ ಪ್ರಶ್ನೆ ಕೇಳಿದ. ‘ನಿಮಗೆ ಭಯ ಇದ್ರೇ ನೀವಾಗ ಏನು ಮಾಡಿದಿರಿ, ಇದನ್ನು ತಗೊಂಡು ಏನು ಮಾಡ್ತೀರಿ? ನನಗೆ ಭಯ ಇದೆಯೇ ಅದರ ನಿವಾರಣೆಗೆ ಏನು ಮಾಡಿದೆ ಅಂತ ಈ ಹುಡುಗರು ಏಕೆ ಯೋಚಿಸೋದಿಲ್ಲ’ ಎಂದು ಕೇಳಿದರು. ಅಂದರೆ ತನ್ನನ್ನು ತಾನು ನೋಡುವುದು ಹುಡುಗರಲ್ಲಿ ಬೆಳೆಯಬೇಕು ಎಂಬುದು ಅವರ ಮಾತಿನಲ್ಲಿತ್ತು.
ಒಮ್ಮೆ ನಾನವರನ್ನು `ಪಾಪ ಪುಣ್ಯ, ಸ್ವರ್ಗ ನರಕ ಇದೆಯೇ? ಎಂದು ಕೇಳಿದೆ. `ನಾನು ಪಾಪ ಒಪ್ತೇನೆ. ಈರುಳ್ಳಿ ತಿನ್ನೋದು, ಇಂಥ ಪಾಪಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ಮನುಷ್ಯ ತನ್ನ ಆತ್ಮಗೌರವವನ್ನು ಮಣ್ಣಾಗಿ ಮಾಡ್ತಾನಲ್ಲ ಅದರಂತಹ ಪಾಪ ಯಾವುದೂ ಇಲ್ಲ. ದೈನ್ಯ ಒಂದು ಪಾಪ, ಕ್ಷುದ್ರತೆ ಒಂದು ಪಾಪ. ಇದಕ್ಕಿಂತ ಬೇರೆ ಪಾಪವನ್ನು ನಾನು ನಂಬುವುದಿಲ್ಲ’ ಎಂದರು.
ನಾನು ಮೊದಲ ಸಲ ಅವರನ್ನು ಭೇಟಿಯಾದಾಗ ಅವರು ಬಹಳ ದೊಡ್ಡವರ ಬಗ್ಗೆ ಬಹಳ ಲಘುವಾಗಿ ಮಾತಾಡ್ತಿದ್ರು. ಆ ನಿರ್ಭಯತೆ ನನಗೆ ಸೇರುತ್ತಿತ್ತು. ‘ನನ್ನ ತಾಯಿಗೆ ಕಣ್ಣೇ ಕಾಣಿಸೋದಿಲ್ಲ ಮಂದ ಆಗ್ತಿದೆ’ ಎಂದೆ. ‘ಇದ್ದಾಗ ನೀ ಅದರಾಗ ಏನು ಬಹಳ ಮಾಡಿದಿ? ಮತ್ತೀಗ ಹೋತಂದ್ರ ಅದ್ರಾಗ ಆಗೋದೇನದ’ ಎಂದರು. ಬಹಳ ಮೋಜಿನ ಮಾತದು.
ಸಂಕಲ್ಪ ಮಾಡಿದಿರಿ, ಅದರಲ್ಲಿ ಲೋಲುಪತೆ ಬೇಡ, ಲೋಲುಪರಾದರೆ ಅದು ದುರಾಸೆಯಾಗುತ್ತದೆ. ಕೃತಿಯಾಗದ ಯಾವ ಮಾತೂ ಆಡಬೇಡಿರಿ ಇದು ಅವರ ಸಂದೇಶ ಎಂದೇ ನಾನು ಭಾವಿಸುತ್ತೇನೆ.

10.1.1995ರಂದು ಶಿವಮೊಗ್ಗದಲ್ಲಿ ಮಾಡಿದ ಭಾಷಣ

 
 
 

‍ಲೇಖಕರು G

16 October, 2013

3 Comments

  1. Prabhakar Nimbargi

    arthavaagada manushya endu tiliyoke prayatna maadade iruvadkke aaguttadeye? tumba nigoodha vyaktitwa, barahagalanteye!

  2. Swarna

    ಕೃತಿಯಾಗದ ಯಾವ ಮಾತೂ ಆಡಬೇಡಿರಿ..ನಾವಿಂದು ಮರೆತ ಮಾತು.
    ಹಂಚಿಕೊಂಡದ್ದಕ್ಕಾಗಿ ವಂದನೆಗಳು

  3. sunil Rao

    Beautiful
    Thanks for sharing

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading